ಇಂದು ನಾಗರಪಂಚಮಿ ಈ ನಿಮಿತ್ತ…

೧. ನಾಗರಪಂಚಮಿ ನಿಮಿತ್ತ ಹಿತಕಾರಿ ವ್ಯವಸ್ಥೆ ಮಾಡಿರುವ ಋಷಿಗಳು ‘ಸಾಮಾನ್ಯವಾಗಿ ಬಿಲಗಳಲ್ಲಿ ವಾಸಿಸುವ ಹಾವುಗಳು ಮಳೆಗಾಲದಲ್ಲಿ ಬಿಲಗಳಲ್ಲಿ ನೀರು ತುಂಬಿದ್ದರಿಂದ ಅಸಹಾಯಕ ಮತ್ತು ನಿರಾಶ್ರಿತವಾಗುತ್ತವೆ. ಆದ್ದರಿಂದ, ಇತರ ದಿನಗಳಲ್ಲಿ ಹಾವುಗಳು ಕಾಣಿಸದಿದ್ದರೂ; ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಮತ್ತು ಹೊಲಗಳ ಸುತ್ತಮುತ್ತ ಅವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹಾವನ್ನು ನೋಡಿ ಮನಸ್ಸಿನಲ್ಲಿ ದ್ವೇಷ ಮತ್ತು ಭಯ ಹುಟ್ಟಬಾರದು ಎಂದು, ಅವುಗಳ ಬಗ್ಗೆ ಪ್ರೀತಿ ಮತ್ತು ಜ್ಞಾನದೃಷ್ಟಿ ಜಾಗೃತವಾಗುವಂತಹ ಹಿತಕಾರಿ ಮತ್ತು ಮಂಗಳಕರ ವ್ಯವಸ್ಥೆಯನ್ನು ಋಷಿಗಳು ಮಾಡಿದ್ದಾರೆ.
೨. ಶಿವನು ಹಾವನ್ನು ತನ್ನ ಶೃಂಗಾರದಲ್ಲಿಟ್ಟುಕೊಂಡಿರುವುದು ಹಾವಿಗೆ ಸುಗಂಧ ಬಹಳ ಇಷ್ಟವಾಗಿರುತ್ತದೆ. ಹಾವು ಶ್ರೀಗಂಧದ ಮರವನ್ನು ಸುತ್ತಿಕೊಂಡಿರುತ್ತದೆ. ಕೇದಿಗೆ ಇತ್ಯಾದಿ ಸುಗಂಧಭರಿತ ಹೂವುಗಳ ಮರಗಳು ಅದಕ್ಕೆ ಬಹಳ ಇಷ್ಟವಾಗುತ್ತದೆ. ಅಂತಹ ಹಾವನ್ನು ಮಹಾದೇವನು ತನ್ನ ಶೃಂಗಾರದಲ್ಲಿ ಇಟ್ಟುಕೊಂಡಿದ್ದಾನೆ, ಅಂದರೆ ಯಾರ ಜೀವನದಲ್ಲಿ ಸದ್ಗುಣಗಳ ಸುವಾಸನೆಗೆ ಗೌರವ ಮತ್ತು ಪ್ರೀತಿ ಇದೆಯೋ, ಅಂತಹವರನ್ನು ತನ್ನಲ್ಲಿ ಇಟ್ಟುಕೊಂಡರೆ ನಮ್ಮ ಜೀವನದ ಶೋಭೆಯೂ ಹೆಚ್ಚುತ್ತದೆ.
೩. ಹಾವಿಗೆ ಯಾರಾದರೂ ತೊಂದರೆ ಕೊಟ್ಟರೆ ಮಾತ್ರ ಅದು ತನ್ನ ಪ್ರಾಣ ರಕ್ಷಣೆಗಾಗಿ ಕಚ್ಚುವುದು ಮಹಾದೇವನ ಕಂಠದಲ್ಲಿ ಮತ್ತು ಭುಜಗಳ ಮೇಲೆ ಹಾವು ಇರುತ್ತದೆ. ವಿಷಧರನನ್ನು ಕಂಠ ಮತ್ತು ಭುಜಗಳ ಮೇಲೆ ಧರಿಸುವುದು, ಇದು ಭಾರತೀಯ ಸಂಸ್ಕೃತಿಯ ಪ್ರಮುಖ (ಆದ್ಯ) ಪ್ರಚಾರಕನಾದ ಮಹಾದೇವನ ಬಾಹ್ಯ ಶೃಂಗಾರವೂ ಹೆಜ್ಜೆಹೆಜ್ಜೆಗೂ ಪ್ರೇರಣೆ ನೀಡುತ್ತದೆ. ಹಾವು ವಿಷಕಾರಿಯಾಗಿದ್ದರೂ; ಅದರ ಗುಣಗಳನ್ನೂ ನೋಡಬೇಕು. ಅದು ಸುಮ್ಮಸುಮ್ಮನೆ ಯಾರನ್ನೂ ಕಚ್ಚುವುದಿಲ್ಲ. ಅದಕ್ಕೆ ಯಾರಾದರೂ ತೊಂದರೆ ಕೊಟ್ಟರೆ ಅಥವಾ ‘ತನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಅದಕ್ಕೆ ಅನಿಸಿದಾಗ, ಅದು ಸ್ವತಃ ಸಿದ್ಧಪಡಿಸಿದ ವಿಷವನ್ನು ಪ್ರಾಣ ರಕ್ಷಣೆಗಾಗಿ ಬಳಸುತ್ತದೆ. ಅದೇ ರೀತಿ ಮನುಷ್ಯನಿಗೆ ಸೇವೆ, ಸ್ಮರಣೆ ಮತ್ತು ತಪಸ್ಸು ಮಾಡಿ ಸಿಕ್ಕಿರುವ ಶಕ್ತಿಯನ್ನು ಅವನು ಅನಗತ್ಯ ವಾಗಿ ವ್ಯರ್ಥ ಮಾಡಬಾರದು. ಅದನ್ನು ಪ್ರಯತ್ನಪೂರ್ವಕವಾಗಿ ಕಾಪಾಡಿಕೊಳ್ಳಬೇಕು. ಕೋಪಗೊಂಡು ತನ್ನ ತಪಸ್ಸನ್ನು ನಾಶಪಡಿಸಬಾರದು.
ಇಲಿ ಮತ್ತು ಇತರ ಜೀವಜಂತುಗಳನ್ನು ಭಕ್ಷಿಸಿ ಹೊಲಗಳ ರಕ್ಷಣೆ ಮಾಡುವಲ್ಲಿ ಹಾವು ಸಹಾಯಕವಾಗಿದೆ; ಆದ್ದರಿಂದ ಅದರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಸಹ ನಾಗರಪಂಚಮಿ ಉತ್ಸವವಿದೆ.
(ಆಧಾರ: ಮಾಸಿಕ ‘ಋಷಿಪ್ರಸಾದ’, ಜುಲೈ ೨೦೨೨)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ