
ಕೋಲ್ಲಾಪುರ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಗುರುಪೂರ್ಣಿಮೆಯ ನಿಮಿತ್ತ ಮತ್ತು ನಾಡಿಪಟ್ಟಿಯಲ್ಲಿ ಮಹರ್ಷಿಗಳು ಮಾಡಿದ ಉಲ್ಲೇಖದಂತೆ ೨೦೨೫ ಜುಲೈ ೧೦ ರಂದು ಕೊಲ್ಲಾಪುರದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಭಾವಪೂರ್ಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಶ್ರೀ ಮಹಾಲಕ್ಷ್ಮಿಗೆ ಸೀರೆ ಮತ್ತು ರವಕೆ-ಶ್ರೀಫಲದಿಂದ ಉಡಿ ತುಂಬಿ ದರ್ಶನ ಪಡೆದು ದೇವಿಯ ಆರತಿ ಮಾಡಿದರು. ಈ ವೇಳೆ ಅರ್ಚಕರು ದೇವಿಯ ಪೂಜೆಯ ವಸ್ತ್ರಗಳನ್ನು ಅವರಿಗೆ ಪ್ರಸಾದವಾಗಿ ನೀಡಿದರು.
ಶ್ರೀ ತ್ರೈಂಬುಲಿ ದೇವಿಯ ಭಾವಪೂರ್ಣ ದರ್ಶನ!

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಭಾವಪೂರ್ಣವಾಗಿ ಕೊಲ್ಲಾಪುರದ ಐತಿಹಾಸಿಕ ಶ್ರೀ ಟೆಂಬಲಾಯಿದೇವಿ ಅಂದರೆ ಶ್ರೀ ತ್ರೈಂಬುಲಿ ದೇವಿಯ ದರ್ಶನವನ್ನು ಪಡೆದರು.
ಶ್ರೀ ತ್ರೈಂಬುಲಿ ದೇವಿಯ ಬಗ್ಗೆ ಮಾಹಿತಿ

ಕೊಲ್ಲಾಪುರದ ಐತಿಹಾಸಿಕ ಶ್ರೀ ಟೆಂಬಲಾಯಿದೇವಿ ಅಂದರೆ ತ್ರೈಂಬುಲಿ ದೇವಿಯ ದೇವಸ್ಥಾನ ಪ್ರಸಿದ್ಧವಾಗಿದೆ. ಕೊಲ್ಲಾಪುರ ನಗರದ ಪೂರ್ವದಲ್ಲಿ ಒಂದು ಗುಡ್ಡದ ಮೇಲೆ ಈ ದೇವಿಯ ದೇವಸ್ಥಾನವಿದೆ. ಶ್ರೀ ತ್ರೈಂಬುಲಿ ದೇವಿಯನ್ನು ಕರವೀರ ನಿವಾಸಿನಿ ಶ್ರೀ ಮಹಾಲಕ್ಷ್ಮಿಯ ಸಖಿ, ಹಾಗೂ ಕೊಲ್ಲಾಪುರದ ‘ಸಂರಕ್ಷಕದೇವಿ’ ಎಂದೂ ಗುರುತಿಸಲಾಗುತ್ತದೆ. ರಾಕ್ಷಸರ ವಧೆಗಾಗಿ ಶ್ರೀ ತ್ರೈಂಬುಲಿ ದೇವಿಯು ಶ್ರೀ ಮಹಾಲಕ್ಷ್ಮಿಯೊಂದಿಗೆ ಯುದ್ಧದಲ್ಲಿ ಭಾಗವಹಿಸಿ ಅಸುರರನ್ನು ನಾಶಪಡಿಸಿದ ಕಥೆ ಪ್ರಚಲಿತದಲ್ಲಿದೆ. ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ತ್ರೈಂಬುಲಿ ದೇವಿ ಆಪ್ತ ಸ್ನೇಹಿತೆಯರೆಂದೇ ಪ್ರಸಿದ್ಧರಾಗಿದ್ದಾರೆ. ಶ್ರೀ ಮಹಾಲಕ್ಷ್ಮಿ ವರ್ಷಕ್ಕೊಮ್ಮೆ ನವರಾತ್ರಿಯ ಪಂಚಮಿ ದಿನದಂದು ಶ್ರೀ ತ್ರೈಂಬುಲಿ ದೇವಿಯನ್ನು ಭೇಟಿ ಮಾಡಲು ಬರುತ್ತಾಳೆ. ಶ್ರೀ ತ್ರೈಂಬುಲಿ ದೇವಿಯ ಮೂರ್ತಿ ಸರಳ ಮತ್ತು ಶಿಲಾ ರೂಪದಲ್ಲಿದೆ. ಶ್ರೀ ತ್ರೈಂಬುಲಿ ದೇವಿಯ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶ ನಿಸರ್ಗ ರಮಣೀಯವಾಗಿದೆ. ಶ್ರೀ ಮಹಾಲಕ್ಷ್ಮಿ ದೇವಿಯಷ್ಟೇ ಶ್ರೀ ತ್ರೈಂಬುಲಿ ದೇವಿಯ ಮೇಲೆ ಭಕ್ತರಿಗೆ ಶ್ರದ್ಧೆಯಿದೆ.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ತ್ರೈಂಬುಲಿ ದೇವಿಯ ಚರಣಗಳಲ್ಲಿ ಸಲ್ಲಿಸಿದ ಪ್ರಾರ್ಥನೆ!
“ಹೇ ದೇವಿ, ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ದೀರ್ಘಾಯುಷ್ಯ ದೊರೆಯಲಿ ಮತ್ತು ಎಲ್ಲೆಡೆಯ ಸಾಧಕರ ರಕ್ಷಣೆಯಾಗಿ ಅವರಿಗೆ ಉತ್ತಮ ಆರೋಗ್ಯ ದೊರೆಯಲಿ,” ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ಪ್ರಾರ್ಥಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!