ರತ್ನಗಿರಿ: ರಾಜಿವಡಾ ಪ್ರದೇಶದ ‘ಬಾಂಗ್ಲಾದೇಶ’ ಹೆಸರನ್ನು ಬದಲಾಯಿಸಲು ಶಿವಸೇನೆ ಸರಕಾರಕ್ಕೆ ಮನವಿ

ರತ್ನಗಿರಿ – ನಗರದ ರಾಜಿವಡಾ ಪ್ರದೇಶದಲ್ಲಿನ ಮುಸ್ಲಿಂ ವಸತಿಯಲ್ಲಿ ಹಿಂದಿನ ಕೆಲವು ವಲಸಿಗರನ್ನು ‘ಬಾಂಗ್ಲಾದೇಶಿ’ ಎಂದು ಕರೆಯಲಾಗುತ್ತಿತ್ತು, ಇದರಿಂದ ಈ ಪ್ರದೇಶಕ್ಕೆ ‘ಬಾಂಗ್ಲಾದೇಶ’ ಎಂಬ ಹೆಸರು ಬಂದಿದೆ. ಇದೇ ವಸತಿಯಲ್ಲಿ ಕೆಲವು ಮುಸ್ಲಿಮರು ಅನಧಿಕೃತವಾಗಿ ವಾಸಿಸುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ‘ಸ್ವತಂತ್ರ ಭಾರತದಲ್ಲಿ ‘ಬಾಂಗ್ಲಾದೇಶ’ ಎಂಬುದು ಅನುಚಿತ ಹೆಸರು, ಇದನ್ನು ತಕ್ಷಣ ಬದಲಾಯಿಸಬೇಕು’ ಎಂದು ಶಿವಸೇನೆಯು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯ ನಂತರ, ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಉದಯ ಸಾಮಂತ ಅವರು ಪತ್ರಕರ್ತರಿಗೆ, “ರಾಜಿವಡಾ ಪ್ರದೇಶದ ‘ಬಾಂಗ್ಲಾದೇಶ’ ಹೆಸರನ್ನು ತೆಗೆದುಹಾಕುವ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಮತ್ತುಆ ಕುರಿತು ನಿರ್ದೇಶನಗಳನ್ನು ನೀಡಿದ್ದೇನೆ” ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಉದಯ ಸಾಮಂತ ಅವರು ಮಾತನಾಡಿ,
1. ಶಿವಸೇನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ರಾಜಿವಡಾಕ್ಕೆ ಹೋಗುವ ರಸ್ತೆಯಲ್ಲಿ ಶ್ರೀದೇವ ವಿಶ್ವೇಶ್ವರ ದೇವಸ್ಥಾನದ ಪಕ್ಕದಲ್ಲಿ ಬಾಂಗ್ಲಾದೇಶ ಎಂಬ ವಸತಿ ಇದೆ ಎಂದು ಹೇಳಿದ್ದರು. ರತ್ನಗಿರಿ ನಗರ ಪರಿಷತ್ತಿನ ದಾಖಲೆಗಳಿಂದ ಬಾಂಗ್ಲಾದೇಶ ಎಂಬ ಹೆಸರನ್ನು ತೆಗೆದುಹಾಕಬೇಕೆಂದು ಅವರು ಪ್ರಮುಖವಾಗಿ ಬೇಡಿಕೆ ಇಟ್ಟಿದ್ದರು.
2. ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ ನಂತರ, ಇದೇ ಬೇಡಿಕೆಯ ಮನವಿಯನ್ನು ನಗರ ಪರಿಷತ್ತಿನ ಮುಖ್ಯ ಅಧಿಕಾರಿಗೆ ಸಲ್ಲಿಸಿದ್ದರು.
3. ರತ್ನಗಿರಿ ನಗರದ ದಾಖಲೆಗಳಿಂದ ಬಾಂಗ್ಲಾದೇಶ ಎಂಬ ಹೆಸರನ್ನು ತೆಗೆದುಹಾಕುವ ನಿರ್ಧಾರವನ್ನು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ತೆಗೆದುಕೊಂಡಿದ್ದೇನೆ ಮತ್ತು ಈ ಕುರಿತು ಜಿಲ್ಲಾಧಿಕಾರಿ ಮತ್ತು ಮುಖ್ಯ ಅಧಿಕಾರಿಗೆ ನಿರ್ದೇಶನಗಳನ್ನು ನೀಡಿದ್ದೇನೆ.
‘ಶ್ರೀ ದೇವ ವಿಶ್ವೇಶ್ವರ ಮಂದಿರ ಮಾರ್ಗ’ ಎಂದು ನಾಮಕರಣ ಮಾಡಲಾಗುವುದು! – ಜಿಲ್ಲಾ ಉಸ್ತುವಾರಿ ಸಚಿವ ಉದಯ ಸಾಮಂತರಾಜಿವಡಾ ಮತ್ತು ಶ್ರೀದೇವ ವಿಶ್ವೇಶ್ವರ ದೇವಸ್ಥಾನದ ನಡುವಿನ ಪ್ರದೇಶವನ್ನು ‘ಬಾಂಗ್ಲಾದೇಶ’ ಎಂಬ ಹೆಸರಿನಿಂದ ಸಂಬೋಧಿಸುವುದು ನಮ್ಮ ದೇಶ, ಜಿಲ್ಲೆ ಮತ್ತು ರಾಜ್ಯದ ದೃಷ್ಟಿಯಿಂದ ಅನುಚಿತವಾಗಿದೆ ಎಂಬುದನ್ನು ಶಿವಸೇನೆಯ ಪದಾಧಿಕಾರಿಗಳು ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ ಮತ್ತು ಅದರಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ರಾಜಿವಡಾಕ್ಕೆ ಹೋಗುವ ಮಾರ್ಗಕ್ಕೆ ‘ಶ್ರೀ ದೇವ ವಿಶ್ವೇಶ್ವರ ಮಂದಿರ ಮಾರ್ಗ’ ಎಂದು ನಾಮಕರಣ ಮಾಡುವಂತೆ ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉದಯ ಸಾಮಂತ ತಿಳಿಸಿದರು. |
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!