
ಶ್ರೀನಗರ (ಜಮ್ಮು- ಕಾಶ್ಮೀರ) – ಕೇರಿ ವಲಯದಲ್ಲಿ ನಿಯಂತ್ರಣ ರೇಖೆಯ ಬಳಿ ನುಸುಳಲು ಯತ್ನಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಓರ್ವ ಪಾಕಿಸ್ತಾನಿ ‘ಮಾರ್ಗದರ್ಶಕನನ್ನು’ (‘ಗೈಡ್’) ಬಂಧಿಸಲಾಗಿದೆ. ಆತನನ್ನು ಮೊಹಮ್ಮದ್ ಅರೀಬ್ ಅಹ್ಮದ್ (22 ವರ್ಷ) ಎಂದು ಗುರುತಿಸಲಾಗಿದ್ದು, ಆತನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೊಟ್ಲಿ ಜಿಲ್ಲೆಯ ನಿಕಿಯಾಲ್ ಪ್ರದೇಶದ ಡೇಟೋಟೆ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಭಯೋತ್ಪಾದಕರಿಗೆ ಗಡಿಯೊಳಗೆ ನುಸುಳಲು ಸಹಾಯ ಮಾಡುತ್ತಿದ್ದನು.
ದಟ್ಟಾರಣ್ಯ ಹಾಗೂ ಗುಡ್ಡಗಾಡು ಪ್ರದೇಶದ ಲಾಭ ಪಡೆದು ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿದ್ದರು; ಆದರೆ ಭಾರತೀಯ ಸೇನೆಯು ನಡೆಸಿದ ಗುಂಡಿನ ದಾಳಿಯ ನಂತರ ಅವರು ಪರಾರಿಯಾಗಿದ್ದು, ಅಹ್ಮದ್‌ನನ್ನು ಹಿಡಿಯಲಾಗಿದೆ.
ಸಂಪಾದಕೀಯ ನಿಲುವುಇಂತಹವರನ್ನು ಜೈಲಿನಲ್ಲಿಟ್ಟು ಸಾಕುವ ಬದಲು, ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲಿಗೇರಿಸಬೇಕು! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ