
ಫೋಂಡಾದ ಫರ್ಮಾಗುಡಿಯಲ್ಲಿರುವ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಮೇ ೧೭ ರಿಂದ ೧೯ ರ ವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಯಶಸ್ವಿಯಾಗಿ ನಡೆಯಿತು. ಈ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಧರ್ಮಪತ್ನಿ ಡಾ. (ಸೌ.) ಕುಂದಾ ಜಯಂತ ಆಠವಲೆ ಅವರು ತಮಗೆ ಬಹುಮಾನವಾಗಿ ಸಿಕ್ಕಿದ್ದ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಸಮರ್ಪಿಸಿದರು.
ಈ ಕುರಿತು ಡಾ. (ಸೌ.) ಕುಂದಾ ಆಠವಲೆ ಅವರು, ‘ಪೂ. ಭಕ್ತರಾಜ ಮಹಾರಾಜರ ಶಿಷ್ಯರಾದ ಪೂ. ರಾಮಾನಂದ ಮಹಾರಾಜರ ಜನ್ಮಶತಮಾನೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು. ಆ ಸಮಯದಲ್ಲಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ನಾಮಜಪವನ್ನು ಎಲ್ಲರೂ ಆದಷ್ಟು ಹೆಚ್ಚು ಬರೆಯಬೇಕು’ ಎಂಬ ಸಂಕಲ್ಪವನ್ನು ಮಾಡಲಾಗಿತ್ತು. ಎಲ್ಲರೂ ಆ ಜಪವನ್ನು ಬರೆದಿದ್ದರು. ಆ ಸಮಯದಲ್ಲಿ ‘ಯಾರು ಹೆಚ್ಚು ಜಪ ಬರೆದಿದ್ದಾರೋ, ಆ ಮೂವರು ಭಕ್ತರಿಗೆ ಬಹುಮಾನ ನೀಡಲಾಗುವುದು’ ಎಂದು ಘೋಷಿಸಲಾಗಿತ್ತು. ಆಗ ನನಗೆ ಶ್ರೀ ರಾಮಲಲ್ಲಾನ ಚಿಕ್ಕ ಮೂರ್ತಿಯು ಬಹುಮಾನವಾಗಿ ಸಿಕ್ಕಿತ್ತು. ಇಲ್ಲಿ ಅನೇಕರು ಅವರ ಮಾರ್ಗದರ್ಶನದಲ್ಲಿ ರಾಮರಾಜ್ಯ ಸ್ಥಾಪನೆಯ ಬಗ್ಗೆ ಮಾತನಾಡಿದರು ಎಂದು ನನಗೆ ಇಂದು ಅನಿಸಿತು. ಆದ್ದರಿಂದ ಈ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉಡುಗೊರೆಯಾಗಿ ನೀಡಲು ಇದು ಸರಿಯಾದ ಸಮಯವಾಗಿದ್ದು, ನಾನು ಅವರಿಗೆ ಈ ಮೂರ್ತಿಯನ್ನು ಅರ್ಪಿಸುತ್ತಿದ್ದೇನೆ’ ಎಂದು ಹೇಳಿದರು. ಹೀಗೆ ಹೇಳಿ ಡಾ. (ಸೌ.) ಕುಂದಾ ಆಠವಲೆ ಅವರು ಆನಂದದಿಂದ ಶ್ರೀರಾಮಲಲ್ಲಾನ ಮೂರ್ತಿಯನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಅರ್ಪಿಸಿದರು.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೇಶದ ದುರ್ದಶೆಗೆ ಇದುವೇ ಕಾರಣ !
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸಾಧಕರೇ, ಕಾರ್ಯ ಮತ್ತು ಸಾಧನೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಕಾರ್ಯ ಮಾಡುವಾಗ ಸಾಧನೆಯಾಗುವತ್ತ ಗಮನ ಹರಿಸಿ !