‘ಆಪರೇಷನ್ ಸಿಂದೂರ್’ನ ಉದ್ದೇಶ ಯುದ್ಧವಾಗಿರಲಿಲ್ಲ, ಬದಲಿಗೆ ಭಯೋತ್ಪಾದಕ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿತ್ತು! Operation Sindoor Parliament Rajnath Singh

ಸಂಸತ್ತಿನಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿಕೆ

ನವದೆಹಲಿ – ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ನಡೆಸಿದ ‘ಆಪರೇಷನ್ ಸಿಂದೂರ್’ ಅನ್ನು ನಿಲ್ಲಿಸಿತು; ಏಕೆಂದರೆ ನಮ್ಮ ಸೇನೆಯು ನಿಗದಿಪಡಿಸಿದ ಗುರಿಯನ್ನು ಸಾಧಿಸಿತ್ತು. ‘ಭಾರತವು ಒತ್ತಡದಿಂದ ಈ ಕಾರ್ಯಾಚರಣೆಯನ್ನು ನಿಲ್ಲಿಸಿತು’ ಎಂದು ಹೇಳುವುದು ತಪ್ಪಾಗಿದೆ. ಆಪರೇಷನ್ ಸಿಂದೂರ್‌ ನ ಉದ್ದೇಶ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸುವುದಾಗಿತ್ತು, ಯುದ್ಧ ಮಾಡುವುದಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಪಾಕಿಸ್ತಾನವು ಮತ್ತೆ ತಂಟೆ ಮಾಡಿದರೆ, ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರು ಸಂಸತ್ತಿನಲ್ಲಿ ಆಪರೇಷನ್ ಸಿಂದೂರ್ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಈ ವಿಷಯದ ಬಗ್ಗೆ 16 ಗಂಟೆಗಳ ಕಾಲ ಚರ್ಚೆ ನಡೆಯಲಿದೆ.

ಲೋಕಸಭೆಯಲ್ಲಿ ರಾಜನಾಥ ಸಿಂಗ ಈ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಅವರು, ಪಾಕಿಸ್ತಾನವು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು; ಆದರೆ ನಾವು ಈ ದಾಳಿಯನ್ನು ಹಿಮ್ಮೆಟ್ಟಿಸಿದ್ದೇವೆ. ಪಾಕಿಸ್ತಾನವು ಭಾರತದಲ್ಲಿ ಯಾವುದೇ ಸ್ಥಳದಲ್ಲಿ ದಾಳಿ ಮಾಡಲು ಸಾಧ್ಯವಾಗಲಿಲ್ಲ. ಭಾರತೀಯ ಸೇನೆಯು ಶತ್ರುವಿನ ಪ್ರತಿಯೊಂದು ತಂತ್ರವನ್ನೂ ವಿಫಲಗೊಳಿಸಿತು. ಹಿಂದಿನ ಸರಕಾರಗಳು 2016 ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಏರ್‌ ಸ್ಟ್ರೈಕ್ ನಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಇಂದು ಭಾರತವು ಭಯೋತ್ಪಾದನೆಯ ಮೂಲಕ್ಕೆ ಹೋಗಿ ಅದನ್ನು ಕೊನೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ಅದನ್ನು ನಾವು ಕೈಗೊಳ್ಳುತ್ತೇವೆ. ನಮ್ಮ ಏಕತೆಯೇ ಅತಿ ದೊಡ್ಡ ಶಕ್ತಿ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಭಾರತವು ತನ್ನ ಮಾತೃಭೂಮಿಯನ್ನು ರಕ್ಷಿಸಲು ದೃಢವಾಗಿದೆ ಎಂಬ ಸಂದೇಶ ರವಾನೆಯಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಆಪರೇಷನ್ ಸಿಂದೂರ್’ ಮೂಲಕ ಪಾಕಿಸ್ತಾನವನ್ನು ನಾಶಪಡಿಸಬೇಕಿತ್ತು, ಅದನ್ನು 4 ಭಾಗಗಳಾಗಿ ವಿಭಜಿಸಬೇಕಿತ್ತು, ಇದೇ ಭಾರತೀಯರ ನಿರೀಕ್ಷೆಯಾಗಿತ್ತು. ಸರಕಾರ ಇದನ್ನು ಪರಿಗಣಿಸಬೇಕಿತ್ತು ಎಂದು ಈಗ ಹೇಳಬೇಕಾಗಿದೆ! ಏಕೆಂದರೆ, ಪಾಕಿಸ್ತಾನವು ಭಾರತದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದಿಲ್ಲ, ಹಿಂದೂಗಳನ್ನು ಕೊಲ್ಲುವುದಿಲ್ಲ, ಖಲಿಸ್ತಾನಿ ಪ್ರವೃತ್ತಿಗಳಿಗೆ ಸಹಾಯ ಮಾಡುವುದಿಲ್ಲ ಎಂದು ಯಾರೂ ಖಾತರಿ ನೀಡಲು ಸಾಧ್ಯವಿಲ್ಲ, ಇದು ವಸ್ತುಸ್ಥಿತಿ ಆಗಿದೆ!