ಗುಜರಾತ ಹೈಕೋರ್ಟ್‌ನಲ್ಲಿ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

ಕರ್ಣಾವತಿ (ಗುಜರಾತ) – ಆನ್‌ಲೈನ್ ವಿಚಾರಣೆಯ ಸಮಯದಲ್ಲಿ ಹಿರಿಯ ವಕೀಲ ಭಾಸ್ಕರ್ ತನ್ನಾ ಬಿಯರ್ ಕುಡಿಯುತ್ತಿರುವುದು ಕಂಡುಬಂದ ಪ್ರಕರಣದಲ್ಲಿ, ಗುಜರಾತ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಂಡಿದೆ. ಈ ಘಟನೆ ಜೂನ್ 26 ರಂದು ನಡೆದಿದ್ದು, ಇದರ ವಿಡಿಯೋ ಈಗ ಹೊರಬಿದ್ದ ನಂತರ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದ ಅವಧಿಯಲ್ಲಿ, ತನ್ನಾ ಅವರು ಆನ್‌ಲೈನ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗದಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯವು, ಇಂತಹ ಕೃತ್ಯಗಳು ಹೊಸ ವಕೀಲರ ಮೇಲೆ ಪರಿಣಾಮ ಬೀರುತ್ತವೆ; ಏಕೆಂದರೆ ಅವರು ಹಿರಿಯ ವಕೀಲರನ್ನು ಆದರ್ಶಪ್ರಾಯವಾಗಿ ಕಾಣುತ್ತಾರೆ ಎಂದು ಹೇಳಿದೆ. ಭಾಸ್ಕರ್ ತನ್ನಾ ಅವರ ನಡವಳಿಕೆಯು ಅವರಿಗೆ ಹಿರಿಯ ವಕೀಲರಾಗಿ ನೀಡಲಾದ ವಿಶೇಷಾಧಿಕಾರಗಳನ್ನು ಅಪವಿತ್ರಗೊಳಿಸುತ್ತದೆ. ಅವರಿಗೆ ನೀಡಲಾದ ‘ಹಿರಿಯ ವಕೀಲ’ ಹುದ್ದೆಯ ಮರುಪರಿಶೀಲನೆ ಅಗತ್ಯವಿದೆ ಎಂದು ಕೋರ್ಟ್ ನುಡಿದಿದೆ.
ಸಂಪಾದಕೀಯ ನಿಲುವುಇಂತಹ ವಕೀಲರ ಪರವಾನಗಿಯನ್ನು ರದ್ದುಗೊಳಿಸುವುದು ಆವಶ್ಯಕ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!