ಪರಾತ್ಪರ ಗುರು ಡಾ. ಆಠವಲೆಯವರಿಂದ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ

‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕಾಗಿ ಬಂದಿರುವ ಹಿಂದುತ್ವನಿಷ್ಠರಿಗೆ ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಆ ಭೇಟಿಯಲ್ಲಿನ ಆಯ್ದ ಅಂಶಗಳನ್ನು ಮುಂದೆ ಕೊಡಲಾಗಿದೆ.
೧. ಹಿಂದೂ ರಾಷ್ಟ್ರದಲ್ಲಿ ಎಲ್ಲ ವ್ಯಕ್ತಿಗಳು ಸಾತ್ತ್ವಿಕವಾಗಿರುವುದರಿಂದ ಅವರ ಮನಸ್ಸಿನಲ್ಲಿ ಜಾತೀಯತೆಯಂತಹ ವಿಚಾರಗಳು ಬರಲಾರದು !
ಶ್ರೀ. ಪ್ರವೀಣ ದುಬೆ, ಭಾಗ್ಯನಗರ : ಹಿಂದೂ ರಾಷ್ಟ್ರವು ನಿರ್ಮಾಣವಾದ ನಂತರ ‘ಹಿಂದೂಗಳಿಗೆ ಜಾತೀಯತೆಯ ಆಧಾರದ ಮೇಲೆ ಹೋರಾಡುವ ಆವಶ್ಯಕತೆ ಇರುವುದಿಲ್ಲ’, ಎಂದು ಯಾರಾದರು ಹೇಳಬಹುದೇ ?
ಪರಾತ್ಪರ ಗುರು ಡಾ. ಆಠವಲೆ : ಸತ್ಯಯುಗದಲ್ಲಿ, ಅಥವಾ ತ್ರೇತಾ ಯುಗದಲ್ಲಿ ಪರಸ್ಪರರ ಯಾರಾದರೂ ಹೋರಾಡುತ್ತಿದ್ದರೇನು ? ಎಲ್ಲರೂ ಸಾಧನೆ ಮಾಡಿ ಸಾತ್ತ್ವಿಕರಾದರೆ, ಅವರ ಮನಸ್ಸಿನಲ್ಲಿ ಪರಸ್ಪರರಲ್ಲಿ ಹೋರಾಡುವ ವಿಚಾರವೂ ಬರುವುದಿಲ್ಲ.
ಶ್ರೀ. ಪ್ರವೀಣ ದುಬೆ : ಹೀಗೆ ವಿಚಾರ ಮಾಡಿದರೆ ಎಲ್ಲರೂ ಸಾತ್ತ್ವಿಕರಾಗಬೇಕು; ಆದರೆ ಇದು ನಿಜವಾಗಿಯೂ ಸಾಧ್ಯವಿದೆಯೇ ?
ಪರಾತ್ಪರ ಗುರು ಡಾ. ಆಠವಲೆ : ಹೀಗೆಯೇ ಇದೆ. ಎಲ್ಲರೂ ಸಾತ್ತ್ವಿಕರಾದರೆ ಮಾತ್ರ ಹಿಂದೂ ರಾಷ್ಟ್ರ ಬರುವುದು ! ಸಾತ್ತ್ವಿಕ ರಾಜ್ಯ, ಅಂದರೆ ಹಿಂದೂ ರಾಷ್ಟ್ರ ! ಈಗ ಎಲ್ಲೆಡೆ ರಜ-ತಮಪ್ರಧಾನದ ಜನರು ಇರುವುದರಿಂದಲೇ ಸದ್ಯ ಈ ಕಲಿಯುಗ ನಡೆಯುತ್ತಿದೆ !
೨. ದೇಶದಲ್ಲಿ ಗೋಹತ್ಯೆ ಆಗಬಾರದೆಂದು ಹಿಂದೂಗಳು ಸ್ವತಃ ಸಾಧನೆ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಕೊಡುಗೆ ನೀಡಬೇಕು !
ಶ್ರೀ. ರಾಘವೇಂದ್ರ, ಬೆಂಗಳೂರು : ‘ಭಾರತ ದೇಶದಲ್ಲಿ ಗೋಹತ್ಯೆ ಆಗಬಾರದು’, ಅದಕ್ಕಾಗಿ ಏನು ಮಾಡಬೇಕಾಗುವುದು ?
ಪರಾತ್ಪರ ಗುರು ಡಾ. ಆಠವಲೆ : ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದಾಗಲೇ ಎಲ್ಲವೂ ಸರಿಹೋಗುತ್ತದೆ ! ಒಂದು ವೇಳೆ ನನಗೆ ಕೆಮ್ಮಿನ ಕಾಯಿಲೆ ಆದರೆ ಮತ್ತು ಆ ಕೆಮ್ಮಿನ ಮೂಲ ಕಾರಣ ಕ್ಷಯರೋಗ (ಟಿ.ಬಿ.) ಆಗಿದ್ದರೆ, ಕ್ಷಯರೋಗದ ಔಷಧವನ್ನೇ ಸೇವಿಸಬೇಕು. ಅನಂತರ ದಣಿವು, ಕೆಮ್ಮು ಮತ್ತು ಕ್ಷಯರೋಗದ ಎಲ್ಲ ಲಕ್ಷಣಗಳು ದೂರವಾಗುವವು. ಒಂದನ್ನು ಸಾಧಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಅದು ಒಂದು ಎಂದರೇನು ? ಅಂದರೆ ಉಪಾಸನೆ, ಸಾಧನೆ ಅಥವಾ ಭಕ್ತಿಯನ್ನು ಮಾಡುವುದು.
೩. ಸಾಧನೆ ಮಾಡುವವರಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದ್ದು ಭಗವಂತನ ಕಾರ್ಯ ಮಾಡುವುದರಿಂದ ಭಗವಂತನೇ ಎಲ್ಲವನ್ನೂ ಕೊಡುತ್ತಾನೆ !
ಡಾ. ರಾಜೀವ ಶ್ರೀವಾತ್ಸವ, ಪ್ರಯಾಗರಾಜ : ನನಗೆ ಭಗವಂತನು ‘ಆಚಾರ್ಯರು, ಮೋತಿಲಾಲ ನೆಹರು ರಾಷ್ಟ್ರೀಯ ಔದ್ಯೋಗಿಕ (ತಾಂತ್ರಿಕ) ಸಂಸ್ಥೆ, ಪ್ರಯಾಗರಾಜ’, ಇಲ್ಲಿ ಶಿಕ್ಷಕನ ಕಾರ್ಯಕ್ಕಾಗಿ ನಿಯೋಜಿಸಿದ್ದಾನೆ. ಅಲ್ಲಿ ನಾನು ಮಕ್ಕಳಿಗೆ ಶ್ರೀಮದ್ಭಗವದ್ಗೀತೆಯ ಶ್ಲೋಕಗಳೊಂದಿಗೆ ಆಧ್ಯಾತ್ಮಿಕ ಲೇಖನಗಳ ಬಗ್ಗೆ ಕಲಿಸುತ್ತೇನೆ. ನನಗೆ ಹಿಂದೂ ಶಾಲೆಗಳಲ್ಲಿ ಜನಜಾಗೃತಿ ಮೂಡಿಸಲಿಕ್ಕಿದೆ. ಅದಕ್ಕಾಗಿ ನಾನು ತಮ್ಮ ಆಶೀರ್ವಾದವನ್ನು ಬಯಸುತ್ತೇನೆ.
ಪರಾತ್ಪರ ಗುರು ಡಾ. ಆಠವಲೆ : ಹೌದು. ಇದು ಒಳ್ಳೆಯದಿದೆ; ಆದರೆ ಇತರ ಸಂಘಟನೆಗಳು ಏನು ಮಾಡುತ್ತಿವೆ ?
ಡಾ. ರಾಜೀವ ಶ್ರೀವಾತ್ಸವ : ಅವರಿಗೆ ಸಾಧನಾಮಾರ್ಗದಲ್ಲಿ ಮಾರ್ಗಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಯಾರು ಸಾಧನೆ ಮಾಡುತ್ತಾರೋ, ಅವರಿಂದಲೇ ಈ ಕಾರ್ಯ ನಡೆಯಲಿದೆ.
ಡಾ. ರಾಜೀವ ಶ್ರೀವಾತ್ಸವ : ನಮ್ಮಲ್ಲಿನ ಮಕ್ಕಳಿಗೆ ಸನಾತನ ಸಂಸ್ಕೃತಿಯ ಮೌಲ್ಯವನ್ನು ಹೇಳಿ ಅವರಲ್ಲಿ ಜಾಗೃತಗೊಳಿಸಲು ನಾನು ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ.
ಪರಾತ್ಪರ ಗುರು ಡಾ. ಆಠವಲೆ : ತಾವು ತಳಮಳದಿಂದ ಪ್ರಯತ್ನಿಸಿದರೆ, ಆಶೀರ್ವಾದವನ್ನೂ ಕೇಳಬೇಕಾಗಿಲ್ಲ; ಏಕೆಂದರೆ ಭಗವಂತನೇ ಆಶೀರ್ವಾದ ಮಾಡುತ್ತಾನೆ. ನಿಮ್ಮ ಮನಸ್ಸಿನ ವಿಚಾರ ಒಳ್ಳೆಯದಿದೆ. ಇಲ್ಲದಿದ್ದರೆ ಕಾರ್ಯ ಮಾಡಿದ ಬಗ್ಗೆ ಅಹಂ ಉಂಟಾಗುತ್ತದೆ. ‘ನಾನು ಇದನ್ನು ಮಾಡಿದೆ’, ‘ನಾನು ಮಾಡಿದೆ’, ಎಂದೆನಿಸತೊಡಗುತ್ತದೆ. ‘ಗುರುಗಳ ಆಶೀರ್ವಾದದಿಂದ ಎಲ್ಲವೂ ಆಯಿತು’, ಈ ವಿಚಾರವು ತುಂಬಾ ಚೆನ್ನಾಗಿದೆ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !