‘ಓಪನ್ ಎಐ’ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್ ಮನ್ ಅವರಿಂದ ಸ್ಪಷ್ಟನೆ!
(ಚಾಟ್ ಜಿಪಿಟಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆಗಿರುವ ಒಂದು ಜಾಲತಾಣವಾಗಿದೆ)

ನವದೆಹಲಿ – ಪ್ರಸ್ತುತ ಎಐ ತಂತ್ರಜ್ಞಾನಕ್ಕೆ ಯಾವುದೇ ಸ್ಪಷ್ಟ ಕಾನೂನು ಅಥವಾ ನೀತಿ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಚಾಟ್ ಜಿಪಿಟಿಗೆ ಒದಗಿಸಲಾದ ಸೂಕ್ಷ್ಮ ಮಾಹಿತಿಗೆ ಯಾವುದೇ ಕಾನೂನು ಗೌಪ್ಯತೆ ಅನ್ವಯಿಸುವುದಿಲ್ಲ ಎಂದು ‘ಓಪನ್ ಎಐ’ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್ ಮನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅವರು ಯೂಟ್ಯೂಬ್‌ನ ‘Theo Von’ ಅವರ ಪಾಡ್ ಕಾಸ್ಟ್ ‘ದಿಸ್ ಪಾಸ್ಟ್ ವೀಕೆಂಡ್’ ಈ ಕಾರ್ಯಕ್ರಮದಲ್ಲಿ ‘ಎಐ ಮತ್ತು ಕಾನೂನು’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಕಾನೂನು ರಕ್ಷಣೆಯ ಖಾತರಿ ಇಲ್ಲ!
ಸ್ಯಾಮ್ ಆಲ್ಟ್ ಮನ್ ಅವರು, ಜನರು ಚಾಟ್ ಜಿಪಿಟಿಯಲ್ಲಿ ತಮ್ಮ ಜೀವನದ ಅತ್ಯಂತ ವೈಯಕ್ತಿಕ ವಿಷಯಗಳ ಮಾಹಿತಿಯನ್ನು ಪ್ರಸಾರ ಮಾಡುತ್ತಾರೆ. ವಿಶೇಷವಾಗಿ ಯುವ ಪೀಳಿಗೆಯು ಇದನ್ನು ಚಿಕಿತ್ಸಕ (ಥೆರಪಿಸ್ಟ್) ಮತ್ತು ಜೀವನ ಮಾರ್ಗದರ್ಶಿಯಾಗಿ (ಲೈಫ್ ಕೋಚ್) ಬಳಸುತ್ತಾರೆ. ಇದರಲ್ಲಿ ಸಂಬಂಧಗಳ ಸಮಸ್ಯೆಗಳು, ನಿರ್ಧಾರ ತೆಗೆದುಕೊಳ್ಳುವುದು, ಇತ್ಯಾದಿ ಸಂದರ್ಭಗಳಲ್ಲಿ ಸಲಹೆ ಕೇಳಲಾಗುತ್ತದೆ; ಆದರೆ ಪ್ರಸ್ತುತ ನೀವು ಇದೇ ವಿಷಯಗಳನ್ನು ಒಬ್ಬ ಥೆರಪಿಸ್ಟ್, ನ್ಯಾಯವಾದಿ ಅಥವಾ ವೈದ್ಯರಿಗೆ ಹೇಳಿದರೆ, ಆ ಸಂಭಾಷಣೆಗೆ ಕಾನೂನು ಗೌಪ್ಯತೆಯ ನಿಯಮಗಳು ಅನ್ವಯವಾಗುತ್ತವೆ. ವೈದ್ಯ-ರೋಗಿ ಗೌಪ್ಯತೆ, ನ್ಯಾಯವಾದಿ-ದೂರುದಾರರ ಗೌಪ್ಯತೆ ಇತ್ಯಾದಿ; ಆದರೆ ಚಾಟ್ ಜಿಪಿಟಿ ಜೊತೆ ಸಂಭಾಷಣೆ ನಡೆದಾಗ, ಅಂತಹ ಯಾವುದೇ ಕಾನೂನು ರಕ್ಷಣೆಯ ಖಾತರಿ ಇರುವುದಿಲ್ಲ. ಇದಕ್ಕೆ ಏನು ಪರಿಹಾರ ಕಂಡುಹಿಡಿಯಬೇಕು ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಎಐ ಜೊತೆಗಿನ ಸಂಭಾಷಣೆಗಳಲ್ಲಿ ಗೌಪ್ಯತೆ ಮತ್ತು ಖಾಸಗಿ ಮಾಹಿತಿಯ ರಕ್ಷಣೆಯ ವಿಷಯವನ್ನು ತಕ್ಷಣವೇ ನಿಭಾಯಿಸಬೇಕು. ಒಂದು ವೇಳೆ ನೀವು ಚಾಟ್ ಜಿಪಿಟಿಗೆ ನಿಮ್ಮ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಹೇಳಿದರೆ ಮತ್ತು ನಂತರ ಯಾವುದಾದರೂ ಮೊಕದ್ದಮೆಯಂತಹ ಘಟನೆ ನಡೆದರೆ, ನಾವು ಆ ಸಂಭಾಷಣೆಗಳನ್ನು (ಚಾಟ್ಸ್) ಸಲ್ಲಿಸಬೇಕಾಗಬಹುದು.

ಅಗತ್ಯಬಿದ್ದರೆ ನ್ಯಾಯಾಲಯದಲ್ಲಿ ಮಾಹಿತಿ ಸಲ್ಲಿಸಬಹುದು!
ಚಾಟ್ ಜಿಪಿಟಿ ಮೂಲಕ ಮಾನಸಿಕ ಆರೋಗ್ಯ, ಭಾವನಾತ್ಮಕ ಬೆಂಬಲ ಇತ್ಯಾದಿ ವಿಷಯಗಳ ಮೇಲಿನ ಯಾವುದೇ ಸಂಭಾಷಣೆಗಳು ಖಾಸಗಿಯಾಗಿರುವುದಿಲ್ಲ. ಒಂದು ವೇಳೆ ಯಾವುದೇ ಕಾನೂನು ವಿವಾದ ಉಂಟಾದರೆ, ಈ ಸಂಭಾಷಣೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಬಹುದು ಅಥವಾ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ಅಥವಾ ಸಿಗ್ನಲ್‌ನಂತಹ ಗೌಪ್ಯತೆಯನ್ನು ರಕ್ಷಿಸುವ ಅಪ್ಲಿಕೇಶನಗಳು ಇರುತ್ತವೆ, ಆದರೆ ಚಾಟ್ ಜಿಪಿಟಿಯಲ್ಲಿ ಗೌಪ್ಯತೆ ರಕ್ಷಿಸಲ್ಪಡುವುದಿಲ್ಲ. ಓಪನ್ ಎಐ ನಿಮ್ಮ ಪ್ರತಿಯೊಂದು ಸಂಭಾಷಣೆಯನ್ನು ಓದಬಹುದು. ಈ ಕಂಪನಿಯ ಉದ್ಯೋಗಿಗಳು ಎಐ ಮಾದರಿಗಳನ್ನು ಸುಧಾರಿಸಲು ಮತ್ತು ದುರುಪಯೋಗದ ಮೇಲೆ ನಿಗಾ ಇಡಲು ಅವುಗಳನ್ನು ಬಳಸುತ್ತಾರೆ. ಓಪನ್ ಎಐನ ನೀತಿಯ ಪ್ರಕಾರ, ಚಾಟ್ ಜಿಪಿಟಿಯ ಉಚಿತ ಬಳಕೆದಾರರ ಚಾಟ್‌ಗಳನ್ನು 30 ದಿನಗಳವರೆಗೆ ಸಂಗ್ರಹಿಸಲಾಗುತ್ತದೆ. ಕೆಲವು ಬಾರಿ ಕಾನೂನು ಅಥವಾ ಸುರಕ್ಷತಾ ಕಾರಣಗಳಿಗಾಗಿ ಈ ಚಾಟ್ ಗಳನ್ನು ಹೆಚ್ಚು ಕಾಲ ಸಂಗ್ರಹಿಸಲಾಗುತ್ತದೆ.
ಗೌಪ್ಯತೆಯ ವಿಷಯದಲ್ಲಿ ಪ್ರಸ್ತುತ ಓಪನ್ ಎಐ ಮತ್ತು ‘ದಿ ನ್ಯೂಯಾರ್ಕ್ ಟೈಮ್ಸ್’ ನಡುವೆ ಮೊಕದ್ದಮೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಇದರಿಂದ ಚಾಟ್ ಜಿಪಿಟಿಗೆ ಯಾವ ಮಾಹಿತಿಯನ್ನು ನೀಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದು ಗಮನಕ್ಕೆ ಬರುತ್ತದೆ. ಸ್ಯಾಮ್ ಆಲ್ಟ್ ಮನ್ ಇವರು ಈ ಬಗ್ಗೆ ಚಾಟ್ ಜಿಪಿಟಿಯಲ್ಲಿ ಜನರಿಗೆ ಸ್ಪಷ್ಟವಾಗಿ ಕಾಣುವಂತೆ ಸೂಚನೆಗಳನ್ನು ಬರೆಯಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!