ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ರಾಜ್ಯ ಸರಕಾರವೇ ತೆಗೆದುಕೊಳ್ಳಬೇಕಾಗುವುದು !

  • ತ್ರಿಭಾಷಾ ಸೂತ್ರವನ್ನು ಶಾಶ್ವತವಾಗಿರಿಸಲು ಕೇಂದ್ರ ಸರಕಾರ ಬದ್ಧ

  • ಮೂರನೇ ಭಾಷೆಯ ನಿರ್ಣಯವನ್ನು ರಾಜ್ಯ ಸರಕಾರಕ್ಕೆ ಬಿಡಲಾಗಿದೆ

ನವದೆಹಲಿ – ರಾಜ್ಯದಲ್ಲಿ 1ನೇ ತರಗತಿಯಿಂದ ಮೂರನೇ ಭಾಷೆಯಾಗಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಈಗ ಮಹಾರಾಷ್ಟ್ರ ರಾಜ್ಯ ಸರಕಾರವೇ ನಿರ್ಧರಿಸಬೇಕಿದೆ. ರಾಜ್ಯದಲ್ಲಿ ಹಿಂದಿ ಭಾಷೆ ಕಡ್ಡಾಯಗೊಳಿಸುವ ಕುರಿತು ಮಹಾರಾಷ್ಟ್ರ ರದ್ದುಪಡಿಸಿದ ಸರಕಾರದ ನಿರ್ಧಾರದ ಬಗ್ಗೆ ತಮಿಳುನಾಡಿನ ಡಿ.ಎಂ.ಕೆ.(ದ್ರವಿಡ ಮುನ್ನೇತ್ರ ಕಳಘಮ್, ಅಂದರೆ ದ್ರವಿಡ ಪ್ರಗತಿ ಸಂಘ) ಪಕ್ಷದ ಸಂಸದರಾದ ಮಾಥೇಶ್ವರನ್ ವಿ.ಎಸ್. ರವರು ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದರು. ಇದಕ್ಕೆ ಕೇಂದ್ರ ಶಿಕ್ಷಣ ರಾಜ್ಯಸಚಿವರಾದ ಪಂಕಜ ಚೌಧರಿಯವರು ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರದಲ್ಲಿ ಚೌಧರಿಯವರು `ತ್ರಿಭಾಷಾ ಸೂತ್ರದಲ್ಲಿ ಯಾವ ಭಾಷೆಗಳನ್ನು ಕಲಿಸಬೇಕು ಎಂಬುದು ರಾಜ್ಯ ಸರಕಾರದ ನಿರ್ಧಾರವಾಗಿದೆ. ಮಹಾರಾಷ್ಟ್ರ ಸರಕಾರವು ಸರಕಾರದ ನಿರ್ಧಾರವನ್ನು ರದ್ದುಪಡಿಸಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದೆ. ಹೀಗಿದ್ದರೂ, ತ್ರಿಭಾಷಾ ಸೂತ್ರವು ಮುಂದುವರಿಯಲಿದೆ; ಆದರೆ ಯಾವ ಭಾಷೆಗಳನ್ನು ಕಲಿಸಬೇಕು ಎಂಬುದು ರಾಜ್ಯ ಸರಕಾರದ ನಿರ್ಧಾರವಾಗಿದೆ. ಅದಕ್ಕಾಗಿ ಕೇಂದ್ರ ಸರಕಾರದಿಂದ ಯಾವುದೇ ಒತ್ತಡವಿಲ್ಲ. ಮಾಧ್ಯಮಿಕ ಶಿಕ್ಷಣ ಮುಗಿಯುವವರೆಗೆ 3 ಭಾಷೆಗಳನ್ನು ಕಲಿಯಬೇಕು. ಇದರಿಂದ ವಿದ್ಯಾರ್ಥಿಗಳು 6 ಅಥವಾ 7ನೇ ತರಗತಿಯಲ್ಲಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. 3 ರಲ್ಲಿ 2 ಭಾಷೆಗಳು ಭಾರತೀಯವಾಗಿರಬೇಕು ಎಂಬುದು ರಾಷ್ಟ್ರೀಯ ಧೋರಣೆಯ ದೃಷ್ಟಿಕೋನದಿಂದ ಕೇಂದ್ರ ಸರಕಾರದ ಅಪೇಕ್ಷೆಯಾಗಿದೆ.’ ಹಾಗಾಗಿ, ಈಗ ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಈಗ ರಾಜ್ಯ ಸರಕಾರವೇ ತೆಗೆದುಕೊಳ್ಳಬೇಕಿದೆ, ಎಂದು ಹೇಳಿದರು.

ಹಿಂದಿ ಭಾಷೆಯ ಕಡ್ಡಾಯಕ್ಕೆ ಸಂಬಂಧಿಸಿದ ಇಲ್ಲಿಯವರೆಗಿನ ಬೆಳವಣಿಗೆಗಳು!

1. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಮೂರನೇ ಭಾಷೆಯಾಗಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ವಿಷಯವು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. `1ನೇ ತರಗತಿಯಿಂದ ಹಿಂದಿ ಭಾಷೆ ಕಡ್ಡಾಯ ಬೇಡ’ ಎಂಬುದು ಮಹಾರಾಷ್ಟ್ರದ ಅನೇಕ ಪಕ್ಷಗಳು ಮತ್ತು ಸಂಘಟನೆಗಳ ನಿಲುವಾಗಿತ್ತು.

2. ಈ ಕಡ್ಡಾಯದ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕರಾದ ರಾಜ ಠಾಕ್ರೆ ಧ್ವನಿ ಎತ್ತಿದರು. ನಂತರ ರಾಜರವರ ಸಹೋದರ ಉದ್ಧವ ಠಾಕ್ರೆ ಕೂಡ ಆಂದೋಲನದ ಎಚ್ಚರಿಕೆ ನೀಡಿದರು. ಇದರೊಂದಿಗೆ ಅನೇಕ ಸಂಘಟನೆಗಳು, ಹಾಗೂ ಕಲಾವಿದರೂ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.

3. ರಾಜ್ಯಾದ್ಯಂತ ಹೆಚ್ಚಿದ ವಿರೋಧದಿಂದಾಗಿ, ಅಂತಿಮವಾಗಿ ರಾಜ್ಯ ಸರಕಾರವು ತ್ರಿಭಾಷಾ ಸೂತ್ರದ ಕುರಿತು ಹೊರಡಿಸಿದ್ದ ಎರಡೂ ಸರಕಾರಿ ನಿರ್ಣಯಗಳನ್ನು ಹಿಂಪಡೆಯಬೇಕಾಯಿತು.

4. ಇದರ ನಂತರ, ರಾಜ್ಯ ಸರಕಾರವು ತ್ರಿಭಾಷಾ ಸೂತ್ರವನ್ನು ಅಧ್ಯಯನ ಮಾಡಲು ಡಾ. ನರೇಂದ್ರ ಜಾಧವ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯ ವರದಿ ಬಂದ ನಂತರವೇ ತ್ರಿಭಾಷಾ ಸೂತ್ರದ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.