ಆಗ್ರಾ (ಉತ್ತರ ಪ್ರದೇಶ): ಮುಸ್ಲಿಂ ಗುಂಪಿನ ಬಲೆಯಿಂದ ಇಬ್ಬರು ಹಿಂದೂ ಸಹೋದರಿಯರ ರಕ್ಷಣೆ – Hindu Conversion Mafia

  • ಹುಡುಗಿಯರ ಬ್ರೈನ್‌ವಾಷ್ ಮಾಡಲಾಗಿತ್ತು

  • ಹುಡುಗಿಯರು ಮನೆಯಲ್ಲಿ ದೇವರ ಪೂಜೆಯನ್ನು ನಿಲ್ಲಿಸಿದ್ದರು

ಆಗ್ರಾ (ಉತ್ತರ ಪ್ರದೇಶ) – ಹಿಂದೂಗಳನ್ನು ಮತಾಂತರಗೊಳಿಸುವ ಮುಸ್ಲಿಂ ಗುಂಪಿನ ಬಲೆಗೆ ಸಿಲುಕಿದ್ದ ಆಗ್ರಾದ ಇಬ್ಬರು ಹಿಂದೂ ಸಹೋದರಿಯರನ್ನು ಕೋಲಕತಾದ ಮುಸ್ಲಿಂ ಪ್ರದೇಶದಿಂದ ರಕ್ಷಿಸಲಾಗಿದೆ.

1. ಮುಸ್ಲಿಂ ಕಟ್ಟರವಾದಿಗಳು ಈ ಇಬ್ಬರು ಸಹೋದರಿಯರ ಬ್ರೈನ್‌ವಾಷ್‌ ಮಾಡಿದ್ದರು. ಈ ಇಬ್ಬರೂ ಹುಡುಗಿಯರು ಮತಾಂತರ ಮಾಡುವ ಈ ಗುಂಪಿನ ಪ್ರಭಾವಕ್ಕೆ ಎಷ್ಟು ಒಳಗಾಗಿದ್ದರು ಎಂದರೆ, ಅವರು ತಮ್ಮ ತಂದೆ-ತಾಯಿಗೂ ಮನೆಯಲ್ಲಿ ದೇವರ ಪೂಜೆ ಮಾಡಲು ಬಿಡುತ್ತಿರಲಿಲ್ಲ.

2. ಈ ಹುಡುಗಿಯರ ಪೋಷಕರು ಹೇಳಿದಂತೆ, ಮುಸ್ಲಿಮರು ಮೊದಲು ದೊಡ್ಡ ಮಗಳ ಬ್ರೈನ್‌ವಾಷ್‌  ಮಾಡಿದರು ಮತ್ತು ನಂತರ ಚಿಕ್ಕ ಮಗಳ ಬ್ರೈನ್‌ವಾಷ್‌ ಮಾಡಿದರು. ನಂತರ ಇಬ್ಬರೂ ಮನೆಯಿಂದ ಪಲಾಯನ ಮಾಡಲು ಯೋಜಿಸಿದರು ಮತ್ತು ಮಾರ್ಚ್‌ ನಲ್ಲಿ ಹಠಾತ್ತನೆ ನಾಪತ್ತೆಯಾದರು. ಇದರಿಂದ ನಾವು ಪೊಲೀಸರಲ್ಲಿ ದೂರು ದಾಖಲಿಸಿದ್ದೆವು.

3. ಇಬ್ಬರೂ ಹುಡುಗಿಯರು ಮೊದಲು ದೆಹಲಿಯ ಮಸೀದಿಗೆ ಹೋದರು. ಅಲ್ಲಿಂದ ಅವರನ್ನು ಮದರಸಾಗೆ ಕಳುಹಿಸಲಾಯಿತು. ಅಲ್ಲಿನ ಝೋಯಾ ಎಂಬ ಮುಸ್ಲಿಂ ಯುವತಿಯ ಸಹಾಯದಿಂದ, ಅವರಿಬ್ಬರು ಬಿಹಾರದ ಮೂಲಕ ಕೋಲಕತಾ ತಲುಪಿದರು.

4. ಕೋಲಕತಾದಲ್ಲಿ ಮಹಮ್ಮದ್ ಇಬ್ರಾಹಿಂ ಉರ್ಫ್ ರೀತ್ ಬನಿಕ್ ಎಂಬ ವ್ಯಕ್ತಿ ಅವರಿಬ್ಬರಿಗೂ ಮುಸ್ಲಿಂ ಪ್ರದೇಶದಲ್ಲಿ ಕೊಠಡಿಯನ್ನು ದೊರಕಿಸಿಕೊಟ್ಟನು. ಅಲ್ಲಿ ಅವರಿಬ್ಬರು ದಿನಕ್ಕೆ 5 ಬಾರಿ ನಮಾಜ್ ಮಾಡಲು ಪ್ರಾರಂಭಿಸಿದರು, ಹಾಗೆಯೇ ಇಸ್ಲಾಮಿಕ್ ಗ್ರಂಥಗಳನ್ನು ಓದಲು ಪ್ರಾರಂಭಿಸಿದರು.

5. ಕೋಲಕತಾದಲ್ಲಿ ಪೊಲೀಸರು ಅವರನ್ನು ಪತ್ತೆಹಚ್ಚಿದರು; ಆದರೆ ಅವರು ಮನೆಗೆ ಮರಳಲು ನಿರಾಕರಿಸಿದರು. ‘ಇಸ್ಲಾಂನಿಂದ ಜನ್ನತ್ (ಸ್ವರ್ಗ) ಸಿಗುತ್ತದೆ’ ಎಂಬ ದೃಢ ನಂಬಿಕೆ ಅವರಿಗೆ ಇತ್ತು. ಪೊಲೀಸರು ಅವರಿಗೆ ಸಮಾಲೋಚನೆ ನಡೆಸಿ ಅಲ್ಲಿಂದ ಅವರನ್ನು ಕರೆತಂದರು.

6. ಈ ಪ್ರಕರಣದಲ್ಲಿ ಇದುವರೆಗೆ ವಿವಿಧ ರಾಜ್ಯಗಳಿಂದ 10 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಮುಖ್ಯ ಸೂತ್ರಧಾರ ಅಬ್ದುಲ್ ರೆಹಮಾನ್ ಖುರೇಶಿಯನ್ನು ದೆಹಲಿಯಿಂದ ಬಂಧಿಸಲಾಗಿದೆ.

7. ಈ ಮತಾಂತರದ ಗುಂಪಿಗೆ ‘ಪಿ.ಎಫ್.ಐ.’, ‘ಎಸ್.ಡಿ.ಪಿ.ಐ.’ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿರುವ ಶಂಕೆಯಿದೆ. ಈ ಗುಂಪಿಗೆ ಕೆನಡಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಮೆರಿಕಾದಿಂದ ಹಣಕಾಸು ನೆರವು ಸಿಗುತ್ತಿದೆ ಎಂದೂ ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮ ಶಿಕ್ಷಣವನ್ನು ನೀಡದಿರುವುದರಿಂದ, ಅವರು ಇತರ ಪಂಥಗಳ ಸುಳ್ಳು ಪ್ರಚಾರಕ್ಕೆ ಸಹಜವಾಗಿ ಬಲಿಯಾಗುತ್ತಾರೆ. ಹಿಂದೂಗಳ ಈ ಪರಿಸ್ಥಿತಿಯನ್ನು ಬದಲಾಯಿಸಲು ಅವರಿಗೆ ಧರ್ಮ ಶಿಕ್ಷಣ ನೀಡುವುದು ಅವಶ್ಯಕವಾಗಿದೆ!