ಪಾಟಲಿಪುತ್ರ (ಬಿಹಾರ)ದಲ್ಲಿ ನಡೆದ ‘ಸನಾತನ ಮಹಾಕುಂಭ’ದಲ್ಲಿ ಹೇಳಿಕೆ

ಪಾಟಲಿಪುತ್ರ (ಬಿಹಾರ) – ಕೆಲವರಿಗೆ ತ್ರಿವರ್ಣ ಧ್ವಜದ ಮೇಲೆ ಚಂದ್ರ ಬೇಕು; ಆದರೆ ಅದು ಎಂದಿಗೂ ಆಗುವುದಿಲ್ಲ. ಅನೇಕ ಶಕ್ತಿಗಳು ಭಾರತವನ್ನು ‘ಗಜವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣಗೊಳಿಸುವ ಯುದ್ಧ) ಮಾಡಲು ಸಂಚು ರೂಪಿಸುತ್ತಿವೆ; ಆದರೆ ನಮ್ಮದೊಂದೇ ಕನಸು, ‘ಭಗವಾ-ಎ-ಹಿಂದ್’. ನಮ್ಮ ಧರ್ಮದ ಮೇಲೆ ಆಘಾತವಾದರೆ, ನಾವು ಪ್ರತ್ಯಾಘಾತ ಮಾಡುತ್ತೇವೆ. ನಮಗೆ ಮುಸ್ಲಿಮರು ಮತ್ತು ಕ್ರೈಸ್ತರೊಂದಿಗೆ ಯಾವುದೇ ವೈಯಕ್ತಿಕ ವಿರೋಧವಿಲ್ಲ; ಆದರೆ ಜಾತಿಯ ಹೆಸರಿನಲ್ಲಿ ಹಿಂದೂಗಳೊಂದಿಗೆ ಜಗಳವಾಡುವ ಜನರು ನಮಗೆ ಕುಕ್ಕುತ್ತವೆ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮ್‌ದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಪಾಟಲಿಪುತ್ರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ‘ಸನಾತನ ಮಹಾಕುಂಭ 2025’ರಲ್ಲಿ ಹೇಳಿದರು. ಈ ಮಹಾಕುಂಭದಲ್ಲಿ ದೇಶಾದ್ಯಂತದಿಂದ ಸಂತರು, ಮಹಾತ್ಮರು, ಜಗದ್ಗುರುಗಳು, ಮಹಾಮಂಡಲೇಶ್ವರರು ಮತ್ತು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದಾರೆ. ಭಗವಾನ್ ಪರಶುರಾಮ ಜಯಂತಿಯ ನಿಮಿತ್ತ ಈ ಮಹಾಕುಂಭವನ್ನು ಆಯೋಜಿಸಲಾಗಿದೆ. ಬಿಹಾರದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಈ ಮಹಾಕುಂಭವನ್ನು ಉದ್ಘಾಟಿಸಿದರು. ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಇದರಲ್ಲಿ ಧಾರ್ಮಿಕ ಪ್ರವಚನಗಳು, ಭಜನೆ, ಸಂತ ಸಮಾಗಮ, ಹವನ-ಪೂಜೆ, ಹಾಗೂ ವೈದಿಕ ಮಂತ್ರೋಚ್ಚಾರಣೆ ನಡೆಯುತ್ತಿದೆ.
50 ಸಾವಿರ ಭಕ್ತರಿಗಾಗಿ ವಿಶಾಲ ಮಂಟಪ, ಗಣ್ಯ ವ್ಯಕ್ತಿಗಳಿಗಾಗಿ ವಿಶೇಷ ಕೊಠಡಿ, ಮಾಧ್ಯಮಗಳಿಗಾಗಿ ಕೊಠಡಿ, ಭಂಡಾರ ಕೊಠಡಿ, ವೈದ್ಯಕೀಯ ಕೊಠಡಿ ಮುಂತಾದವುಗಳನ್ನು ನಿರ್ಮಿಸಲಾಗಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!