ಪ್ರಧಾನಿ ಮೋದಿ ‘ಭಯೋತ್ಪಾದಕ’; ನಾಲಿಗೆ ಹರಿ ಬಿಟ್ಟ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝುಯವರ ಭಾವ ! – Modi Maldives Visit

ಮೋದಿ ಮಾಲ್ಡೀವ್ಸ್ ಭೇಟಿ ಬಗ್ಗೆಯೂ ವಿಷಕಾರಿದ್ದಾರೆ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 25-26 ರಂದು ಮಾಲ್ಡೀವ್ಸ್‌ ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಗೆ ಮುನ್ನವೇ, ಮಾಲ್ಡೀವ್ಸ್ ಅಧ್ಯಕ್ಷ ಮಹಮ್ಮದ್ ಮುಯಿಝು ಅವರ ಭಾವ ಮತ್ತು ಸಲಾಫಿ ಜಮಿಯತ್‌ ನ ನಾಯಕ ಶೇಖ್ ಅಬ್ದುಲ್ಲಾ ಬಿನ್ ಮಹಮ್ಮದ್ ಇಬ್ರಾಹಿಂ ಅವರು “ಪ್ರಧಾನಿ ನರೇಂದ್ರ ಮೋದಿ ಒಬ್ಬ ಭಯೋತ್ಪಾದಕರು. ಅವರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ಅವರು ಇಸ್ಲಾಂನ ಶತ್ರು. ಅವರು ಮುಸ್ಲಿಮರ ಭೂಮಿಯನ್ನು ಲೂಟಿ ಮಾಡಿದ್ದಾರೆ, ಹಾಗೆಯೇ ಕರ್ಣಾವತಿಯನ್ನು ಸ್ಮಶಾನವನ್ನಾಗಿ ಪರಿವರ್ತಿಸಿದ್ದಾರೆ” ಎಂದು ಆಧಾರರಹಿತ ಆರೋಪ ಮಾಡಿದ್ದಾರೆ. ಇದರ ನಂತರ, ಅವರ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ತದನಂತರ, ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ತೆಗೆದುಹಾಕಿದರು (ಡಿಲೀಟ್ ಮಾಡಿದರು). ಮೋದಿಯವರನ್ನು ಮಾಲ್ಡೀವ್ಸ್‌ ಗೆ ಆಹ್ವಾನಿಸುವುದು ದೊಡ್ಡ ತಪ್ಪು ಎಂದು ಕೂಡ ಹೇಳಿದ್ದಾರೆ. ಶೇಖ್ ಅಬ್ದುಲ್ಲಾ ಅವರು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರ ಪತ್ನಿ ಸಾಜಿದಾ ಮಹಮ್ಮದ್ ಸ್ಥಾಪಿಸಿದ ಸಂಘಟನೆಗೆ ಸಂಬಂಧ ಹೊಂದಿದ್ದಾರೆ.

ಪ್ರಧಾನಿ ಮೋದಿಯವರ ಮಾಲ್ಡೀವ್ಸ್‌ ಗೆ ಮೂರನೇ ಭೇಟಿ

ಪ್ರಧಾನಿ ಮೋದಿ ಜುಲೈ 25 ರಂದು ಮಾಲ್ಡೀವ್ಸ್‌ ಗೆ ತಲುಪಲಿದ್ದಾರೆ. ಜುಲೈ 26 ರಂದು ಅಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಲಿದ್ದಾರೆ. ಈ ವೇಳೆ ಅವರು ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ. ಮೋದಿಯವರ ಮಾಲ್ಡೀವ್ಸ್‌ ಗೆ ಇದು ಮೂರನೇ ಭೇಟಿಯಾಗಿದೆ. ಈ ಭೇಟಿಯು ವ್ಯಾಪಾರ, ಕಡಲ ಭದ್ರತೆ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸಲಿದೆ.

ಅಕ್ಟೋಬರ್ 2024 ರಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರೊಂದಿಗೆ ನಡೆದ ಚರ್ಚೆಯ ನಂತರ, ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೆಲಸ ಮಾಡಲು ಪ್ರಾರಂಭಿಸಿವೆ.

ಸಂಪಾದಕೀಯ ನಿಲುವು

  • ಮುಯಿಝು ಅವರ ಭಾವ ಮಾಡಿದ ಈ ವಿಷಕಾರಿ ಹೇಳಿಕೆಗಳ ಬಗ್ಗೆ ಮುಯಿಝು ಮೌನವಾಗಿರುವುದು ಏಕೆ? ಅವರು ತಮ್ಮ ಭಾವನ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅವರೂ ತಮ್ಮ ಭಾವನ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ ಎಂದಾಗುತ್ತದೆ!
  • ಮಾಲ್ಡೀವ್ಸ್ ಚೀನಾದ ಕೈಗೊಂಬೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅದರ ಭಾರತ ವಿರೋಧಿ ಚಟುವಟಿಕೆಗಳು ಎಲ್ಲರಿಗೂ ತಿಳಿದಿವೆ. ಹೀಗಿರುವಾಗ, ಮೋದಿಯವರ ಭೇಟಿಯ ಹಿಂದೆ ಕೆಲವು ರಾಜತಾಂತ್ರಿಕ ಕಾರಣಗಳಿರಬಹುದು. ಹಾಗಿದ್ದರೂ, ಭಾರತ ವಿರೋಧಿ ಮಾಲ್ಡೀವ್ಸ್ ಅನ್ನು ದಾರಿಗೆ ತರುವುದು ಅವಶ್ಯಕವಾಗಿದೆ.