ಸನಾತನ ಯುಗಾರಂಭ !

ಜಯಘೋಷದೊಂದಿಗೆ ಹಾರಾಡಿದ ಸನಾತನ ಧರ್ಮಧ್ವಜ !

೧೮ ಮೇ ೨೦೨೫ ರ ದಿನವು ಹಿಂದೂಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಿನವಾಗಿತ್ತು. ಈ ಶುಭದಿನದಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದಿವ್ಯಶಸ್ತದಿಂದ ಸನಾತನ ಧರ್ಮಧ್ವಜದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರೂ ಉಪಸ್ಥಿತರಿದ್ದರು. ಸಾವಿರಾರು ಸಾಧಕರು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಧ್ವಜಾರೋಹಣದ ನಂತರ ‘ಸನಾತನ ಧರ್ಮಕ್ಕೆ ವಿಜಯವಾಗಲಿ !’, ‘ಜಯತು ಜಯತು ಹಿಂದೂರಾಷ್ಟ್ರಮ್‌ !’ ಎಂಬ ಅನೇಕ ಘೋಷಣೆಗಳು ಮುಗಿಲು ಮುಟ್ಟಿದವು. ಈ ಧ್ವಜದ ಮೇಲೆ ‘ಕಲ್ಪವೃಕ್ಷದ ಕೆಳಗೆ ಕಾಮಧೇನು ನಿಂತಿರುವ’ ಚಿತ್ರವಿದೆ. ಕಲ್ಪವೃಕ್ಷ ಮತ್ತು ಕಾಮಧೇನು ಇವೆರಡೂ ‘ಸಮೃದ್ಧಿ, ಪಾಲನೆ-ಪೋಷಣೆ, ಸಂರಕ್ಷಣೆ ಮತ್ತು ಶ್ರೀವಿಷ್ಣುವಿನ ಅಭಯ ವರದಹಸ್ತ’ದ ಪ್ರತೀಕಗಳಾಗಿವೆ.

ಬಾನೆತ್ತರಕ್ಕೆ ಹಾರಿದ ಧ್ವಜವಿದು ಸನಾತನ ಧರ್ಮದ |

ಇದುವೇ ಹಿಂದೂಗಳ ಒಗ್ಗಟ್ಟಿನ ಶಂಖನಾದ ||

 

ಸನಾತನ ಧರ್ಮಕ್ಕೆ ವಿಜಯವಾಗಲಿ !