
ಕೊಲ್ಲಾಪುರ – ಸನಾತನ ಸಂಸ್ಥೆಯ ಸಂಸ್ಥಾಪಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ ಅವರು ೨೦೨೫ರ ಜುಲೈ ೧೦ರಂದು ಕೊಲ್ಹಾಪುರ ಜಿಲ್ಲೆಯ ನೃಸಿಂಹವಾಡಿಯಲ್ಲಿ ಶ್ರೀ ನೃಸಿಂಹ ಸರಸ್ವತಿ ಅವರ ದರ್ಶನ ಪಡೆದರು. ಜೊತೆಗೆ, ಅಲ್ಲಿಂದ ಸಮೀಪದಲ್ಲಿರುವ ಶಿರೋಳ (ಜಿಲ್ಲೆ ಕೊಲ್ಹಾಪುರ) ದ ಶ್ರೀ ದತ್ತ ಭೋಜನಪಾತ್ರ ಮಂದಿರಕ್ಕೆ ಭೇಟಿ ನೀಡಿ, ಭೋಜನಪಾತ್ರದ ಕಲ್ಲಿನ ಮೇಲೆ ಶ್ರೀ ನೃಸಿಂಹ ಸರಸ್ವತಿಯವರ ಹಸ್ತಮುದ್ರೆಯ ದರ್ಶನವನ್ನು ಅವರು ಪಡೆದರು.
ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡ್ಗೀಳ್ ಅವರು ‘ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಶೀಘ್ರವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ, ಮತ್ತು ಎಲ್ಲಾ ಸಾಧಕರಿಗೂ ರಕ್ಷಣೆ ದೊರೆತು ಉತ್ತಮ ಆರೋಗ್ಯ ಸಿಗಲಿ’ ಎಂದು ಪ್ರಾರ್ಥಿಸಿದರು.
ಶಿರೋಳ (ಜಿಲ್ಲೆ ಕೊಲ್ಹಾಪುರ) ದ ಶ್ರೀ ದತ್ತ ಭೋಜನಪಾತ್ರ ಮಂದಿರದ ಮಾಹಿತಿ!
೧. ಶ್ರೀ ದತ್ತ ಭೋಜನಪಾತ್ರ ಮಂದಿರದ ಪ್ರಾಚೀನ ಇತಿಹಾಸ; ಶ್ರೀ ನೃಸಿಂಹ ಸರಸ್ವತಿ ಅವರ ಕೈಬೆರಳುಗಳ ಗುರುತು

ಓರ್ವ ಮಹಿಳೆಯು ಅನೇಕ ದೇವರ ಪೂಜೆಗಳನ್ನು ಮಾಡಿದರೂ ಸಹ ಆಕೆಗೆ ಪುತ್ರ ಸಂತಾನವಿರಲಿಲ್ಲ; ಆದ್ದರಿಂದ ಒಂದು ದಿನ ಆಕೆ ಓರ್ವ ಸತ್ಪುರುಷರ ಬಳಿ ಹೋದಳು. ಅವರು ಆಕೆಗೆ “ಹಿಂದಿನ ಜನ್ಮದಲ್ಲಿ ಅವಳು ಒಬ್ಬ ಸಾಹುಕಾರನಿಂದ ಸಾಲ ತೆಗೆದುಕೊಂಡಿದ್ದಳು, ಅದನ್ನು ಅವಳು ತೀರಿಸಲಿಲ್ಲ. ಆದ್ದರಿಂದ ಅವನು ಅವಳ ಗರ್ಭದ ರೂಪದಲ್ಲಿ ತನ್ನ ಸಾಲವನ್ನು ತೀರಿಸುತ್ತಿದ್ದಾನೆ; ಆದ್ದರಿಂದ ಅವಳಿಗೆ ಸಂತಾನ ಪ್ರಾಪ್ತಿಯಾಗುತ್ತಿಲ್ಲ” ಎಂದು ಹೇಳಿದರು. ಪುತ್ರ ಪ್ರಾಪ್ತಿಗಾಗಿ ದತ್ತ ಮಹಾರಾಜರ ವಾಸಸ್ಥಾನವಾದ ಔದುಂಬರ ವೃಕ್ಷದ ಸೇವೆಯನ್ನು ಮಾಡಲು ಆಕೆಗೆ ಹೇಳಿದರು. ಅದರಂತೆ ಆ ಮಹಿಳೆ ನಿಯಮಿತವಾಗಿ ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಉಪಾಸನೆ ಮಾಡಲು ಪ್ರಾರಂಭಿಸಿದಳು. ಒಂದು ದಿನ ಅವಳಿಗೆ ಕನಸಿನಲ್ಲಿ, ತನ್ನ ಹಿಂದೆ ಒಂದು ಪಿಶಾಚಿ ಇರುವುದು ಕಾಣಿಸಿತು. ‘ಅವಳ ಗರ್ಭದಿಂದ ಅದರ ಹಸಿವು ತೀರುತ್ತಿಲ್ಲ. ಆದ್ದರಿಂದ ಅದು ಅವಳನ್ನು ತಿನ್ನಲಿದೆ’ ಎಂದು ಆ ಪಿಶಾಚಿ ಹೇಳಿತು. ನಂತರ ಅವಳು ಓಡಿ ಹೋಗಿ ಔದುಂಬರ ವೃಕ್ಷದ ಸ್ಥಳದಲ್ಲಿ ಅಡಗಿಕೊಂಡಳು. ಅವಳ ಹಿಂದಿದ್ದ ಆ ಪಿಶಾಚಿಯೂ ಅಲ್ಲಿಗೆ ಹೋಯಿತು. ಹೆದರಿದ ಮಹಿಳೆ ದತ್ತ ಮಹಾರಾಜರನ್ನು ನೆನೆದಳು. ಆಗ ದತ್ತ ಮಹಾರಾಜರು ಪ್ರತ್ಯಕ್ಷವಾಗಿ ಪಿಶಾಚಿಗೆ ತಡೆಯುವಂತೆ ಆಜ್ಞಾಪಿಸಿದರು. “ನೀನು ಇವಳಿಗೆ ತೊಂದರೆ ಕೊಡಬೇಡ. ನಿನಗೆ ಮುಕ್ತಿ ಬೇಕಿದ್ದರೆ, ಇವಳನ್ನು ಬಿಡು” ಎಂದು ಮಹಾರಾಜರು ಆ ಪಿಶಾಚಿಗೆ ಹೇಳಿದರು. ಅದು ಅವಳನ್ನು ಬಿಡಲು ನಿರಾಕರಿಸಿತು. “ಹಿಂದಿನ ಜನ್ಮದಲ್ಲಿ ಇವಳು ನನ್ನಿಂದ ಸಾಲ ತೆಗೆದುಕೊಂಡಿದ್ದಳು. ಅದನ್ನು ಅವಳು ಕೊಡಬೇಕು” ಎಂದು ಪಿಶಾಚಿ ಹಠ ಹಿಡಿಯಿತು. ಹಿಂದಿನ ಜನ್ಮದಲ್ಲಿ ಆ ಮಹಿಳೆ ಬಳಿ ಅಷ್ಟೊಂದು ಹಣವಿರಲಿಲ್ಲ. ‘ಅವಳ ಸಾಮರ್ಥ್ಯಕ್ಕೆ ತಕ್ಕಂತೆ ಬ್ರಾಹ್ಮಣನಿಗೆ ದಾನ ನೀಡುತ್ತಾಳೆ. ಅದರಿಂದ ನಿನಗೆ ಮುಕ್ತಿ ಸಿಗುತ್ತದೆ’ ಎಂದು ದತ್ತ ಮಹಾರಾಜರು ಹೇಳಿದರು. ಈ ಮಹಿಳೆಯಿಂದಾಗಿ ಆ ಪಿಶಾಚಿಗೆ ದತ್ತ ಮಹಾರಾಜರ ದರ್ಶನವಾಯಿತು. ಆದ್ದರಿಂದ ಅದು ಮಹಾರಾಜರಿಗೆ “ಇವಳ ಮನೆಯ ಕಡೆ ಯಾರಾದರೂ ಕೆಟ್ಟ ದೃಷ್ಟಿಯಿಂದ ನೋಡಿದರೆ, ಅವರನ್ನು ನಾನು ಕ್ಷಮಿಸುವುದಿಲ್ಲ” ಎಂದು ಹೇಳಿತು. ನಂತರ ದತ್ತ ಮಹಾರಾಜರು ಆ ಮರದ ಔದುಂಬರ ಹಣ್ಣುಗಳನ್ನು ಆ ಸ್ತ್ರೀಯ ಮಡಿಲಿಗೆ ಹಾಕಿ ಆಶೀರ್ವದಿಸಿದರು.
ಕಾಲಾಂತರದಲ್ಲಿ ಅವಳಿಗೆ ಒಬ್ಬ ಮಗ ಹುಟ್ಟಿದನು. ಅವನ ಉಪನಯನವಾಯಿತು. ಒಂದು ದಿನ ಅವನಿಗೆ ಜ್ವರ ಬಂದು ಅವನು ಪ್ರಾಣ ಕಳೆದುಕೊಂಡನು. ಆ ಮಹಿಳೆಗೆ ದತ್ತ ಮಹಾರಾಜರ ಮೇಲೆ ದೃಢ ಶ್ರದ್ಧೆ ಇತ್ತು. ಮಗನಿಗೆ ಅಂತಿಮ ಸಂಸ್ಕಾರ ಮಾಡದೆ ಆ ಸಂಜೆ ಅವಳು ಮಗನೊಂದಿಗೆ ನೃಸಿಂಹವಾಡಿಗೆ ಹೋದಳು. ಅಲ್ಲಿನ ಪಾದುಕೆಗಳ ಮುಂದೆ ಆ ಮಗುವನ್ನು ಇಟ್ಟು ಕರುಣೆಯಿಂದ “ಮಹಾರಾಜ್, ನಿಜಕ್ಕೂ ನನ್ನ ಭಕ್ತಿ ಉತ್ತಮವಾಗಿದ್ದರೆ, ನೀವು ಇದಕ್ಕೆ ಮಾರ್ಗ ತೋರಿಸಿ. ಇಲ್ಲವಾದರೆ ನಾನು ಇಲ್ಲಿ ತಲೆ ಬಡಿದುಕೊಂಡು ಪ್ರಾಣ ಬಿಡುತ್ತೇನೆ” ಎಂದಳು. ಆ ಮಹಿಳೆಯು ದತ್ತ ಮಹಾರಾಜರ ಪಾದುಕೆಗಳಿಗೆ ಅನೇಕ ಬಾರಿ ತನ್ನ ತಲೆ ಬಡಿದಳು, ಇದರಿಂದ ಪಾದುಕೆಗಳು ರಕ್ತಸಿಕ್ತವಾಗಿ ಅವಳು ಮೂರ್ಛೆ ಹೋದಳು. ಮುಂಜಾನೆ ಅವಳಿಗೆ ಕನಸಿನಲ್ಲಿ ವ್ಯಾಘ್ರಚರ್ಮವನ್ನು ಧರಿಸಿದ ಮತ್ತು ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುವ ಮಹಾರಾಜರ ದರ್ಶನವಾಯಿತು. ಮಹಿಳೆಯು ಮಹಾರಾಜರಿಗೆ ತನ್ನ ಕಷ್ಟವನ್ನು ಹೇಳಿಕೊಂಡಳು. ಅವರು ಮಗನಿಗೆ ತೀರ್ಥವನ್ನು ಕುಡಿಸಿದರು ಮತ್ತು ಅವನ ಬಾಯಿಗೆ ಕೈಯಿಂದ ಗಾಳಿಯನ್ನು ಬಿಟ್ಟರು. ಆಕೆಗೆ ಎಚ್ಚರವಾದಾಗ, ಆ ಮಗು ಎದ್ದು ಕುಳಿತಿತ್ತು. ಈ ಮಗುವಿನ ೨೭ನೇ ತಲೆಮಾರಿನವರು ಈ ಶ್ರೀ ದತ್ತಗುರು ಭೋಜನಪಾತ್ರ ಮಂದಿರದಲ್ಲಿ ಪೂಜಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಘಟನೆಗೆ ಸುಮಾರು ೭೫೦ ವರ್ಷಗಳು ಕಳೆದಿವೆ.
ಕಾಲಾಂತರದಲ್ಲಿ ಈ ಮಗು ದೊಡ್ಡವನಾದನು. ನಂತರ ೪೦-೪೫ ವರ್ಷಗಳ ನಂತರ ಈ ಭಾಗಕ್ಕೆ ಶ್ರೀ ನೃಸಿಂಹ ಸರಸ್ವತಿಯವರು ಬಂದರು. ಅವರ ನಿತ್ಯಕರ್ಮದಂತೆ ಅವರು ಆ ಪಂಚಕ್ರೋಶಿ ಗ್ರಾಮಗಳಲ್ಲಿ (೫ ಕೋಸ್ ದೂರದಲ್ಲಿರುವ ಗ್ರಾಮಗಳು) ಭಿಕ್ಷೆ ಬೇಡುತ್ತಿದ್ದರು. ಒಂದು ದಿನ ಅವರು ಈ ಮಗನ ಮನೆಗೆ ಭಿಕ್ಷೆಗಾಗಿ ಬಂದರು. ಆ ಮಹಿಳೆಯು ಸಾಕ್ಷಾತ್ ಶ್ರೀ ನೃಸಿಂಹ ಸರಸ್ವತಿ ಮಹಾರಾಜರು ದ್ವಾರದಲ್ಲಿ ಬಂದಿರುವುದನ್ನು ಕಂಡಳು. ಮಹಿಳೆಯು ಅವರನ್ನು ಒಳಗೆ ಕರೆದು ಕುಳಿತುಕೊಳ್ಳಲು ಆಸನವನ್ನು ನೀಡಿದಳು. ಮಹಾರಾಜರು ಅವಳಿಗೆ ಭೋಜನಕ್ಕಾಗಿ ಏನಾದರೂ ಬಡಿಸಲು ಹೇಳಿದರು. ಅವಳು “ನನ್ನ ಪತಿ ಭಿಕ್ಷೆಗಾಗಿ ಹೊರಗೆ ಹೋಗಿದ್ದಾರೆ, ಅವರು ಬಂದ ನಂತರ ಆಹಾರವನ್ನು ಬೇಯಿಸಿ ಬಡಿಸುತ್ತೇನೆ” ಎಂದಳು. ಮಹಾರಾಜರಿಗೆ ವಿಪರೀತ ಹಸಿವಾಗಿತ್ತು. ಅವಳ ಬಳಿ ಒಂದು ಬಟ್ಟಲಿನಲ್ಲಿ ಸ್ವಲ್ಪ ಜೋಳವಿರುವುದು ನೆನಪಾಯಿತು. ಅದನ್ನು ಅರೆಯುವ ಕಲ್ಲಿನಲ್ಲಿ ಅರೆದು ಅವಳು ತೆಳುವಾದ ಕಣಿಕೆಯನ್ನು ಮಾಡಿದಳು; ಆದರೆ ಬಡಿಸಲು ಅವಳ ಬಳಿ ಪಾತ್ರೆಯಿರಲಿಲ್ಲ. ‘ನಾವು ಊಟ ಮಾಡುವ ಪಾತ್ರೆಯನ್ನು ಸನ್ಯಾಸಿಗೆ ಕೊಡಬಾರದು’ ಎಂದು ಹೇಳುತ್ತಾರೆ. ಅವರು ಅದನ್ನು ಅಂತರ್ಜ್ಞಾನದಿಂದ ತಿಳಿದುಕೊಂಡರು. ಅವರು ಅಲ್ಲಿನ ಕಲ್ಲಿನ ಮೇಲೆ ಕಣಿಕೆಯನ್ನು ಬಡಿಸಲು ಹೇಳಿದರು. ಅವಳು ಆ ಕಲ್ಲನ್ನು ಆರತಿ ಮಾಡಿ ಮಂತ್ರಿಸಿ ಅದರ ಮೇಲೆ ಕಣಿಕೆಯನ್ನು ಬಡಿಸಿದಳು. ಊಟ ಮಾಡಿದ ನಂತರ ಮಹಾರಾಜರು ಸಂತುಷ್ಟರಾದರು. ಹೋಗುವಾಗ ಅವರು ‘ನಿಮ್ಮ ಮನೆಯಲ್ಲಿ ಮತ್ತು ಈ ಗ್ರಾಮದಲ್ಲಿ ಎಂದಿಗೂ ಏನೂ ಕಡಿಮೆ ಆಗುವುದಿಲ್ಲ’ ಎಂದು ಆಶೀರ್ವದಿಸಿ ಹೋದರು.
ಪತಿ ಮನೆಗೆ ಮರಳಿದ ನಂತರ ಅವಳು ನಡೆದ ಎಲ್ಲಾ ಘಟನೆಯನ್ನು ಹೇಳಿದಳು. “ನೀನು ಎಷ್ಟು ಭಾಗ್ಯಶಾಲಿ. ನಿನಗೆ ಸಾಕ್ಷಾತ್ ಯತಿ ಮಹಾರಾಜರ ದರ್ಶನವಾಯಿತು!” ಎಂದು ಆಕೆಯ ಪತಿ ಹೇಳಿದನು. ರಾತ್ರಿ ಅವನಿಗೆ ಮಹಾರಾಜರು ದೃಷ್ಟಾಂತವನ್ನು ನೀಡಿದರು ಮತ್ತು “ರಾತ್ರಿ ನಾನು ನಿನ್ನ ಮನೆಗೆ ಬಂದಿದ್ದೆ. ನಾನು ವಿದುರನ ಮನೆಯ ಕಣಿಕೆಯನ್ನು ತಿಂದೆ. ಇದು ಕೇವಲ ಕಲ್ಲು ಅಲ್ಲ, ಅದರ ಮೇಲೆ ನಾನು ಕೈಯ ಗುರುತನ್ನು ಬಿಟ್ಟು ಹೋಗಿದ್ದೇನೆ” ಎಂದು ಹೇಳಿದರು. ಅವರ ಈ ಗುರುತು ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮವಾಗಿದೆ. ದತ್ತ ಮಹಾರಾಜರ ಈ ಭೋಜನ ಪಾತ್ರೆಯು ಈ ದೇವಾಲಯದಲ್ಲಿದೆ. (ಈ ಕಥೆಯನ್ನು ‘ಗುರುಚರಿತ್ರ’ದ ೧೯ ಮತ್ತು ೨೦ ನೇ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.)

೨. ಶ್ರೀ ದತ್ತ ಭೋಜನ ಪಾತ್ರ ಮಂದಿರದಲ್ಲಿ ವಾರ್ಷಿಕ ಉತ್ಸವ
ಈ ಮಂದಿರದ ವ್ಯವಸ್ಥೆಯನ್ನು ನೋಡಿಕೊಳ್ಳುವ ಪೂಜಾರಿಗಳು ಹೆಚ್ಚಿನ ಮಾಹಿತಿ ನೀಡುತ್ತಾ, ಇಲ್ಲಿ ದತ್ತ ಜಯಂತಿಯ ವಾರ್ಷಿಕ ಉತ್ಸವವಿರುತ್ತದೆ ಎಂದು ಹೇಳಿದರು. ಈ ಉತ್ಸವವು ೧೦ ದಿನಗಳವರೆಗೆ ನಡೆಯುತ್ತದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರ ಜನ್ಮಕಾಲೋತ್ಸವ ನಡೆಯುತ್ತದೆ. ಅಲ್ಲದೇ, ಶ್ರೀಪಾದ ಶ್ರೀವಲ್ಲಭರ ಜನ್ಮಕಾಲೋತ್ಸವವನ್ನೂ ಸಹ ಆಚರಿಸಲಾಗುತ್ತದೆ. ಹಿಂದೆ ಹಳೆ ಕಾಲದ ಮನೆಯಂತೆ ಈ ಮಂದಿರವಿತ್ತು. ಈ ಮಂದಿರದ ಮೊದಲ ಜೀರ್ಣೋದ್ಧಾರವನ್ನು ಛತ್ರಪತಿ ಶಾಹೂ ಮಹಾರಾಜರು ಮಾಡಿಸಿದರು. ನಂತರ ಮಹಾರಾಣಿ ತಾರಾರಾಣಿಯವರು ಈ ಮಂದಿರದ ಜೀರ್ಣೋದ್ಧಾರ ಮಾಡಿಸಿದರು. ಇತ್ತೀಚೆಗೆ ೨೦೦೪ ರಲ್ಲಿ ಈ ಮಂದಿರದ ಜೀರ್ಣೋದ್ಧಾರ ಮಾಡಲಾಗಿದೆ.
೩. ಶಿರೋಳ ಗ್ರಾಮದ ಮಹತ್ವ
ಶಿರೋಳವು ಸಾಧು, ಸಂತ ಮತ್ತು ಸತ್ಪುರುಷರ ಪಾದಸ್ಪರ್ಶದಿಂದ ಪವಿತ್ರವಾದ ಭೂಮಿಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕಕ್ಕೆ ದಂಡಯಾತ್ರೆಗೆ ಹೊರಟಿದ್ದಾಗ, ಅವರ ವಾಸ್ತವ್ಯ ಕುರುಂದವಾಡಿ ಮತ್ತು ಶಿರೋಳದ ನದಿಯ ದಡದಲ್ಲಿತ್ತು. ಇದೇ ಗ್ರಾಮದಲ್ಲಿ ಶಿವಾಜಿ ಕಾಲದ ತೋಪನ್ನು ಹಾರಿಸಲಾಗುತ್ತದೆ. ಈ ಮಂದಿರದ ಸ್ಥಳದಲ್ಲಿ ದಸರಾಕ್ಕೆ ಸೀಮೋಲ್ಲಂಘನದ ದೊಡ್ಡ ಉತ್ಸವವಿರುತ್ತದೆ. ಗ್ರಾಮದ ಎಲ್ಲಾ ಪಲ್ಲಕ್ಕಿಗಳು ಬರುತ್ತವೆ. ಆ ಪಲ್ಲಕ್ಕಿಗಳಲ್ಲಿ ದತ್ತ ಮಂದಿರದ ಗೌರವಾನ್ವಿತ ಪಲ್ಲಕ್ಕಿ ಇರುತ್ತದೆ. ನಂತರ ಅಂಬಾಬಾಯಿ, ಭವಾನಿ, ರೇಣುಕಾಮಾತಾ ಮೊದಲಾದ ಎಲ್ಲಾ ಪಲ್ಲಕ್ಕಿಗಳು ಮಾಳದ ಮೇಲಿನ ದಸರಾ ಚೌಕಕ್ಕೆ ಹೋಗುತ್ತವೆ. ಅಲ್ಲಿ ತೋಪಿಗೆ ಶಮಿ ಪೂಜೆ ಮಾಡಲಾಗುತ್ತದೆ ಮತ್ತು ನಂತರ ತೋಪಿನಿಂದ ಮೂರು ಬಾರಿ ಸಲಾಂ ನೀಡಲಾಗುತ್ತದೆ. ಈ ತೋಪಿನಿಂದ ನೀಡಲಾದ ಸಲಾಂ ಶಬ್ದ ಇಂದಿಗೂ ೪ ಕಿಲೋಮೀಟರ್‌ವರೆಗೆ ಕೇಳಿಸುತ್ತದೆ. ನಂತರ ಮಾಳದ ಮೇಲಿನ ಬುವಾಫನ್ ಮಹಾರಾಜ ಮಂದಿರದಲ್ಲಿ ತೋಪುಗಳಿಂದ ೨ ಬಾರಿ ಸಲಾಂಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ಪ್ರತಿ ವರ್ಷ ೫ ತೋಪುಗಳನ್ನು ಹಾರಿಸಲಾಗುತ್ತದೆ.
ಈ ಗ್ರಾಮದಲ್ಲಿ ೭೦% ವಾರಕರಿ ಸಂಪ್ರದಾಯವಿದೆ. ಆದ್ದರಿಂದ ಇದು ವಾರಕರಿಗಳ ಭೂಮಿಯೂ ಆಗಿದೆ. ಇಲ್ಲಿ ಎಲ್ಲಾ ಜನರು ಒಗ್ಗಟ್ಟಾಗಿರುತ್ತಾರೆ. ೨೦೦೫ ರಲ್ಲಿ ಮಹಾಪ್ರವಾಹ ಬಂದಿತ್ತು. ಆಗ ೩೦ ಗ್ರಾಮಗಳ ೧ ಲಕ್ಷ ಜನರೊಂದಿಗೆ ಅವರ ಪ್ರಾಣಿಗಳೂ ಕೂಡ ಶಿರೋಳಕ್ಕೆ ಬಂದಿದ್ದವು. ಅವರೆಲ್ಲರ ವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಯಾರಿಗೂ ಆಹಾರ-ನೀರು ಕಡಿಮೆ ಆಗಲಿಲ್ಲ. ಯಾವುದೇ ರೋಗ-ರುಜಿನಗಳು ಬರಲಿಲ್ಲ. ಯಾರೂ ಮೃತಪಟ್ಟಿಲ್ಲ. ಜನರು ಭಾವ ಮತ್ತು ಭಕ್ತಿ ಇಟ್ಟರೆ, ಅದರ ಫಲ ಖಂಡಿತ ಸಿಗುತ್ತದೆ ಎಂಬುದಕ್ಕೆ ಸಂಶಯವಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!