
ಜೆರುಸಲೆಮ್ (ಇಸ್ರೇಲ್) – ಇಸ್ರೇಲ್‌ಗೆ ಇರಾನ್‌ನಂತೆಯೇ ಯೆಮೆನ್‌ನ ಹೂತಿ ಬಂಡುಕೋರರಿಂದ ಬೆದರಿಕೆ ಇದೆ. ಕೆಂಪು ಸಮುದ್ರದಲ್ಲಿರುವ ಇಸ್ರೇಲ್‌ನ ಎಲೈಟ್ ಬಂದರು ಹೂತಿಗಳಿಂದಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಇಸ್ರೇಲಿ ವಾಯುಪಡೆಯು ಯೆಮೆನ್‌ನಲ್ಲಿ ವಾಯು ದಾಳಿಗಳ ಸರಣಿಯನ್ನು ಪ್ರಾರಂಭಿಸಿದ್ದು, ಹೋದೈದಾ ಪ್ರದೇಶದ ಜೊತೆಗೆ ಪಶ್ಚಿಮ ಕರಾವಳಿಯನ್ನು ಗುರಿಯಾಗಿಸಿದೆ. ಯೆಮೆನ್ ಮೇಲಿನ ಇಸ್ರೇಲ್‌ನ ಇದು 12ನೇ ಆಕ್ರಮಣವಾಗಿದ್ದು, ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಈ ದಾಳಿ ನಡೆಸಲಾಗಿದೆ.
ಹೂತಿಗಳು ಮತ್ತು ಇಸ್ರೇಲ್ ನಡುವಿನ ವಿವಾದದ ಮೂಲ!
ಹೂತಿ ಬಂಡುಕೋರರು ಗಾಜಾದಲ್ಲಿ ಹಮಾಸ್‌ಗೆ ಬೆಂಬಲ ನೀಡಿದಾಗಿನಿಂದ ಇಸ್ರೇಲ್ ಅವರನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಇದರಿಂದಾಗಿ ಹೂತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಇಸ್ರೇಲ್-ಅಮೆರಿಕಕ್ಕೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ. ಆದ್ದರಿಂದಲೇ, ಹಮಾಸ್ ಮತ್ತು ಹಿಜ್ಬುಲ್ಲಾ ಅವರಂತೆಯೇ ಹೂತಿ ಬಂಡುಕೋರರಿಂದ ಇರುವ ಅಪಾಯವನ್ನು ಬೇರುಸಹಿತ ನಾಶಪಡಿಸಲು ಇಸ್ರೇಲ್ ಬಯಸಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman