ಜಬಲ್‌ಪುರ (ಮಧ್ಯಪ್ರದೇಶ) ಘಟನೆ
ಜಬಲಪುರ (ಮಧ್ಯಪ್ರದೇಶ) – ಇಲ್ಲಿನ ರಾಂಝಿ ಪ್ರದೇಶದ ಮಢಯಿ ಭಾಗದಲ್ಲಿರುವ ಗಾಯತ್ರಿ ದೇವಾಲಯದ ಭೂಮಿಯ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ವಿವಾದ ತಲೆದೋರಿದಾಗ, ಜಬಲಪುರದ ಉಪವಿಭಾಗೀಯ ದಂಡಾಧಿಕಾರಿ ರಘುವೀರ್ ಸಿಂಗ್ ಮರಾವಿ ಅವರು ತಮ್ಮ ಇಲಾಖೆಯ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, ಮಸೀದಿಯು ಅಧಿಕೃತವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಹಿಂದೂ ಸಂಘಟನೆಗಳು ಆಕ್ರೋಶಗೊಂಡವು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ನಂತರ, ಸರಕಾರವು ಉಪವಿಭಾಗೀಯ ದಂಡಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
1. ಉಪವಿಭಾಗೀಯ ದಂಡಾಧಿಕಾರಿಗಳ ಪೋಸ್ಟ್‌ನಲ್ಲಿ, “ಆ ಸ್ಥಳದಲ್ಲಿ ಹಿಂದೆ ದೇವಸ್ಥಾನವಿತ್ತು. ಅಥವಾ ದೇವಸ್ಥಾನದ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ. ಮಸೀದಿಯನ್ನು ಮೊದಲಿನಿಂದಲೂ ಸ್ವಾಧೀನದಲ್ಲಿರುವ ಅಧಿಕೃತ ಭೂಮಿಯ ಮೇಲೆ ನಿರ್ಮಿಸಲಾಗಿದೆ” ಎಂದು ಹೇಳಲಾಗಿತ್ತು.
2. ಈ ಪೋಸ್ಟ್ ಅನ್ನು ಕೆಲವೇ ಗಂಟೆಗಳಲ್ಲಿ ತೆಗೆದುಹಾಕಲಾಯಿತು; ಆದರೆ ಹಿಂದೂ ಸಂಘಟನೆಗಳು ಇದನ್ನು ವಿರೋಧಿಸಿ, ಮಸೀದಿಯನ್ನು ದೇವಸ್ಥಾನದ ಮೂಲ ಸ್ಥಳದಲ್ಲೇ ನಿರ್ಮಿಸಲಾಗಿದೆ ಎಂದು ಹೇಳಿ ಪ್ರತಿಭಟನೆ ನಡೆಸಿದವು. ಈ ಮಾಹಿತಿ ಮುಖ್ಯಮಂತ್ರಿ ಮೋಹನ ಯಾದವ್ ಅವರಿಗೆ ತಲುಪಿತು. ಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆಗಾಗಿ ಸಮಿತಿ ನೇಮಿಸುವುದಾಗಿ ಭರವಸೆ ನೀಡಿ, ರಘುವೀರ ಸಿಂಗ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿದರು.
3. ಹೊಸ ಉಪವಿಭಾಗೀಯ ದಂಡಾಧಿಕಾರಿ ರಿಷಭ ಜೈನ್ ಅವರು, ಆ ಪೋಸ್ಟ್ ಉಪವಿಭಾಗೀಯ ದಂಡಾಧಿಕಾರಿಗಳ ಮಾಹಿತಿಯಿಲ್ಲದೆ ಪೋಸ್ಟ್ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
4. ಹಿಂದೂ ಸಂಘಟನೆಗಳ ಮತ್ತೊಂದು ಆರೋಪವೆಂದರೆ, ಮಸೀದಿಯ ನೆಪದಲ್ಲಿ ಅಕ್ರಮವಾಗಿ ಮದರಸಾವನ್ನು ಸಹ ನಡೆಸಲಾಗುತ್ತಿದೆ. ಈ ಹಿಂದೆ ಮಸೀದಿ ಸಮಿತಿಯು ಈ ಪ್ರಕರಣವನ್ನು ಉಚ್ಚ ನ್ಯಾಯಾಲಯಕ್ಕೆ ಕೊಂಡೊಯ್ದಿತ್ತು; ಆದರೆ ಪುರಾವೆಗಳ ಕೊರತೆಯಿಂದಾಗಿ ಮೊಕದ್ದಮೆಯನ್ನು ಹಿಂಪಡೆಯಬೇಕಾಯಿತು.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft