ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ ಅವರಿಂದ ಬಹಿರಂಗ ಸ್ವೀಕಾರ
(ಐ.ಎಸ್. ಐ. ಎಂದರೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ – ಅಂತರಸೇವೆಗಳ ಗುಪ್ತಚರ ಸಂಸ್ಥೆ)

ಪೇಶಾವರ (ಖೈಬರ್ ಪಖ್ತೂನ್ ಖ್ವಾ) – ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ ಅವರು, “ನಮ್ಮ ಪೊಲೀಸ್ ಪಡೆಗಳು ತಾಲಿಬಾನಗೆ ಸಂಬಂಧಿಸಿದ ಜನರನ್ನು ಹಿಡಿಯುತ್ತವೆ; ಆದರೆ ಐ.ಎಸ್.ಐ. ಮತ್ತು ಮಿಲಿಟರಿ ಇಂಟೆಲಿಜೆನ್ಸ್ (ಸೇನೆ ಗುಪ್ತಚರ) ಅಧಿಕಾರಿಗಳು ಬಂದು, ‘ಇವರು ನಮ್ಮ ಜನರು, ಅವರನ್ನು ಬಿಟ್ಟುಬಿಡಿ. ನಾವು ಅವರನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳುತ್ತಾರೆ,” ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದರಿಂದ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ತಾಲಿಬಾನ್ ಭಯೋತ್ಪಾದಕರನ್ನು ‘ಬಳಸಿಕೊಳ್ಳುತ್ತಿವೆ’ ಮತ್ತು ಇದನ್ನು ಭಾರತದ ವಿರುದ್ಧ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಅಲಿ ಅಮೀನ್ ಗಂಡಾಪುರ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಮಾಜಿ ಗೃಹ ಸಚಿವ ಮೊಹ್ಸಿನ್ ನಖ್ವಿ, “ಡೆರಾ ಇಸ್ಮಾಯಿಲ್ ಖಾನ್ ಪ್ರದೇಶದಲ್ಲಿ ತಾಲಿಬಾನ್ ಗೆ ಎಷ್ಟು ಲಂಚ ಸಿಗುತ್ತದೆ, ಇಲ್ಲಿನ ರಾಜಕಾರಣಿಗಳು ತಾಲಿಬಾನ್ ಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ ಮತ್ತು ಅವರೇ ಆರೋಪಿಸುತ್ತಿದ್ದಾರೆ”, ಎಂದು ಉತ್ತರ ನೀಡಿದರು.
ಸಂಪಾದಕೀಯ ನಿಲುವುಪಾಕಿಸ್ತಾನದ ನಾಯಕರು ಐ.ಎಸ್.ಐ. ಮುಖವಾಡವನ್ನು ಬಿಚ್ಚಿಡುತ್ತಿದ್ದಾರೆ. ಇದನ್ನು ಜಾಗತಿಕ ಸಮುದಾಯಗಳು ಗಮನಿಸಿ, ಈಗ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಬೇಕು, ಭಾರತವು ಮೊದಲು ಇದನ್ನು ಘೋಷಿಸಿ, ನಂತರ ಇತರರಿಗೆ ಮಾಡುವಂತೆ ಜಗತ್ತಿಗೆ ಕರೆ ನೀಡಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation