ಬಾಂಗ್ಲಾದೇಶದಲ್ಲಿ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ರಾಜಕೀಯ ಪಕ್ಷದ 6 ನಾಯಕರ ಬಂಧನ !

ಬಾಲಕಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

ಢಾಕಾ (ಬಾಂಗ್ಲಾದೇಶ) – ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ (‘ಬಿ.ಎನ್.ಪಿ.’)ಯ 6 ಕಾರ್ಯಕರ್ತರು ಜೂನ್ 27ರಂದು ಅಪ್ರಾಪ್ತ ಹಿಂದೂ ಆದಿವಾಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಘಟನೆಯು ಚಿತಗಾವ ವಿಭಾಗದ ಖಾಗ್ರಾಛಡಿಯಲ್ಲಿ ನಡೆದಿದೆ. ಸಂತ್ರಸ್ತೆಯು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅತ್ಯಾಚಾರಿಗಳು ಅತ್ಯಾಚಾರದ ವಿಡಿಯೋವನ್ನು ಸಹ ಮಾಡಿ, ಬಾಲಕಿಗೆ ಸುಮ್ಮನಿರುವಂತೆ ಬೆದರಿಕೆ ಹಾಕಿದ್ದರು. ಸಾರ್ವಜನಿಕ ನಾಚಿಕೆಯಿಂದಾಗಿ ಸಂತ್ರಸ್ತೆ ತನ್ನ ಕುಟುಂಬಕ್ಕೂ ಈ ಬಗ್ಗೆ ಏನೂ ತಿಳಿಸಿರಲಿಲ್ಲ. ಕೊನೆಗೆ ಜುಲೈ 12ರಂದು ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಅವಳ ಪ್ರಾಣ ಉಳಿದಿದೆ. ಪ್ರಜ್ಞೆಗೆ ಬಂದ ನಂತರ ಅವಳು ತನ್ನ ಕುಟುಂಬಕ್ಕೆ ಸತ್ಯವನ್ನು ಹೇಳಿದ್ದಾಳೆ. ಇದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಎಲ್ಲಾ 6 ಬಲಾತ್ಕಾರಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಅರಮಾನ ಹುಸೇನ, ಇಮೋನ ಹುಸೇನ, ಇನಾಯತ ಹುಸೇನ, ಸದ್ದಾಮ ಹುಸೇನ, ಮಹಮ್ಮದ ಸೊಹೇಲ ಇಸ್ಲಾಮ ಮತ್ತು ಮಹಮ್ಮದ ಮುನೀರ ಇಸ್ಲಾಮ ಎಂದು ಗುರುತಿಸಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾರೂ ದಿಕ್ಕಿಲ್ಲ. ಭಾರತವೂ ಕೈಚೆಲ್ಲಿದೆ. ಇದರಿಂದಾಗಿ ಅಲ್ಲಿನ ಹಿಂದೂಗಳು ಸ್ವಸಂರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಹಿಡಿದರೆ ಆಶ್ಚರ್ಯವೇನು ?