100ಕ್ಕೂ ಹೆಚ್ಚು ಹಿಂದೂ ಹೆಣ್ಣುಮಕ್ಕಳ ಮತಾಂತರ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪಾಕಿಸ್ತಾನದ ತನ್ವೀರ್ ಅಹ್ಮದ್ ಮತ್ತು ಸಾಹಿಲ್ ಅಬೀಬ್ ಇವರು ಆಗ್ರಾದ ಮತಾಂತರ ಗ್ಯಾಂಗ್ ನ ಮುಖ್ಯ ಸೂತ್ರಧಾರರಾಗಿರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಇವರಿಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ‘ಪ್ರಬೋಧನೆ’ ಮಾಡುವ (ಇನ್‌ಫ್ಲುಯೆನ್ಸರ್) ವ್ಯಕ್ತಿಗಳಾಗಿದ್ದು, ಅವರ ಹೆಸರುಗಳು ನಕಲಿ ಆಗಿರಬಹುದು ಎಂಬ ಅನುಮಾನವಿದೆ. ಇವರು ಒಂದು ವಾಟ್ಸಾಪ್ ಗುಂಪಿನ ಮುಖ್ಯಸ್ಥರಾಗಿದ್ದು, ಈ ಗುಂಪಿನಲ್ಲಿ 100ಕ್ಕೂ ಹೆಚ್ಚು ಹಿಂದೂ ಹೆಣ್ಣುಮಕ್ಕಳನ್ನು ಸೇರಿಸಲಾಗಿತ್ತು. ಈ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿತ್ತು.
ಕಟ್ಟರವಾದಿಗಳನ್ನಾಗಿ ಮಾಡಲು ಕಾಶ್ಮೀರಿ ಹೆಣ್ಣುಮಕ್ಕಳ ಬಳಕೆ
ಈ ಬಲೆಯಲ್ಲಿ ಕಾಶ್ಮೀರದ ಕೆಲವು ಹೆಣ್ಣುಮಕ್ಕಳೂ ಭಾಗಿಯಾಗಿದ್ದರು. ಈ ಮತಾಂತರ ಪ್ರಕರಣದ ತನಿಖೆಯಿಂದ ಬಹಿರಂಗಗೊಂಡಿರುವ ವಿಷಯವೆಂದರೆ, ಅನೇಕ ಹೆಣ್ಣುಮಕ್ಕಳನ್ನು ಎಷ್ಟು ಕಟ್ಟರವಾದಿಗಳನ್ನಾಗಿ ಮಾಡಲಾಗಿದೆ ಎಂದರೆ, ಅವರ ಮೇಲೆ ಕೌನ್ಸಲಿಂಗ ಮಾಡಿದರೂ ಯಾವುದೇ ಪರಿಣಾಮ ಬೀರುತ್ತಿಲ್ಲ. ಮತಾಂತರಗೊಂಡ ಹೆಣ್ಣುಮಕ್ಕಳನ್ನು ‘ರಿವರ್ಟಿ’ ಎಂದು ಕರೆಯಲಾಗುತ್ತಿತ್ತು. ಇವರಿಗಾಗಿ ‘ಜೂಮ್ ಲಿಂಕ್’ (ವೆಬ್‌ಸೈಟ್) ಮೂಲಕ ಇಸ್ಲಾಂ ಧರ್ಮದ ಬೋಧನೆಗಳನ್ನು ನೀಡಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳು ಮತ್ತು ‘ಗೇಮಿಂಗ್ ಆ್ಯಪ್’ಗಳ ಮೂಲಕ ಈ ಹೆಣ್ಣುಮಕ್ಕಳನ್ನು ಗುರಿಯಾಗಿಸಲಾಗಿತ್ತು.
ಅಂತರರಾಜ್ಯ ಮತಾಂತರ ಗುಂಪಿನ ನಾಶ: 14 ಜನರ ಬಂಧನ
ಆಗ್ರಾ ಪೊಲೀಸ್ ಆಯುಕ್ತ ದೀಪಕ ಕುಮಾರ ಅವರು ಅಂತರರಾಜ್ಯ ಮತಾಂತರ ಗುಂಪನ್ನು ಪತ್ತೆಹಚ್ಚಿರುವುದಾಗಿ ಘೋಷಿಸಿದ್ದಾರೆ. ಈ ಗುಂಪಿಗೆ ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ ಮತ್ತು ಡಾಲರ್ ವ್ಯವಹಾರಗಳ ಮೂಲಕ ಹಣ ಬರುತ್ತಿತ್ತು. ಈ ಪ್ರಕರಣದ ಓರ್ವ ಆರೋಪಿಯು ‘ಕ್ರೌಡ್ ಫಂಡಿಂಗ್’ (ನಿಧಿ ಸಂಗ್ರಹಣೆ) ಮೂಲಕ ಪ್ಯಾಲೆಸ್ಟೈನನಲ್ಲಿ ಆರ್ಥಿಕ ನೆರವು ಕಳುಹಿಸಿರುವುದು ಸಹ ಬೆಳಕಿಗೆ ಬಂದಿದೆ. ಪೊಲೀಸರು ‘ಆಪರೇಷನ ಅಸ್ಮಿತಾ’ ಅಡಿಯಲ್ಲಿ ಅನೇಕ ಸಂತ್ರಸ್ತ ಹೆಣ್ಣುಮಕ್ಕಳನ್ನು ರಕ್ಷಿಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 14 ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಅನೇಕ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮೋಸಗೊಳಿಸಿ ಅವರನ್ನು ಮತಾಂತರ ಮಾಡಲು ಪ್ರೇರೇಪಿಸಲಾಗಿತ್ತು. ಸಂಬಂಧಪಟ್ಟ ಕುಟುಂಬಗಳಿಗೆ ‘ತಮ್ಮ ಹೆಣ್ಣುಮಕ್ಕಳು ಮತಾಂತರದ ಬಲೆಯಲ್ಲಿ ಸಿಲುಕಿದ್ದಾರೆ’ ಎಂಬ ಕಲ್ಪನೆಯೂ ಇರಲಿಲ್ಲ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!