ಸನಾತನ ಸಂಸ್ಥೆಯ ಸಾಧಕರು ಸಂತತ್ವವನ್ನು ಪಡೆಯುವವರೆಗಿನ ಪ್ರಯಾಣದಲ್ಲಿ ಸಾಧಕರು ಪ್ರತಿಕೂಲ ಪರಿಸ್ಥಿತಿಗಳು, ಅಡೆತಡೆಗಳು, ಕಷ್ಟಗಳು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಕಾರಾತ್ಮಕವಿದ್ದು ಗುರುಕೃಪೆಯ ಬಲದಿಂದ ಅವರು ಇವೆಲ್ಲವನ್ನೂ ಜಯಿಸುತ್ತಾರೆ. ಈ ಸಮಯದಲ್ಲಿ ಅವರ ಅಂತರಂಗದಲ್ಲಿ ಕೇವಲ ಕೃತಜ್ಞತೆ ಮಾತ್ರ ಇರುತ್ತದೆ ! ಸನಾತನದ ಕೆಲವು ಸಂತರು ಅರ್ಬುದರೋಗದಂತಹ ಗಂಭೀರ ಕಾಯಿಲೆಯಲ್ಲಿ ಅನುಭವಿಸಿದ ಕೃತಜ್ಞತೆ, ಹಾಗೆಯೇ ಪ್ರತಿಕೂಲ ಪ್ರಸಂಗಗಳಲ್ಲಿ ಗುರುಗಳ ಬಗ್ಗೆ ವ್ಯಕ್ತಪಡಿಸಿದ ಕೃತಜ್ಞತೆಯ ಕುರಿತಾದ ಬರಹಗಳನ್ನು ಇಲ್ಲಿ ನೀಡಲಾಗಿದೆ. ಈ ಬರಹಗಳು ಆ ಸಾಧಕರು ‘ಸಂತ’ರಾಗುವ ಮೊದಲು ಬರೆದವುಗಳಾಗಿವೆ. ಯಾವ ಕೃತಜ್ಞತೆಯ ಬಲದಿಂದ ಸಾಧಕರು ಅಧ್ಯಾತ್ಮದಲ್ಲಿ ಮುನ್ನಡೆದು ಸಂತತ್ವವನ್ನು ತಲುಪಿದರು, ಯಾವ ಕೃತಜ್ಞತೆಯಿಂದ ತೀವ್ರ ಪ್ರಾರಬ್ಧವು ಅವರಿಗೆ ಸಹನೀಯ ವಾಯಿತು, ಆ ಕೃತಜ್ಞತೆಯನ್ನು ನಾವೂ ಅನುಭವಿಸೋಣ !

೧. ಪ್ರತಿಯೊಂದು ಸಂಕಟದಿಂದ ದೇವರೇ ನನ್ನನ್ನು ಕಾಪಾಡಿದರು, ಎಂಬುದಕ್ಕಾಗಿ ಕೃತಜ್ಞತೆಗಳು ! – ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ
೨೦೦೨ ರಲ್ಲಿ ಮಳೆಗಾಲದ ದಿನಗಳಲ್ಲಿ ಒಮ್ಮೆ ನಾನು ಕಟ್ಟಡದ ಮೇಲ್ಛಾಣಿಯಲ್ಲಿ ನಿಂತಿರುವಾಗ ಸೋಲಾರ್ ಯಂತ್ರ (ನೀರು ಬಿಸಿ ಮಾಡುವ ಯಂತ್ರ) ನನ್ನ ಮೇಲೆ ಬಿದ್ದಿತ್ತು. ನಾನು ಇದರಿಂದ ಬದುಕುಳಿದೆ. ‘ಕೇವಲ ಗುರುದೇವರೇ (ಪರಾತ್ಪರ ಗುರು ಡಾ. ಆಠವಲೆಯವರೇ) ನನ್ನನ್ನು ಉಳಿಸಿದರು’ ಎಂಬುದು ನನ್ನ ದೃಢ ನಂಬಿಕೆಯಾಗಿದೆ. ಅಪಘಾತದ ನಂತರ ಮಾಳಿಗೆಗೆ ಹೋಗಿ ಈ ದೃಶ್ಯವನ್ನು ನೋಡಿದವರಿಗೆ, ‘ಇದರಲ್ಲಿ ಸಿಕ್ಕಿಬಿದ್ದ ವ್ಯಕ್ತಿ ಬದುಕಿರಲು ಸಾಧ್ಯವಿಲ್ಲ’ ಎಂದು ಅನಿಸಿತ್ತು. ಕೆಲವು ವರ್ಷಗಳ ಹಿಂದೆ ನನ್ನ ಗಂಟಲಿನಲ್ಲಿ ಕ್ಯಾನ್ಸರ್ ಗಡ್ಡೆಗಳಾಗಿದ್ದವು. ಅದಕ್ಕಾಗಿ ಎಲ್ಲಾ ಚಿಕಿತ್ಸೆಗಳನ್ನು ಮಾಡಲಾಯಿತು. ದೇವರು ನನ್ನನ್ನು ಸಕಾರಾತ್ಮಕವಾಗಿಟ್ಟು ನನ್ನ ಪ್ರಾರಬ್ಧ ಅಥವಾ ಕರ್ಮಭೋಗವನ್ನು ಭೋಗಿಸಲು ಸಹಾಯ ಮಾಡುತ್ತಿದ್ದನು. ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನನಗೆ ಭಯವಾಗುತ್ತಿರಲಿಲ್ಲ. ಈ ಜೀವನವನ್ನು ದೇವರು, ಅಂದರೆ ಗುರುದೇವರೇ ನನಗೆ ನೀಡಿದ್ದಾರೆ. ದೇವರು ನನ್ನ ಪ್ರಾರಬ್ಧ ಮತ್ತು ಕರ್ಮಭೋಗವನ್ನು ಮುಗಿಸುತ್ತಿದ್ದನು. ಪ್ರತಿ ಬಾರಿಯೂ ಅವನೇ ನನ್ನನ್ನು ಸಂಕಟದಿಂದ ಕಾಪಾಡುತ್ತಿದ್ದನು. ಆದುದರಿಂದ ದೇವರ ಮೇಲಿನ ನನ್ನ ಶ್ರದ್ಧೆ ಇನ್ನಷ್ಟು ದೃಢವಾಗಿ ಅಪಾರ ಕೃತಜ್ಞತೆ ವ್ಯಕ್ತವಾಯಿತು.
೨. ಶಸ್ತ್ರಚಿಕಿತ್ಸೆಯ ನಂತರದ ನೋವುಗಳಿಂದ ಗುರುದೇವರೇ ನನ್ನನ್ನು ಕಾಪಾಡಿದರು ! – (ದಿ.) ಪೂ. ಪ್ರಭಾ ಮರಾಠೆ ಅಜ್ಜಿ

೧೯೯೭ ರಲ್ಲಿ ನನಗೆ ಅರ್ಬುದರೋಗದ ಶಸ್ತ್ರಚಿಕಿತ್ಸೆ ಆಯಿತು. ಆ ಅವಧಿಯಲ್ಲಿ ನಾನು ಮಲಗಿಕೊಂಡೇ ಇದ್ದೆನು. ಒಮ್ಮೆ ನನಗೆ ಆಕಾಶದಲ್ಲಿ ಒಂದು ತೇಜಸ್ವಿ ನಕ್ಷತ್ರ ಕಂಡಿತು. ಬೆಳಗ್ಗೆ ‘ಆ ತೇಜಃಪುಂಜವಾದ ನಕ್ಷತ್ರವೆಂದರೆ ಪರಾತ್ಪರ ಗುರುದೇವರೇ ಆಗಿದ್ದಾರೆ’ ಎಂದು ಗಮನಕ್ಕೆ ಬಂದಿತು. ಅವರೇ ಶಸ್ತ್ರಚಿಕಿತ್ಸೆಯ ನಂತರ ಉಂಟಾದ ತೀವ್ರ ತೊಂದರೆಗಳಿಂದ ನನ್ನನ್ನು ಕಾಪಾಡಿದರು; ಆದ್ದರಿಂದ ಅವರ ಬಗ್ಗೆ ತುಂಬ ಕೃತಜ್ಞತೆಯು ವ್ಯಕ್ತವಾಯಿತು.
೩. ಕೃತಜ್ಞತೆ ವ್ಯಕ್ತಪಡಿಸಲು ‘ಕೃತಜ್ಞತೆ’ ಎಂಬ ಪದವೇ ಅಪೂರ್ಣವಾಗಿದೆ ! – (ದಿ.) ಪೂ. (ಡಾ.) ನಂದಕಿಶೋರ ವೇದ

ವರ್ಷವಿಡೀ ಅತಿ ವೇದನಾಮಯವಾದ ‘ಯಾಂಕಿಲೋಜಿಂಗ್ ಸ್ಪಾಂಡಿಲೈಟಿಸ್’ (ಕಶೇರುಖಂಡಗಳ ಸವೆತದ ಕಾಯಿಲೆ)ನ ತೀವ್ರ ಮತ್ತು ಅಸಹನೀಯ ನೋವು, ರಕ್ತದ ಅರ್ಬುದರೋಗ ಮತ್ತು ಅದರ ಚಿಕಿತ್ಸೆಗಳ ತೊಂದರೆ ಹಾಗೂ ದುಷ್ಪರಿಣಾಮಗಳಿಂದ ನಾನು ಪ್ರತಿಕೂಲ ಸ್ಥಿತಿಯನ್ನು ಅನುಭವಿಸುತ್ತಿದ್ದೆ. ಈ ಅವಧಿಯಲ್ಲಿ ಪರಾತ್ಪರ ಗುರುದೇವರು ನನ್ನ ಪ್ರಾರಬ್ಧ ವನ್ನು ಸಹನೀಯವಾಗಿಸಿದರು, ಅದರೊಂದಿಗೆ ನನ್ನನ್ನು ನಿರಂತರವಾಗಿ ಆನಂದ ದಲ್ಲಿರಿಸಿದರು. ಅದಕ್ಕಾಗಿ ‘ಕೃತಜ್ಞತೆ’ ಎಂಬ ಪದವೇ ಅಪೂರ್ಣವಾಗಿದೆ !
೪. ರಕ್ಷಕರಾದ ಪರಾತ್ಪರ ಗುರುದೇವರೇ ಸೂಕ್ಷ್ಮದಲ್ಲಿ ನನ್ನನ್ನು ಸಂರಕ್ಷಿಸಿದರು ! – (ದಿ.) ಪೂ. (ಸೌ.) ಶಾಲಿನಿ ಮರಾಠೆ

೨೦೨೨ ರಲ್ಲಿ ನನಗೆ ಗರ್ಭಾಶಯದ ಅರ್ಬುದರೋಗವಾಗಿತ್ತು. ಆಗ ‘ರೇಡಿಯೇಶನ್’ (ವಿಕಿರಣದ) ಮೂಲಕ ನನಗೆ ೨೫ ಬಾರಿ ಚಿಕಿತ್ಸೆ ನೀಡಲಾಯಿತು; ಆದರೆ ಸುಧಾರಣೆಯಾಗುತ್ತಿರಲಿಲ್ಲ. ತೀವ್ರ ದೈಹಿಕ ತೊಂದರೆ ಯಲ್ಲಿಯೇ ನಾನು ಪರಾತ್ಪರ ಗುರುದೇವರಲ್ಲಿ ಪ್ರಾರ್ಥಿಸಿದೆ. ಪರಾತ್ಪರ ಗುರು ಡಾ. ಆಠವಲೆಯವರೇ ನನ್ನ ರಕ್ಷಕರಾಗಿದ್ದರಿಂದ, ಅವರು ನನ್ನನ್ನು ಈ ಎಲ್ಲ ಪ್ರಸಂಗಗಳಲ್ಲಿ ನೋಡಿಕೊಂಡರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನನ್ನಂತಹ ಒಂದು ಸಾಮಾನ್ಯ ಜೀವದ ಜನ್ಮ ಸಾರ್ಥಕವಾಯಿತು. ಇದಕ್ಕಾಗಿ ಅವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು