ಉತ್ತರಾಖಂಡದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಓದುವುದು ಕಡ್ಡಾಯ : Schools Gita Shlokas

ಪ್ರತಿದಿನ ಪ್ರಾರ್ಥನಾ ಸಭೆಯಲ್ಲಿ ಶ್ಲೋಕ ಪಠಣ ನಡೆಯಲಿದೆ

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡ ಸರಕಾರವು ಜುಲೈ ೧೭ರಂದು ಒಂದು ಪ್ರಮುಖ ಆದೇಶ ಜಾರಿಗೊಳಿಸಿದೆ. ಆ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಭಗವದ್ಗೀತೆಯ ಒಂದು ಶ್ಲೋಕದ ಪಠಣ ಹಾಗೂ ಅದರ ಅರ್ಥ ವಿವರಣೆ ನೀಡುವುದು ಅನಿವಾರ್ಯಗೊಳಿಸಿದೆ. ರಾಜ್ಯದಲ್ಲಿ ೧೭ ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿವೆ.

ಪ್ರತಿ ವಾರ ಶ್ಲೋಕಗಳಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮಗಳ ವರದಿಯನ್ನು ತೆಗೆದುಕೊಳ್ಳಲಾಗುವುದು !

ಈ ಆದೇಶದಲ್ಲಿ, ಶಿಕ್ಷಕರು ಮಾತ್ರ ಶ್ಲೋಕ ಪಠಣ ಮಾಡದೆ, ಅದರ ಅರ್ಥ, ವೈಜ್ಞಾನಿಕ ಸಂದರ್ಭ ಮತ್ತು ನೈತಿಕ ಶಿಕ್ಷಣವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಪ್ರತಿ ವಾರಕ್ಕೆ ಒಂದು ಶ್ಲೋಕ ‘ವಾರದ ಶ್ಲೋಕ’ ಎಂದು ಆಯ್ಕೆ ಮಾಡಲಾಗುತ್ತದೆ, ಅದನ್ನು ಶಾಲೆಯ ಸೂಚನಾ ಫಲಕದಲ್ಲಿ ಬರೆಯಲಾಗುತ್ತದೆ ಮತ್ತು ವಾರಾಂತ್ಯದಲ್ಲಿ ಆ ಶ್ಲೋಕದಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏನಾದರೊಂದು ಪರಿಣಾಮ ಆಗಿದೆಯೇ ಎಂಬುದರ ಬಗ್ಗೆ ಚರ್ಚೆ ಮತ್ತು ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿದೆ.

ಮಕ್ಕಳಲ್ಲಿ ಕರ್ತವ್ಯನಿಷ್ಠೆ ಅಭಿವೃದ್ಧಿಯಾಗುವುದು ! – ಮುಖ್ಯಮಂತ್ರಿ ಧಾಮಿ

ಈ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಇದರ ಮೂಲಕ ಮಕ್ಕಳಲ್ಲಿ ಕರ್ತವ್ಯನಿಷ್ಠೆ, ನಾಯಕತ್ವ ಗುಣಗಳು ಮತ್ತು ಭಾವನಾತ್ಮಕ ಸಮತೋಲನ ಗುಣ ಬೆಳೆಯಲಿವೆ, ಎಂದು ಹೇಳಿದರು.

ಶಿಕ್ಷಕರ ಸಂಘಗಳ ವಿರೋಧ!

ಕೆಲವು ಶಿಕ್ಷಕರ ಸಂಘಗಳು ಈ ನಿರ್ಧಾರವನ್ನು ಟೀಕಿಸುತ್ತಿವೆ. ಅವರು ಭಾರತ ಸಂವಿಧಾನದ ವಿಧಿ ೨೮(೧) ಆಧರಿಸಿ ಈ ನಿರ್ಧಾರ ಜಾತ್ಯತೀತೆಯ ವಿರುದ್ಧ ಮತ್ತು ಧಾರ್ಮಿಕ ಬಲವಂತ ಮಾಡುವ ಆರೋಪ ಮಾಡಿದ್ದಾರೆ. ಶಾಲಾ ಸಂಸ್ಥೆಗಳು ಮತ್ತು ಪೋಷಕರು ಈ ಬಗ್ಗೆ ವಾದ-ನಿವಾದ ನಡೆಯುತ್ತಿದೆ. (ಈ ತರ್ಕವಿಲ್ಲದ ಜಾತ್ಯತೀತವಾದಗಳ ಕಾರಣವೇ ದೇಶ ನೈತಿಕವಾಗಿ ಕುಸಿತಕ್ಕೀಡಾಗುತ್ತಿದೆ; ಆದ್ದರಿಂದ ಈ ವಿರೋಧವನ್ನು ತಡೆಯುವುದು ಆವಶ್ಯಕವಾಗಿದೆ! – ಸಂಪಾದಕರು)

ಉತ್ತರಾಖಂಡದ ಮದರಸಾಗಳಲ್ಲಿಯೂ ಭಗವದ್ಗೀತೆಯ ಶ್ಲೋಕಗಳ ಪಠಣ ! – ಮದರಸಾ ಬೋರ್ಡ್ ಅಧ್ಯಕ್ಷ ಶಮೂನ್ ಕಾಸ್ಮಿ ಘೋಷಣೆ

ಉತ್ತರಾಖಂಡದ ಮದರಸಾಗಳಲ್ಲಿಯೂ ಇದನ್ನು ಮಾಡಲು ಸಾಧ್ಯವಿದ್ದರೇ ಇತರ ಮದರಸಾಗಳಲ್ಲೂ ಏಕೆ ಸಾಧ್ಯವಿಲ್ಲ ?

ಉತ್ತರಾಖಂಡದ ಮದರಸಾಗಳಲ್ಲಿಯೂ ಭಗವದ್ಗೀತೆಯ ಶ್ಲೋಕಗಳ ಪಠಣ ನಡೆಯಲಿದೆ ಎಂದು ರಾಜ್ಯದ ‘ಸದರಸಾ ಶಿಕ್ಷಣ ಪರಿಷತ್’ ಅಧ್ಯಕ್ಷ ಶಮೂನ್ ಕಾಸ್ಮಿ ಘೋಷಣೆ ಮಾಡಿದ್ದಾರೆ. ಅವರು ಶಾಲೆಗಳಲ್ಲಿ ಭಗವದ್ಗೀತೆಯ ಶ್ಲೋಕಗಳ ಪಠಣ ಆರಂಭಿಸುವ ಮುಖ್ಯಮಂತ್ರಿ ಧಾಮಿ ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದರು.

ಕೆಲವು ಮದರಸಾಗಳಲ್ಲಿ ಸಂಸ್ಕೃತ ಭಾಷೆಯೂ ಕಲಿಸಲಾಗುವುದು!

ಕಾಸ್ಮಿಯವರ ಹೇಳಿಕೆಯಲ್ಲಿ, ಆಯ್ದ ಕೆಲವು ಮದರಸಾಗಳಲ್ಲಿ ಸಂಸ್ಕೃತ ಭಾಷೆ ಕಲಿಕೆ ಪ್ರಾರಂಭವಾಗಲಿದೆ ಮತ್ತು ನಿದಾನವಾಗಿ ಇತರ ಎಲ್ಲಾ ಮದರಸಾಗಳಲ್ಲಿ ಸಂಸ್ಕೃತ ಭಾಷೆ ಕಲಿಸಲಾಗುವುದು, ಎಂದು ಹೇಳಿದರು. “ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಉಪದೇಶವಿದೆ. ಶಾಲೆಗಳಲ್ಲಿ ಗೀತೆಯ ಪಠಣ ನಡೆಯುವ ಮೂಲಕ ಸಾಮಾಜಿಕ ಸೌಹಾರ್ದತೆ ನಿರ್ಮಾಣವಾಗುವುದು; ಅದಕ್ಕಾಗಿ ಮದರಸಾಗಳಲ್ಲಿಯೂ ಈ ಕ್ರಮ ಜಾರಿಯಾಗಬೇಕು” ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಉತ್ತರಾಖಂಡದ ಭಾಜಪ ಸರಕಾರಕ್ಕೆ ಅಭಿನಂದನೆಗಳು! ದೇಶದ ಪ್ರತಿಯೊಂದು ಸರಕಾರಿ ಮತ್ತು ಖಾಸಗೀ ಶಾಲೆಗಳಲ್ಲಿ ಭಗವದ್ಗೀತೆಯನ್ನು ಅನಿವಾರ್ಯಗೊಳಿಸುವುದು ಅಗತ್ಯ. ಉತ್ತರಾಖಂಡ ಸರಕಾರದ ಮಾದರಿಯಡಿಯಲ್ಲಿ ಇತರೆ ಸರಕಾರಗಳು ಹಾಗೂ ಕೇಂದ್ರ ಸರಕಾರವೂ ಈ ರೀತಿ ನಿರ್ಧಾರ ಕೈಗೊಳ್ಳುವುದು ಅಪೇಕ್ಷಿತವಾಗಿದೆ!