ಮಧ್ಯಪ್ರದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಅಮಾನತು! : MP Smuggler Constable

ಆರೋಪಿ ಪೊಲೀಸ್ ಕಾನ್‌ಸ್ಟೆಬಲ್ ರಾಜೇಂದ್ರ ಸಿಂಗ್ (ಎಡ)

ನೀಮಚ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಪೊಲೀಸ್ ಕಾನ್‌ಸ್ಟೆಬಲ್ ರಾಜೇಂದ್ರಸಿಂಗ್ ಅವರು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. 30 ಕೆ.ಜಿ. ‘ಡೋಡಾಚುರಾ’ ಎಂಬ ಮಾದಕ ವಸ್ತುವನ್ನು ಸಾಗಿಸುತ್ತಿದ್ದಾಗ ಅವರನ್ನು ರೆಡ್ ಹ್ಯಾಂಡಾಗಿ ಹಿಡಿಯಲಾಗಿದೆ. ಈ ಮಾಹಿತಿ ಹೊರಬರುತ್ತಿದ್ದಂತೆಯೇ, ನೀಮಚ್ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ ಜೈಸ್ವಾಲ್ ಅವರು ಸಂಬಂಧಪಟ್ಟ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಿದ್ದು, ಸೇವೆಯಿಂದ ವಜಾಗೊಳಿಸುವ ಸಾಧ್ಯತೆಯನ್ನೂ ವ್ಯಕ್ತಪಡಿಸಿದ್ದಾರೆ.

1. ಪ್ರಾಥಮಿಕ ತನಿಖೆಯಲ್ಲಿ, ಪೊಲೀಸ್ ಕಾನ್‌ಸ್ಟೆಬಲ್ ರಾಜೇಂದ್ರಸಿಂಗ್ ಅನೇಕ ದಿನಗಳಿಂದ ಈ ಅಕ್ರಮ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. (ಇದು ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ಹೇಗೆ ತಿಳಿಯಲಿಲ್ಲ? – ಸಂಪಾದಕರು)

2. ರಾಜೇಂದ್ರಸಿಂಗ್ ಅವರು ಭಾಂಗಿ ಪಿಪ್ಲಿಯಾ (ತಾ. ನಾರಾಯಣಗಢ, ಜಿ. ಮಂದಸೌರ್) ಗ್ರಾಮದ ನಿವಾಸಿಯಾಗಿದ್ದು, ನೀಮಚ್ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನೀಮಚ್ ಮತ್ತು ಮಂದಸೌರ್ ಎರಡೂ ಜಿಲ್ಲೆಗಳು ‘ಡೋಡಾಚುರಾ’ ಉತ್ಪಾದನೆ ಮತ್ತು ಕಳ್ಳಸಾಗಣೆಗಾಗಿ ಕುಖ್ಯಾತವಾಗಿವೆ.

3. ಪೊಲೀಸ್ ವರಿಷ್ಠಾಧಿಕಾರಿ ಅಂಕಿತ ಜೈಸ್ವಾಲ್ ಅವರು ಮಾಧ್ಯಮಗಳಿಗೆ, ಈ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಕಾನೂನು ರಕ್ಷಕರಲ್ಲ, ಭಕ್ಷಕರಾಗಿರುವ ಪೊಲೀಸ್!