‘ಶತಚಂಡಿಯಾಗ’ದ ಸಮಯದಲ್ಲಿ ಆಹುತಿ ನೀಡುತ್ತಿರುವ ಪುರೋಹಿತ ರಾಜಕುಮಾರ ಶಿವಮ್,
ಈರೋಡ, ತಮಿಳುನಾಡಿನ ಗುರುಮೂರ್ತಿ ಶಿವಾಚಾರ್ಯ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ
ಶ್ರೀ. ಅರುಣಕುಮಾರ ಗುರುಮೂರ್ತಿ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಶ್ರೀಚಿತ್‌ಶಕ್ತಿ
(ಸೌ.) ಅಂಜಲಿ ಮುಕುಲ ಗಾಡಗೀಳ, ಸದ್ಗುರು ನೀಲೇಶ ಸಿಂಗಬಾಳ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ
‘ಮನುಷ್ಯ ಜನ್ಮದ ಉದ್ದೇಶವನ್ನು ತಿಳಿಯುವುದರಿಂದ ಹಿಡಿದು ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಸನಾತನ ಸಂಸ್ಥೆಯು ಕಾಲಾನುಸಾರ ರಾಷ್ಟ್ರರಕ್ಷಣೆಯ ಕಾರ್ಯವನ್ನೂ ಮಾಡುತ್ತಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ, ‘ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತಕ್ಕೆ ವಿಜಯ ಸಿಗಬೇಕು, ಭಾರತದ ಸುತ್ತ ಅಭೇದ್ಯ ಈಶ್ವರೀ ಕವಚ ನಿರ್ಮಾಣವಾಗಬೇಕು ಮತ್ತು ಸನಾತನ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು’ ಎಂದು ಸನಾತನ ಸಂಸ್ಥೆಯು ಮಾಡಿದ ‘ಶತಚಂಡಿ ಯಾಗ’ ! ೧೭ ರಿಂದ ೧೯ ಮೇ ೨೦೨೫ ರ ವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆದ ನಂತರ ೨೦ ರಿಂದ ೨೨ ಮೇ ೨೦೨೫ ರ ವರೆಗೆ ‘ಶತಚಂಡಿ ಯಾಗ’ವನ್ನು ಆಯೋಜಿಸಲಾಗಿತ್ತು. ಪಹಲ್ಗಾಮ (ಕಾಶ್ಮೀರ) ನಲ್ಲಿ ನಡೆದ ಪಾಕ್ ಬೆಂಬಲಿತ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾದ ನಂತರ ಈ ಯಾಗವನ್ನು ಮಾಡಲು ನಿರ್ಧರಿಸಲಾಯಿತು.
೧. ಶತಚಂಡಿ ಯಾಗದ ಸಂಕಲ್ಪದ ದಿನ ಗೋವಾದಲ್ಲಿ ಭಾರಿ ಮಳೆ ಆರಂಭವಾಗುವುದು

೨೦.೫.೨೦೨೫ ರಂದು ಸಂಜೆ ೫ ಗಂಟೆಗೆ ಯಾಗದ ಸಂಕಲ್ಪ ನಡೆಯಬೇಕಿತ್ತು; ಆದರೆ ಅದೇ ದಿನ ಗೋವಾದಲ್ಲಿ ಭಾರಿ ಮಳೆ ಆರಂಭವಾಯಿತು. ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿತು. ಮೇ ೨೦ ಮತ್ತು ೨೧, ೨೦೨೫ ರಂದು ಎಷ್ಟೊಂದು ಮಳೆಯಾಯಿತೆಂದರೆ, ಯಜ್ಞಶಾಲೆಯ ಮಂಟಪದ ಹೊರಗೆ ಎಲ್ಲೆಂದರಲ್ಲಿ ಒಂದರಿಂದ ಒಂದೂವರೆ ಅಡಿ ನೀರು ನಿಂತಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸನಾತನ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಕೈಗೊಂಡಿದ್ದಾರೆ, ಅದರ ಪೂರ್ತಿಗಾಗಿ ಯುದ್ಧಕಾಲದಲ್ಲಿ ಭಾರತದ ಸುತ್ತ ರಕ್ಷಣಾ ಕವಚ ನಿರ್ಮಾಣವಾಗುವುದು ಅತ್ಯಂತ ಅವಶ್ಯಕವಾಗಿತ್ತು. ವಿದ್ಯುತ್ ಇಲ್ಲದ ಕಾರಣ ಮತ್ತು ಭಾರಿ ಮಳೆಯಿಂದಾಗಿ ಯಜ್ಞವು ಸಮಯಕ್ಕೆ ಸರಿಯಾಗಿ ಆರಂಭವಾಗಲಿಲ್ಲ. ‘ಮಿಂಚು, ಗುಡುಗು, ಭಾರಿ ಮಳೆ, ನೀರಿನ ಮಟ್ಟ ಹೆಚ್ಚಿದ ಕಾರಣ ವಿದ್ಯುತ್ ಜನರೇಟರ್ ಪ್ರಾರಂಭಿಸಲು ಅಡಚಣೆಗಳು’ ಇಂತಹ ಪರಿಸ್ಥಿತಿ ಉದ್ಭವಿಸಿತ್ತು.

೨. ಗುರುಗಳ ಸಂಕಲ್ಪವನ್ನು ಪೂರೈಸಲು ಸಿದ್ಧರಾಗಿದ್ದ ಅವರ ಉತ್ತರಾಧಿಕಾರಿಗಳು !
ಒಂದೆಡೆ ಮೈದಾನದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿತ್ತು, ಇನ್ನೊಂದೆಡೆ ‘ಗುರುಗಳು ಕೈಗೊಂಡಿದ್ದ ಸಂಕಲ್ಪದ ಪೂರ್ತಿಗಾಗಿ ಅವರ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಸಿದ್ಧರಾಗಿದ್ದರು !
೩. ಅನೇಕ ಅಡೆತಡೆಗಳಿದ್ದರೂ ಯಾಗ ಆಗುವುದು ಯಜ್ಞಕುಂಡದ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಮಾಡಿ ಸಂಜೆ ೭ ಗಂಟೆಗೆ ಯಾಗವನ್ನು ಪ್ರಾರಂಭಿಸಲಾಯಿತು. ಬ್ರಹ್ಮವೃಂದವು ಒಂದೂವರೆ ದಿನದಲ್ಲಿ ಸಪ್ತಶತಿಯ ೧೦೦ ಪಾರಾಯಣ ಮಾಡಿತು. ಪುರೋಹಿತರು ಯಾಗವನ್ನು ಪೂರ್ಣ ಗೊಳಿಸಿದರು. ಕುಮಾರಿಕಾ, ಬ್ರಹ್ಮಚಾರಿ ಮತ್ತು ದಂಪತಿಗಳ ಪೂಜೆಯೂ ಪೂರ್ಣಗೊಂಡಿತು. ‘ಯಜ್ಞಮಂಟಪದ ಹೊರಗೆ ಎಲ್ಲೆಡೆ ನೀರಿದ್ದರೂ ಯಜ್ಞಕುಂಡದ ಬಳಿ ನೀರು ಬಾರದಿರುವುದು’ ಈಶ್ವರೀ ಕೃಪೆಯೇ ಆಗಿದೆ !

೪. ಯಾಗದ ಬಗ್ಗೆ ಆಚಾರ್ಯ ಅರುಣ ಗುರುಮೂರ್ತಿ ಅವರು ಹೇಳಿದ ವಾಕ್ಯ !
ಶತಚಂಡಿ ಯಾಗ ಪೂರ್ಣವಾದ ನಂತರ ೨೨.೫.೨೦೨೫ ರಂದು ಲಲಿತಾ ತ್ರಿಪುರಸುಂದರಿದೇವಿಯ ವಿಶೇಷ ಪೂಜೆ ನಡೆಸಲಾಯಿತು. ಆಚಾರ್ಯ ಆಗಮವಿದ್ಯಾನಿಧಿ ಅರುಣ ಗುರುಮೂರ್ತಿ ಅವರು ಪ್ರಸಾದವನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ನೀಡಲು ಬಂದಾಗ ಅವರು ಹೀಗೆ ಹೇಳಿದರು, ”ಧರ್ಮಶಾಸ್ತ್ರಗಳಲ್ಲಿ ಹೀಗೆ ಹೇಳಲಾಗಿದೆ, ‘ಆದಿಶಕ್ತಿ ಲಲಿತಾ ತ್ರಿಪುರಸುಂದರಿಮಾತೆಯು ಶ್ರೀಚಕ್ರದ ಮಧ್ಯಭಾಗದಲ್ಲಿ ನೆಲೆಸಿದ್ದಾಳೆ. ಅದರ ಮಧ್ಯಭಾಗದಲ್ಲಿರುವ ಕಮಲಕುಂಡದಲ್ಲಿ (ಕಮಲಗಳ ಸರೋವರದಲ್ಲಿ) ದೇವಿಯು ಒಂದು ಕಮಲದ ಮೇಲೆ ಆಸೀನಳಾಗಿರುತ್ತಾಳೆ. ಅವಳ ಸುತ್ತಲೂ ನೀರಿರುತ್ತದೆ. ಇದನ್ನು ‘ಮಹಾಪದ್ಮಾಟವಿ’ ಎನ್ನಲಾಗುತ್ತದೆ. ಶತಚಂಡಿಯಾಗ ಮಾಡುವಾಗ ನಾಲ್ಕೂ ಕಡೆ ನೀರು ಮತ್ತು ಮಧ್ಯದಲ್ಲಿ ಕಮಲದ ಆಕಾರದ ಯಜ್ಞಕುಂಡವನ್ನು ‘ಮಹಾಪದ್ಮಾಟವಿ ಯಜ್ಞಕುಂಡ’ ಎನ್ನಲಾಗುತ್ತದೆ. ಇದುವೇ ‘ಸರ್ವೋತ್ತಮ ಯಜ್ಞಕುಂಡ.” ದೇವಿ ಆದಿಶಕ್ತಿಯೇ ಶತಚಂಡಿಯಾಗದ ಸಮಯದಲ್ಲಿ ಯಜ್ಞಸ್ಥಳದಲ್ಲಿ ಮಳೆಯನ್ನು ಸುರಿಸಿ ಕಮಲದ ಆಕಾರದ ಯಜ್ಞಕುಂಡದ ಸುತ್ತ ನೀರನ್ನು ಸೃಷ್ಟಿಸಿದಳು ಮತ್ತು ಅವಳು ಸ್ವತಃ ಕಮಲದ ಆಕಾರದ ಯಜ್ಞಕುಂಡದ ಮೇಲೆ ಆಸೀನಳಾದಳು. ಅವಳಿಗೆ ಹೇಗೆ ಬೇಕಾಗಿತ್ತೋ ಹಾಗೆ ಅವಳು ಮಾಡಿಸಿಕೊಂಡಳು. ಇದು ಮಾನವ ನಿರ್ಮಿತವಲ್ಲ, ಬದಲಿಗೆ ದೈವೀ ಕಾರ್ಯವಾಗಿದೆ; ಏಕೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸನಾತನ ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾಸಂಕಲ್ಪವನ್ನು ಕೈಗೊಂಡಿದ್ದಾರೆ. ಈ ಕಲಿಯುಗದಲ್ಲಿ ಇಂತಹ ಸಂಕಲ್ಪವನ್ನು ಕೈಗೊಂಡು ಶತಚಂಡಿ ಯಾಗ ಮಾಡಿದವರ ಬಗ್ಗೆ ನಾನು ಇಲ್ಲಿಯವರೆಗೆ ಕೇಳಿಲ್ಲ.” ಇದು ಕೇಳಿ ಎಲ್ಲರಿಗೂ ಭಾವಜಾಗೃತಿ ಆಯಿತು.
– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ), ಕಾಂಚೀಪುರಮ್, ತಮಿಳುನಾಡು
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !