ಪಂಜಾಬ್ ನಲ್ಲಿ 1 ಸಾವಿರದ 640 ಕೆಜಿ ನಕಲಿ ಪನೀರ್ ವಶ – Adulterated Panner Racket Busted

ನವದೆಹಲಿ – ಪಟಿಯಾಲಾದ ಆಹಾರ ಸುರಕ್ಷತಾ ವಿಭಾಗವು ಹರಿಯಾಣದಿಂದ ಜಲಂಧರಗೆ ಸಾಗಿಸುತ್ತಿದ್ದ 1 ಸಾವಿರದ 640 ಕೆಜಿ ನಕಲಿ ಪನೀರ ಅನ್ನು ರಾಜಪುರಾದಲ್ಲಿ ವಶಪಡಿಸಿಕೊಂಡಿದೆ. ಆರೋಗ್ಯಕ್ಕೆ ಹಾನಿಕಾರಕವಾದ ಈ ಪನೀರ್ ಅನ್ನು ತಕ್ಷಣವೇ ನಾಶಪಡಿಸಲಾಯಿತು. “ಕಲಬೆರಕೆ ಮಾಡುವವರನ್ನು ಕ್ಷಮಿಸುವುದಿಲ್ಲ” ಎಂದು ಆಡಳಿತವು ಎಲ್ಲಾ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

ಕತ್ರಾ (ಜಮ್ಮು) ದಲ್ಲಿ 800 ಕೆಜಿ ನಕಲಿ ಪನೀರ್ ವಶ

ಜಮ್ಮು ಮತ್ತು ಕಾಶ್ಮೀರದ ಆಹಾರ ಸುರಕ್ಷತಾ ವಿಭಾಗವು 800 ಕೆಜಿ ನಕಲಿ ಪನೀರ್ ಅನ್ನು ವಶಪಡಿಸಿಕೊಂಡಿದೆ. ಈ ಪನೀರ್ ಅನ್ನು ದೆಹಲಿಯಿಂದ ಬಸ್ ಮೂಲಕ ಪವಿತ್ರ ಧರ್ಮ ಸ್ಥಳವಾದ ಕತ್ರಾಗೆ ಕಳುಹಿಸಲಾಗುತ್ತಿತ್ತು.

ಈ ಬಸ್‌ ನ ಚಾಲಕ ಅಬ್ದುಲ್ ಅಹದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪನೀರ್ ಮಾದರಿಗಳನ್ನು ಶ್ರೀನಗರ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ, ಪ್ರಾಥಮಿಕ ತನಿಖೆಯಲ್ಲಿ ಅದು ಕಲಬೆರಕೆ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂದು ಕಂಡುಬಂದಿದೆ.

ಆಗ್ರಾದಲ್ಲಿ ದುರ್ವಾಸನೆಯ 800 ಕೆಜಿ ಪನೀರ್ ನಾಶ

ಆಗ್ರಾದಲ್ಲಿ ಧೋಲ್‌ ಪುರದಿಂದ ಬಂದ 800 ಕೆಜಿ ಕಲಬೆರಕೆ ಪನೀರ್ ಅನ್ನು ನಾಶಪಡಿಸಲಾಯಿತು. ಈ ಪನೀರ್ 5 ಡ್ರಮ್‌ಗಳಲ್ಲಿತ್ತು. ಅದರಲ್ಲಿ ಸತ್ತ ಮೀನುಗಳಿದ್ದವು ಮತ್ತು ಪನೀರ್‍‌ನಲ್ಲಿ ಅತ್ಯಂತ ದುರ್ವಾಸನೆ ಬೀರುತ್ತಿತ್ತು.

ಸಂಪಾದಕೀಯ ನಿಲುವು

ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ ಅಥವಾ ಗಲ್ಲುಶಿಕ್ಷೆ ವಿಧಿಸುವವರೆಗೂ ಇಂತಹ ಘಟನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ!