|

ಕ್ಯಾನ್ಬೆರಾ (ಆಸ್ಟ್ರೇಲಿಯಾ) – ಇಲ್ಲಿನ ಲಿಝ ಕ್ಯಾಮೆರಾನ್ ಎಂಬ ಲೇಖಕಿ ತಮ್ಮ ಜೀವನದ ಕುರಿತು ಒಂದು ಪುಸ್ತಕ ಬರೆದಿದ್ದರು. ‘ಕಲ್ಟ್ ಬ್ರೈಡ್: ಹೌ ಐ ವಾಸ್ ಬ್ರೈನ್ ವಾಶ್ಡ್ – ಅಂಡ್ ಹೌ ಐ ಬ್ರೋಕ್ ಫ್ರೀ’ (ವಧು ಪದ್ಧತಿ : ನನ್ನ ಬ್ರೈನ್‌ವಾಶ್ ಹೇಗೆ ಆಯಿತು ? ಮತ್ತು ನಾನು ಅದರಿಂದ ಹೇಗೆ ಹೊರಬಂದೆ?), ಇದು ಈ ಪುಸ್ತಕದ ಹೆಸರಾಗಿದೆ. ಇದರ ಮೇಲೆ ಇಲ್ಲಿನ ‘ಚಾನೆಲ್ 7’ ಒಂದು ಸಾಕ್ಷ್ಯಚಿತ್ರವನ್ನು ಮಾಡಿದೆ. ‘ದಿ ಕಲ್ಟ್ ನೆಕ್ಸ್ಟ್ ಡೋರ್’ ಹೆಸರಿನ ಈ ಸಾಕ್ಷ್ಯಚಿತ್ರವು 2011ರಲ್ಲಿ ಲಿಝ ಅವರ ಜೀವನವನ್ನು ಆಧರಿಸಿದ್ದು, ಈ ಸಾಕ್ಷ್ಯಚಿತ್ರದಿಂದಾಗಿ ಈ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಕ್ರೈಸ್ತರ ಹಿಡಿತಕ್ಕೆ ಸಿಲುಕಿದ 18 ವರ್ಷದ ಲಿಝ ಅವರ ಕರುಣಾಜನಕ ಕಥೆ –
1. 2011ರಲ್ಲಿ ಲಿಝ ಕ್ಯಾಮೆರಾನ್ 18 ವರ್ಷದವರಾಗಿದ್ದರು. ಆ ಸಮಯದಲ್ಲಿ ಅವರು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಗುಂಪಿನ ಬಲೆಗೆ ಸಿಲುಕಿದರು.
2. ಈ ಗುಂಪಿನ ಯುಜುನ್ ಎಂಬ ಮಹಿಳೆ ಅತ್ಯಂತ ಚಾತುರ್ಯದಿಂದ ತಮ್ಮ ಮಾತುಗಳಲ್ಲಿ ಅವಳನ್ನು ವಂಚಿಸಿದರು ಮತ್ತು ಲಿಝ ಅದರಲ್ಲಿ ಹೇಗೆ ಸಿಕ್ಕಿಹಾಕಿಕೊಂಡರು ಎಂಬುದು ಅವಳಿಗೆ ತಿಳಿಯಲಿಲ್ಲ. ಅಷ್ಟೇ ಅಲ್ಲದೆ, ಕಾಲಾನಂತರದಲ್ಲಿ ಅವರು ಮನೆ ಬಿಟ್ಟು ಕ್ಯಾನ್ಬೆರಾ ನಗರದ ಈ ಕ್ರೈಸ್ತ ಗುಂಪಿನೊಂದಿಗೆ ವಾಸಿಸಲು ಪ್ರಾರಂಭಿಸಿದರು.
3. ಮುಂದೆ ಅವರ ಬ್ರೈನ್‌ವಾಶ್ ಅಷ್ಟರಮಟ್ಟಿಗೆ ಮಾಡಲಾಗಿತ್ತು ಎಂದರೆ, ‘3 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ದಕ್ಷಿಣ ಕೊರಿಯಾದ ಪಾದ್ರಿ ಜೋಶುವಾ ಅವರೇ ಅವಳಿಗೆ ಸರ್ವಸ್ವ’ ಎಂದು ಅವಳಿಗೆ ಅನಿಸಿತು.
4. ‘ಜೋಶುವಾ ಅವಳನ್ನು ಪ್ರೀತಿಸುತ್ತಾನೆ’ ಎಂದು ಅವಳಿಗೆ ಹೇಳಲಾಯಿತು. ಇದರಿಂದ ‘ನಾನು ವಿಶೇಷ ವಧು’ ಎಂದು ಅವಳಿಗೆ ಅನಿಸಿ, ಅವಳು ತನ್ನನ್ನು ತಾನು ಅದೃಷ್ಟಶಾಲಿ ಎಂದು ಭಾವಿಸಲು ಪ್ರಾರಂಭಿಸಿದಳು.
5. ಮುಂದೆ ಅವಳನ್ನು ದಕ್ಷಿಣ ಕೊರಿಯಾಗೆ ಕರೆದೊಯ್ದಾಗ ಪಾದ್ರಿ ಜೋಶುವಾ ಅವಳೊಂದಿಗೆ ದೈಹಿಕ ಸಂಬಂಧ ಹೊಂದುವ ಇಚ್ಛೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಲಿಝಗೆ, ಜೋಶುವಾ ಅವರೊಂದಿಗೆ ಎಲ್ಲವನ್ನೂ ಮಾಡುವುದು ‘ಪವಿತ್ರ’ ಎಂದು ಅನಿಸಿತು. ಆದ್ದರಿಂದ ಅವಳು ಅವರೊಂದಿಗೆ ದೈಹಿಕ ಸಂಬಂಧವನ್ನೂ ಹೊಂದಿದಳು.
6. ಕಾಲಾನಂತರದಲ್ಲಿ ಲಿಝ ಅವರ ಆರೋಗ್ಯ ಹದಗೆಟ್ಟಿತು. ಜನವರಿ 2012ರಲ್ಲಿ ಅವಳನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಅಲ್ಲಿ ಅವಳ ತಾಯಿ ಅವಳನ್ನು ಭೇಟಿಯಾಗಿ ಚರ್ಚ್‌ನ ಹಿಡಿತದಿಂದ ಬಿಡಿಸಿ ಮನೆಗೆ ಕರೆದುಕೊಂಡು ಹೋದರು. ಮನೋವೈದ್ಯರ ಸಹಾಯ ಪಡೆದ ನಂತರ ಅವಳಿಗೆ ಎಲ್ಲಾ ಸತ್ಯ ಅರ್ಥವಾಯಿತು ಮತ್ತು ಅವಳು ಇದರಿಂದ ಹೊರಬಂದಳು. ಈ ಸಮಯದಲ್ಲಿ ಅವಳನ್ನು ಬಲೆಗೆ ಸಿಕ್ಕಿಹಾಕಿಕೊಳ್ಳಲು ಯಾವ ರೀತಿ ತಂತ್ರ ರೂಪಿಸಲಾಗಿತ್ತು ಎಂಬ ಸಂಪೂರ್ಣ ಚಿತ್ರವನ್ನು ಅವಳು ಜೋಡಿಸಲು ಸಾಧ್ಯವಾಯಿತು ಮತ್ತು ಅದರ ಆಧಾರದ ಮೇಲೆ ಅವಳು ಪುಸ್ತಕವನ್ನೂ ಬರೆದಳು.
7. ಲಿಝ ಅವರ ಪ್ರಕರಣ ಬಯಲಾದ ನಂತರ, 2023ರಲ್ಲಿ ಪಾದ್ರಿ ಜೋಶುವಾ ಅಲಿಯಾಸ್ ಜಂಗ್ ಮ್ಯುಂಗ್-ಸಿಯೋಕ್ ಅವರಿಗೆ 23 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಅವರು ಈಗಾಗಲೇ 3 ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಾ ಶಿಕ್ಷೆ ಅನುಭವಿಸುತ್ತಿದ್ದಾನೆ.
8. ಇಂದು ಲಿಝ ಕ್ಯಾನ್ಬೆರಾದಲ್ಲಿ ವಕೀಲರಾಗಿ ವೃತ್ತಿ ನಡೆಸುತ್ತಿದ್ದಾರೆ ಮತ್ತು ಮನಃಶಾಸ್ತ್ರದಲ್ಲಿ ಪದವಿ ಪಡೆಯುತ್ತಿದ್ದಾರೆ. ಮಾತಾಂಧರ ಷಡ್ಯಂತ್ರಗಳು ಹಾಗೂ ಅವರು ಜನರನ್ನು ಹೇಗೆ ಬ್ರೈನ್‌ವಾಶ್ ಮಾಡುತ್ತಾರೆ, ಎಂಬುದರ ಕುರಿತು ಸಹ ಅವರು ಮಾರ್ಗದರ್ಶನ ನೀಡುತ್ತಾರೆ.
9. ಅವರ ಜೀವನದ ಈ ಘಟನೆಗಳ ಆಧಾರದ ಮೇಲೆ ‘ದಿ ಕಲ್ಟ್ ನೆಕ್ಸ್ಟ್ ಡೋರ್’ ಹೆಸರಿನ ಒಂದು ಸಾಕ್ಷ್ಯಚಿತ್ರವನ್ನು ಮಾಡಲಾಗಿದೆ.
ಸಂಪಾದಕೀಯ ನಿಲುವು
|
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು