|

ಚಂದೌಲಿ (ಉತ್ತರಪ್ರದೇಶ) – ಜಿಲ್ಲೆಯ ಧಪರಿ ಗ್ರಾಮದಲ್ಲಿ ಅನ್ಸಾರ್ ಎಂಬ ಮುಸ್ಲಿಂ ವ್ಯಕ್ತಿಯ ಮನೆಯ ಆವರಣದಲ್ಲಿ ಅಗೆಯುವಾಗ ಪ್ರಾಚೀನ ಶಿವಲಿಂಗ ಪತ್ತೆಯಾಗಿದೆ. ಈ ಘಟನೆ ಶ್ರಾವಣ ಮಾಸದಲ್ಲಿ ನಡೆದಿರುವುದರಿಂದ, ಇದನ್ನು ಪವಾಡವೆಂದು ತಿಳಿದು ಗ್ರಾಮಸ್ಥರು ತಕ್ಷಣವೇ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಗ್ರಾಮದಲ್ಲಿ ‘ಹರ ಹರ ಮಹಾದೇವ’ ಘೋಷಣೆ ಮೊಳಗುತ್ತಿದೆ. ಹಿಂದೂಗಳು ಅಲ್ಲಿ ದೇವಾಲಯ ನಿರ್ಮಿಸಲು ಬೇಡಿಕೆ ಇಟ್ಟಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅನ್ಸಾರ್ ಅವರು ತಮ್ಮ ಮನೆಯನ್ನು ದೇವಾಲಯಕ್ಕಾಗಿ ಬಿಟ್ಟುಕೊಡಲು ಸಿದ್ಧತೆ ತೋರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತವು, ಸಂಪೂರ್ಣ ಪ್ರಕರಣದ ತನಿಖೆ ನಡೆಸಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಮಾಹಿತಿ ಸಿಗುತ್ತಿದ್ದಂತೆಯೇ, ಹಿರಿಯ ಜಿಲ್ಲಾಧಿಕಾರಿ ಅನುಪಮ ಮಿಶ್ರಾ ಮತ್ತು ಆಡಳಿತ ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ತಾತ್ಕಾಲಿಕ ಕ್ರಮವಾಗಿ, ಶಿವಲಿಂಗವನ್ನು ಹತ್ತಿರದ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ಪುರಾತತ್ವ ಇಲಾಖೆಯು ಶಿವಲಿಂಗ ಎಷ್ಟು ಪ್ರಾಚೀನವಾಗಿದೆ ಎಂಬುದನ್ನು ಪರಿಶೀಲಿಸುತ್ತದೆ ಮತ್ತು ಈ ಸ್ಥಳದಲ್ಲಿ ಪ್ರಾಚೀನ ಧಾರ್ಮಿಕ ಸ್ಥಳವಿತ್ತೇ ಎಂಬುದನ್ನೂ ಸಹ ಪರಿಶೀಲಿಸಲಾಗುತ್ತದೆ ಎಂದು ಮಿಶ್ರಾ ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!