ಪತ್ನಿ ಗೂಢಚಾರಿಯಾಗಿದ್ದು, ರಷ್ಯಾ ರಾಯಭಾರ ಕಚೇರಿಯಲ್ಲಿದ್ದ ‘ಪ್ರಿಯಕರ’ ಅಧಿಕಾರಿಯೇ ಪರಾರಿಯಾಗಲು ನೆರವು ನೀಡಿದ್ದಾನೆ ಎಂದು ಮಹಿಳೆಯ ಭಾರತೀಯ ಪತಿ ಆರೋಪ

ನವದೆಹಲಿ – ಭಾರತೀಯ ಪತಿ ಸೈಕತ್ ಬಸು ಮತ್ತು ಅವರ ರಷ್ಯಾದ ಪತ್ನಿ ವಿಕ್ಟೋರಿಯಾ ಅವರ ವಿಚ್ಛೇದನ ಪ್ರಕರಣದಲ್ಲಿ ಮಗುವಿನ ಕಸ್ಟಡಿ ಸಂಬಂಧಿತ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ, ವಿಕ್ಟೋರಿಯಾ ತನ್ನ ಮಗನೊಂದಿಗೆ ಭಾರತದಿಂದ ರಷ್ಯಾಕ್ಕೆ ಕಾನೂನುಬಾಹಿರವಾಗಿ ಪಲಾಯನ ಮಾಡಿದ್ದಾರೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿ ಜೈಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಜುಲೈ 21 ರಂದು ನ್ಯಾಯಾಲಯಕ್ಕೆ, ಜುಲೈ 7 ರಿಂದ ನಾಪತ್ತೆಯಾಗಿದ್ದ ಮಹಿಳೆ ಮೊದಲು ಬಿಹಾರಕ್ಕೆ ಹೋಗಿದ್ದರು. ಅಲ್ಲಿಂದ ನೇಪಾಳಕ್ಕೆ, ನಂತರ ವಿಮಾನದ ಮೂಲಕ ಯುಎಇ ಮಾರ್ಗವಾಗಿ ರಷ್ಯಾಕ್ಕೆ ತೆರಳಿದ್ದಾರೆ, ಎಂದು ಹೇಳಿದ್ದಾರೆ. ಇದಕ್ಕೆ ನ್ಯಾಯಾಲಯವು, ಮಹಿಳೆ ನಮ್ಮ ಆದೇಶಗಳನ್ನು ಉಲ್ಲಂಘಿಸಿ ದೇಶ ತೊರೆದಿದ್ದರೆ, ಅದು ನ್ಯಾಯಾಲಯದ ಆದೇಶಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಏನಿದು ಪ್ರಕರಣ?
1. ಸೈಕತ್ ಬಸು ಚೀನಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ರಷ್ಯಾದ ಪ್ರಜೆ ವಿಕ್ಟೋರಿಯಾ ಪರಿಚಯವಾದರು. ಇಬ್ಬರೂ ಭಾರತಕ್ಕೆ ಬಂದು 2017 ರಲ್ಲಿ ವಿವಾಹವಾದರು. 2020 ರಲ್ಲಿ ಅವರಿಗೆ ಒಂದು ಮಗು ಜನಿಸಿತು.

2. ಕಾಲಾನಂತರದಲ್ಲಿ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದರು. ದೆಹಲಿಯ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇಬ್ಬರೂ ಮಗುವಿನ ಪೋಷಣೆ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಗುವಿನ ಕಸ್ಟಡಿಗಾಗಿ ಒಂದು ಒಪ್ಪಂದ ಮಾಡಿಕೊಳ್ಳಲಾಯಿತು, ಇದರ ಅಡಿಯಲ್ಲಿ ಮಗು ವಾರದಲ್ಲಿ 3 ದಿನ ತನ್ನ ತಾಯಿಯೊಂದಿಗೆ ಇರಬೇಕಿತ್ತು. ಆದರೆ, 2025 ರ ಮೇ 22 ರಿಂದ ವಿಕ್ಟೋರಿಯಾ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ.
3. ಮೊದಲು ವಿಕ್ಟೋರಿಯಾ ಕಾಡಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಸೈಕತ್ ಮತ್ತು ಅವರ ಕುಟುಂಬಕ್ಕೆ ಅವಳು ರಷ್ಯಾದ ಗೂಢಚಾರಿಯಾಗಿದ್ದಾಳೆ ಎಂದು ಸಂಶಯವಿದೆ. ವಿಕ್ಟೋರಿಯಾ ಯಾವಾಗಲೂ ತನ್ನ ಪತಿ ಸೈಕತ್ ಅವರನ್ನು ಕೋಕಲಾತಾದ ಸೇನೆಯ ಪೂರ್ವ ಕಮಾಂಡ್‌ನ ಪ್ರಧಾನ ಕಚೇರಿ ಫೋರ್ಟ್ ವಿಲಿಯಮ್‌ಗೆ ಕರೆದೊಯ್ಯಲು ಒತ್ತಾಯಿಸುತ್ತಿದ್ದರು ಎಂದು ಸೈಕತ್ ಹೇಳಿದ್ದಾರೆ.
4. ಜುಲೈ 4 ರಂದು, ವಿಕ್ಟೋರಿಯಾ ರಷ್ಯಾದ ಒಬ್ಬ ರಾಯಭಾರಿಯೊಂದಿಗೆ ಹಿಂಬಾಗಿಲಿನಿಂದ ರಾಯಭಾರ ಕಚೇರಿಯೊಳಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಆ ಮಹಿಳೆ ರಾಯಭಾರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಆತನೇ ಭಾರತದಿಂದ ಪಲಾಯನ ಮಾಡಲು ಸಹಾಯ ಮಾಡಿದ್ದಾನೆ ಎಂದು ಪತಿ ಆರೋಪಿಸಿದ್ದಾರೆ.
5. ಈ ಬಗ್ಗೆ ಸುಪ್ರೀಂ ಕೋರ್ಟ್, ಇದರಲ್ಲಿ ಸತ್ಯಾಂಶವಿದ್ದರೆ, ರಾಯಭಾರ ಕಚೇರಿಯ ಅಧಿಕಾರಿಯ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಸಂಬಂಧಪಟ್ಟ ರಾಯಭಾರಿಯ ಮನೆಯ ಮೇಲೆ ದಾಳಿ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!