ಮುಂಬಯಿ ಉಚ್ಚ ನ್ಯಾಯಾಲಯವು ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ಕೋರಿದ ಸಿಪಿಐ(ಎಂ) ಪಕ್ಷಕ್ಕೆ ಛೀಮಾರಿ ಹಾಕಿದೆ!

ಮುಂಬಯಿ – ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ಕೋರಿದ ಸಿಪಿಐ(ಎಂ) (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)) ಪಕ್ಷವನ್ನು ಮುಂಬಯಿ ಉಚ್ಚ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಅನೇಕ ಸಮಸ್ಯೆಗಳಿರುವಾಗ ನೂರಾರು ಕಿಲೋಮೀಟರ್ ದೂರದ ಸಮಸ್ಯೆಗೆ ಏಕೆ ಪ್ರತಿಭಟನೆ ಮಾಡುತ್ತಿದ್ದೀರಿ? ನಿಮ್ಮ ನಿಲುವು ದೇಶದ ವಿದೇಶಾಂಗ ನೀತಿಗೆ ವಿರುದ್ಧವಾಗಿದೆ. ದೇಶಭಕ್ತರಾಗಿ, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಸಿಪಿಐ(ಎಂ) ಪಕ್ಷಕ್ಕೆ ಛೀಮಾರಿ ಹಾಕಿದ್ದು, ಆ ಪಕ್ಷದ ಅರ್ಜಿಯನ್ನು ತಿರಸ್ಕರಿಸಿದೆ.
ಮುಂಬಯಿ ಪೊಲೀಸರು ಸಿಪಿಐ(ಎಂ) ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ನಂತರ, ಅನುಮತಿ ಪಡೆಯಲು ಸಿಪಿಐ(ಎಂ) ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ವಿಷಯದ ಬಗ್ಗೆ ನ್ಯಾಯಾಲಯ ಹೀಗೆ ಹೇಳಿದೆ, “ನೀವು ದೇಶದಲ್ಲಿ ನೋಂದಾಯಿತ ಸಂಸ್ಥೆ. ನೀವು ಕಸ, ಮಾಲಿನ್ಯ, ಒಳಚರಂಡಿ, ಪ್ರವಾಹದ ಬಗ್ಗೆ ಏಕೆ ಪ್ರತಿಭಟಿಸುವುದಿಲ್ಲ? ದೇಶದಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿ ನಡೆಯುವ ವಿಷಯಗಳ ಬಗ್ಗೆ ಪ್ರತಿಭಟಿಸಲು ಹೊರಟಿದ್ದೀರಿ. ದೇಶದ ವಿದೇಶಾಂಗ ನೀತಿಯು ನಿಮ್ಮ ನಿಲುವಿಗಿಂತ ಭಿನ್ನವಾಗಿದೆ. ನಿಮ್ಮ ಈ ನಿಲುವಿನಿಂದ ವಿವಾದಗಳು ಉಂಟಾಗಬಹುದು. ನೀವು ಇದನ್ನು ಏಕೆ ಮಾಡಲು ಬಯಸುತ್ತೀರಿ? ಇದು ದೇಶದ ವಿದೇಶಾಂಗ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ? ಗಾಜಾ ಮತ್ತು ಪ್ಯಾಲೆಸ್ಟೈನ್ ನಡುವಿನ ಸಮಸ್ಯೆಗಳನ್ನು ನೋಡುವ ಬದಲು, ನಿಮ್ಮ ಸ್ವಂತ ದೇಶದ ಬಗ್ಗೆ ಗಮನಹರಿಸಿ,” ಎಂದು ಹೇಳಿದೆ.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein