ಅಮೇರಿಕಾ ‘ಪ್ಯೂ ರಿಸರ್ಚ್ ಸೆಂಟರ್’ ವರದಿ

ನವದೆಹಲಿ – ಇಡೀ ವಿಶ್ವದಲ್ಲಿ ಇಸ್ಲಾಂ ಧರ್ಮವು ದಾಖಲೆ ವೇಗದಲ್ಲಿ ಬೆಳೆಯುತ್ತಿದೆ ಎಂದು ಅಮೇರಿಕಾದ ‘ಪ್ಯೂ ರಿಸರ್ಚ್ ಸೆಂಟರ್’ ಮಂಡಿಸಿದ ವರದಿಯಿಂದ ತಿಳಿದುಬಂದಿದೆ. ಪ್ಯೂ ರಿಸರ್ಚ್ ಸೆಂಟರ್ ನ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 2010 ರಿಂದ 2020 ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ 170 ಕೋಟಿಯಿಂದ 200 ಕೋಟಿಗೆ ಏರಿದೆ. ಅಂದರೆ, ಶೇ 21% ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಇಡೀ ವಿಶ್ವದ ಜನಸಂಖ್ಯೆ ಕೇವಲ ಶೇ 10% ರಷ್ಟು ಮಾತ್ರ ಹೆಚ್ಚಾಗಿದೆ. ಜನಸಂಖ್ಯೆಯ ಹೆಚ್ಚಳದಿಂದಾಗಿ, ಮುಸ್ಲಿಂ ಜನಸಂಖ್ಯೆಯ ಜಾಗತಿಕ ಶೇಕಡಾವಾರು ಪಾಲು ಶೇ 24% ರಿಂದ ಶೇ 26% ಕ್ಕೆ ಏರಿದೆ. ಅಂದರೆ, ಇಂದು ವಿಶ್ವದ ಪ್ರತಿ ನಾಲ್ಕನೇ ವ್ಯಕ್ತಿ ಮುಸ್ಲಿಂ ಆಗಿದ್ದಾನೆ. ವಿಶೇಷವೆಂದರೆ, ಮುಸ್ಲಿಮರ ಜನಸಂಖ್ಯೆಯು ಇತರ ಧರ್ಮಗಳ ಜನಸಂಖ್ಯೆಗಿಂತ ಎರಡು ಪಟ್ಟು ವೇಗವಾಗಿ ಬೆಳೆಯುತ್ತಿದೆ.
100 ವರ್ಷಗಳ ಹಿಂದೆ ಮುಸ್ಲಿಮರ ಜನಸಂಖ್ಯೆ ಎಷ್ಟಿತ್ತು ?
1900 ರಲ್ಲಿ ವಿಶ್ವದಾದ್ಯಂತ ಮುಸ್ಲಿಮರ ಜನಸಂಖ್ಯೆ ಕೇವಲ 20 ಕೋಟಿ ಇತ್ತು, ಇದು ಆ ಸಮಯದಲ್ಲಿ ಜಾಗತಿಕ ಜನಸಂಖ್ಯೆಯ ಕೇವಲ ಶೇ 12% ರಷ್ಟಿತ್ತು. ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿನ ಹೆಚ್ಚಿನ ಜನನ ಪ್ರಮಾಣದಿಂದಾಗಿ ಕಳೆದ 100 ವರ್ಷಗಳಲ್ಲಿ ಈ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು, 2025 ರಲ್ಲಿ ಈ ಜನಸಂಖ್ಯೆ ಸುಮಾರು ಶೇ 25% ಕ್ಕೆ ತಲುಪಿದೆ. ಪ್ಯೂ ರಿಸರ್ಚ್‌ನ ಅಂದಾಜಿನ ಪ್ರಕಾರ, 2030 ರಲ್ಲಿ ಈ ಸಂಖ್ಯೆ 220 ಕೋಟಿ ಆಗಲಿದೆ ಮತ್ತು 2050 ರಲ್ಲಿ 280 ಕೋಟಿ ಆಗಲಿದೆ, ಅಂದರೆ ವಿಶ್ವದ ಶೇ 30% ರಷ್ಟು ಆಗಲಿದೆ.
ಅತಿ ಹೆಚ್ಚು ಮುಸ್ಲಿಮರು ಎಲ್ಲಿ ವಾಸಿಸುತ್ತಿದ್ದಾರೆ ?
ವಿಶ್ವದ ಶೇ 59% ರಷ್ಟು ಮುಸ್ಲಿಮರು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಉಪ-ಸಹಾರಾ ಆಫ್ರಿಕಾದಲ್ಲಿ ಅವರ ಪಾಲು ಶೇ 18% ರಷ್ಟಿದೆ. ಇಂಡೋನೇಷ್ಯಾದಲ್ಲಿ 24 ಕೋಟಿ ಮುಸ್ಲಿಮರಿದ್ದಾರೆ, ಇದು ವಿಶ್ವದ ಒಟ್ಟು ಮುಸ್ಲಿಮರ ಶೇ 12% ರಷ್ಟಾಗಿದೆ. ಭಾರತದಲ್ಲಿ 21 ಕೋಟಿ 30 ಲಕ್ಷ ಮುಸ್ಲಿಮರಿದ್ದು, ಅವರು ದೇಶದ ಜನಸಂಖ್ಯೆಯಲ್ಲಿ ಶೇ 15% ರಷ್ಟು ಪಾಲು ಹೊಂದಿದ್ದಾರೆ.
ಕೆಲವು ದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಾದ ಬದಲಾವಣೆಗಳು :
1. ಕಝಾಕಿಸ್ತಾನ್: ಮುಸ್ಲಿಮರ ಪ್ರಮಾಣ ಶೇ 8% ರಷ್ಟು ಹೆಚ್ಚಾಗಿದೆ; ಏಕೆಂದರೆ ಅನೇಕ ಕ್ರಿಶ್ಚಿಯನ್ ನಾಗರಿಕರು ದೇಶವನ್ನು ತೊರೆದಿದ್ದಾರೆ.
2. ಲೆಬನಾನ್: ಸಿರಿಯಾದಿಂದ ಬಂದ ನಿರಾಶ್ರಿತರಿಂದಾಗಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ.
3.ಒಮಾನ್: ವಿದೇಶಿ ನಾಗರಿಕರು ಬರಲಾರಂಭಿಸಿದ್ದರಿಂದ ಮುಸ್ಲಿಮರ ಪ್ರಮಾಣ ಶೇ 8% ರಷ್ಟು ಕಡಿಮೆಯಾಗಿದೆ.
4. ಟಾಂಜಾನಿಯಾ: ಜನನ ಪ್ರಮಾಣ ಕಡಿಮೆಯಾದ ಕಾರಣ ಮುಸ್ಲಿಮರ ಸಂಖ್ಯೆ ಶೇ 6% ರಷ್ಟು ಕಡಿಮೆಯಾಗಿದೆ.
5. ಯುರೋಪ ಖಂಡ: ಮುಸ್ಲಿಮರ ಜನಸಂಖ್ಯೆ ವಲಸೆ ಮತ್ತು ಹೆಚ್ಚಿನ ಜನನ ಪ್ರಮಾಣದಿಂದಾಗಿ ಹೆಚ್ಚುತ್ತಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’