ಪ್ರಧಾನ ಮಂತ್ರಿಗಳೊಂದಿಗೆ ತನ್ನ ನಕಲಿ ಚಿತ್ರಗಳನ್ನು ತೋರಿಸಿ, ವಿದೇಶದಲ್ಲಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ನಕಲಿ ರಾಯಭಾರಿ ಹಣ ವಸೂಲಿ ಮಾಡುತ್ತಿದ್ದ!

ಘಾಜಿಯಾಬಾದ್ (ಉತ್ತರ ಪ್ರದೇಶ) – ನೋಯ್ಡಾ ವಿಶೇಷ ಕಾರ್ಯಪಡೆ ಕವಿನಗರ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರಾಯಭಾರ ಕಚೇರಿಯನ್ನು ಪತ್ತೆ ಹಚ್ಚಿ, ಅದರ ನಿರ್ದೇಶಕ ಹರ್ಷವರ್ಧನ ಜೈನ್‌ನನ್ನು ಬಂಧಿಸಿದೆ. ಹರ್ಷವರ್ಧನ ಜೈನ್ ತನ್ನನ್ನು ವೆಸ್ಟ್ ಆರ್ಕ್ಟಿಕಾ, ಸಬೋರ್ಗಾ, ಪಾಲ್ವಿಯಾ ಮತ್ತು ಲಾಡೋನಿಯಾ ಎಂಬ ಹೆಸರಿನ ಕಾಲ್ಪನಿಕ ದೇಶಗಳ ‘ರಾಯಭಾರಿ’ ಎಂದು ಹೇಳಿಕೊಳ್ಳುತ್ತಿದ್ದನು. ವಿಶೇಷವೆಂದರೆ, ಈ ಹೆಸರುಗಳ ಯಾವುದೇ ಅಧಿಕೃತ ದೇಶಗಳು ಅಸ್ತಿತ್ವದಲ್ಲಿಲ್ಲ. ಈ ನಕಲಿ ರಾಯಭಾರ ಕಚೇರಿಯಿಂದ ಅನೇಕ ವಸ್ತುಗಳು ಮತ್ತು 47 ಲಕ್ಷ 70 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿ, ರಾಷ್ಟ್ರಪತಿ ಮತ್ತು ಇತರ ಗಣ್ಯ ವ್ಯಕ್ತಿಗಳೊಂದಿಗೆ ನಕಲಿ ಚಿತ್ರಗಳನ್ನು ಸೃಷ್ಟಿಸಿ, ಜೈನ್ ಜನರಿಗೆ ‘ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ’ ಎಂದು ಹೇಳಿ ಅವರಿಂದ ಹಣ ವಸೂಲಿ ಮಾಡುತ್ತಿದ್ದನು. ತಾಂತ್ರಿಕ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವಿತರಕ ಅದ್ನಾನ್ ಖಶೋಗಿ ಅವರೊಂದಿಗೂ ಆತನಿಗೆ ಸಂಬಂಧವಿರುವುದು ಬಯಲಾಗಿದೆ.
ಸಂಪಾದಕೀಯ ನಿಲುವುಒಂದೆಡೆ ನಕಲಿ ನ್ಯಾಯಾಲಯಗಳು ನಡೆಯುತ್ತವೆ, ಇನ್ನೊಂದೆಡೆ ನಕಲಿ ರಾಯಭಾರ ಕಚೇರಿಗಳು! ಇಂತಹ ಘಟನೆಗಳಿಂದ ಈ ದೇಶ ನಿಜಕ್ಕೂ ‘ರಾಮಭರೋಸೆ’ (ದೇವರ ಮೇಲೆ ಭಾರ) ನಡೆಯುತ್ತಿದೆ ಎಂದು ಹೇಳಬಹುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!