ಜೋಗೇಶ್ವರಿಯಲ್ಲಿ ಕಾವಡ್ ಯಾತ್ರೆಯ ಮೇಲೆ ಮೊಟ್ಟೆ ಎಸೆತ !

ಮುಂಬಯಿ – ವಿಶ್ವ ಹಿಂದೂ ಪರಿಷತ್ ಮತ್ತು ‘ಶ್ರೀ ಖಾಂಡೇಶ್ವರ ಮಹಾರಾಜ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಜೋಗೇಶ್ವರಿಯಲ್ಲಿ ಕಾವಡ್ ಯಾತ್ರೆ ನಡೆಸಲಾಯಿತು. ಜೋಗೇಶ್ವರಿ ಪಶ್ಚಿಮದ ಯಾದವನಗರದಲ್ಲಿರುವ ಹನುಮಾನ್ ದೇವಾಲಯದಿಂದ ಈ ಯಾತ್ರೆ ಪ್ರಾರಂಭವಾಯಿತು. 500 ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದ ಈ ಯಾತ್ರೆಯಲ್ಲಿ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಈ ಕಾವಡ್ ಯಾತ್ರೆಯ ಸಮಾರೋಪ ಖಾಂಡೇಶ್ವರ ದೇವಾಲಯದಲ್ಲಿ ನಡೆಯಬೇಕಿತ್ತು; ಆದರೆ ಜೋಗೇಶ್ವರಿಯ ಕ್ಯಾಪ್ಟನ್ ಸಾಮಂತ ಮಾರ್ಗದ ಎ.ಆರ್.ಬಿ. ಹೈಟ್ಸ್ ಕಟ್ಟಡದ ಎದುರಿನಿಂದ ಹಾದುಹೋಗುತ್ತಿದ್ದಾಗ, ಯಾತ್ರೆಯಲ್ಲಿದ್ದ ಮಹಿಳೆಯರ ಮೇಲೆ ಇದ್ದಕ್ಕಿದ್ದಂತೆ ಮೊಟ್ಟೆ ಎಸೆಯಲಾಯಿತು. ಇನ್ನೊಂದು ಮೊಟ್ಟೆ ಕಾರಿನ ಮೇಲೆ ಬಿದ್ದಿತು ಎಂದು ಆಯೋಜಕ ಗೋವಿಂದ ಬೆನವಂಶಿ ಹೇಳಿದ್ದಾರೆ. ಈ ವರ್ಷ ಯಾತ್ರೆಯ ಎರಡನೇ ವರ್ಷವಾಗಿದೆ; ಆದರೆ ಈ ವರ್ಷವೇ ಇಂತಹ ಘಟನೆ ನಡೆದಿದೆ ಎಂದು ಆಯೋಜಕರೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪದಡಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.
… ಇಲ್ಲದಿದ್ದರೆ ರಸ್ತೆಗೆ ಇಳಿದು ಪ್ರತಿಭಟಿಸುತ್ತೇವೆ! – ಬಜರಂಗದಳದ ಎಚ್ಚರಿಕೆಇಂತಹ ಘಟನೆಗಳು ಉದ್ದೇಶಪೂರ್ವಕವಾಗಿ ನಡೆಯುತ್ತಿವೆ. ಸಂಬಂಧಪಟ್ಟವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ‘ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾವು ರಸ್ತೆಗೆ ಇಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ. |
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!