ಪಾಕಿಸ್ತಾನದ ನೌಕೆ ಸಾಧ್ಯತೆ

ರಾಯಗಡ – ಮುರುಡ ತಾಲೂಕಿನ ಕೋರ್ಲೈ ಸಮುದ್ರದಲ್ಲಿ ಅನುಮಾನಾಸ್ಪದ ನೌಕೆಯೊಂದು ಪತ್ತೆಯಾಗಿದೆ. ಇದು ಪಾಕಿಸ್ಥಾನಿ ನೌಕೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಭದ್ರತಾ ಏಜೆನ್ಸಿಗಳು ನೌಕೆಯನ್ನು ಪರಿಶೀಲಿಸುತ್ತಿವೆ. ನೌಕೆಯಿಂದ ಕೆಲವರು ಸಮುದ್ರಕ್ಕೆ ಇಳಿದಿದ್ದಾರೆ ಎಂದು ಶಂಕಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ನಾಕಾಬಂದಿ (ಪೊಲೀಸ್ ತಪಾಸಣೆ) ಮತ್ತು ಶೋಧ ಕಾರ್ಯ ನಡೆಯುತ್ತಿದೆ. ರಾಯಗಡ ಪೊಲೀಸ್, ಕರಾವಳಿ ಕಾವಲು ಪಡೆ, ಕಸ್ಟಮ್ಸ್ ಇಲಾಖೆ, ಕ್ಷಿಪ್ರ ಕಾರ್ಯಪಡೆ, ಸ್ಥಳೀಯ ಅಪರಾಧ ವಿಭಾಗ, ನೌಕಾಪಡೆ, ಬಾಂಬ್ ಶೋಧಕ ಮತ್ತು ನಿಷ್ಕ್ರಿಯ ದಳ ಸೇರಿದಂತೆ ಎಲ್ಲಾ ಏಜೆನ್ಸಿಗಳಿಂದ ತನಿಖೆ ನಡೆಯುತ್ತಿದೆ.

ಕೋರ್ಲೈಯ ಲೈಟ್‌ಹೌಸ್‌ನಿಂದ ಸುಮಾರು 2 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ನೌಕೆ ಪತ್ತೆಯಾಗಿದೆ. ಪೊಲೀಸ್ ಮತ್ತು ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸಂಪಾದಕೀಯ ನಿಲುವುರಾಜ್ಯದಲ್ಲಿನ ಕರಾವಳಿ ತೀರಗಳು ಇನ್ನೂ ಅಸುರಕ್ಷಿತವಾಗಿವೆ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case