ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ದುರುಪಯೋಗ ತಡೆಯುವ ಪ್ರಯತ್ನ
(ಐ.ಆರ್.ಸಿ.ಟಿ.ಸಿ – ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ – ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ)

ನವದೆಹಲಿ – ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ದುರುಪಯೋಗ ತಡೆಯಲು ಭಾರತೀಯ ರೈಲ್ವೆ, ‘ಐ.ಆರ್.ಸಿ.ಟಿ.ಸಿ’ಯ ೨ ಕೋಟಿ ೫೦ ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸಿದೆ. ಅನುಮಾನಾಸ್ಪದ ಕಾಯ್ದಿರಿಸುವಿಕೆ ಮತ್ತು ನಕಲಿ ಖಾತೆಗಳ ಬಗ್ಗೆ ಮಾಹಿತಿ ಪಡೆದ ನಂತರ ಈ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂಸತ್ತಿನಲ್ಲಿ ಸಂಸದ ಎ.ಡಿ. ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸರಕಾರ ಈ ಮಾಹಿತಿ ನೀಡಿದೆ.
ಈ ಖಾತೆಗಳಿಂದ ತತ್ಕಾಲ್ ಟಿಕೆಟ್ ಕಾಯ್ದಿರಿಸುವಾಗ ಅನೇಕ ತೊಂದರೆಗಳು ಎದುರಾಗುತ್ತಿದ್ದವು. ತತ್ಕಾಲ್ ಬುಕಿಂಗ್ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಖಾಲಿಯಾಗುತ್ತಿದ್ದವು. ಬೋಟ್‌ಗಳನ್ನು (ಸಾಫ್ಟ್‌ವೇರ್ ರೋಬೋಟ್‌ಗಳು) ಬಳಸಿ ದಲ್ಲಾಳಿಗಳು ಎಲ್ಲಾ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದರು. ಇದರ ಪರಿಣಾಮವಾಗಿ ಸಾಮಾನ್ಯ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ದೊಡ್ಡಮಟ್ಟದ ನೆಮ್ಮದಿ ಸಿಕ್ಕಿದೆ, ಎಂದು ಹೇಳಿದ್ದಾರೆ.
ರೈಲ್ವೆ ಮಾಡಿದ ಪ್ರಮುಖ ಬದಲಾವಣೆಗಳು
ಕಾಯ್ದಿರಿಸಿದ ಟಿಕೆಟ್‌ಗಳನ್ನು ಆನ್‌ಲೈನ್ ಅಥವಾ ಕಂಪ್ಯೂಟರ್ ಆಧಾರಿತ ಕಾಯ್ದಿರಿಸುವ ವ್ಯವಸ್ಥೆಯ ಮೂಲಕ “ಮೊದಲು ಬಂದವರಿಗೆ ಆದ್ಯತೆ” ಎಂಬ ತತ್ವದ ಮೇಲೆ ಕಾಯ್ದಿರಿಸಬಹುದು. ಪ್ರಸ್ತುತ, ಶೇ. ೮೯ರಷ್ಟು ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಲಾಗುತ್ತಿದೆ. ಜುಲೈ ೧, ೨೦೨೫ರಿಂದ, ಆಧಾರ್ ಕಾರ್ಡ್ ದೃಢೀಕರಿಸಿದ ಬಳಕೆದಾರರು ಮಾತ್ರ ‘ಐ.ಆರ್.ಸಿ.ಟಿ.ಸಿ’ಯ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ತತ್ಕಾಲ್ ಯೋಜನೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಬಹುದು. ತತ್ಕಾಲ್ ಬುಕಿಂಗ್ ಪ್ರಾರಂಭವಾದ ಮೊದಲ ೩೦ ನಿಮಿಷಗಳವರೆಗೆ ದಲ್ಲಾಳಿಗಳಿಗೆ ಟಿಕೆಟ್ ಕಾಯ್ದಿರಿಸಲು ನಿಷೇಧಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!