ತುಂಡು ಮತ್ತು ದೇಹ ಪ್ರದರ್ಶಿಸುವ ಬಟ್ಟೆಗಳನ್ನು ಧರಿಸಿ ಬಂದರೆ ಪ್ರವೇಶ ನಿಷಿದ್ಧ!
(ವಸ್ತ್ರ ಸಂಹಿತೆ ಎಂದರೆ ದೇವಸ್ಥಾನ ಪ್ರವೇಶಿಸುವಾಗ ಧರಿಸಬೇಕಾದ ಉಡುಪುಗಳ ನಿಯಮಗಳು)

ಕಾರ್ಲಾ (ತಾ. ಮಾವಳ್, ಜಿಲ್ಲೆ ಪುಣೆ) – ಇಲ್ಲಿನ ಶ್ರೀ ಎಕವೀರಾ ದೇವಸ್ಥಾನ ಟ್ರಸ್ಟ್, ಆಯಿ(ಅಮ್ಮ) ಶ್ರೀ ಎಕವೀರಾ ದೇವಿ ದರ್ಶನಕ್ಕೆ ಬರುವ ಭಕ್ತರಿಗಾಗಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ ಹಾಗೂ ಆಗರಿ ಮತ್ತು ಕೋಳಿ ಸಮಾಜದ ಕುಲದೇವತೆ ಆಗಿರುವ ಕುಲಸ್ವಾಮಿನಿ ಅಮ್ಮ ಎಕವೀರಾ ದೇವಿ ಮಂದಿರಕ್ಕೆ ಬರುವ ಭಕ್ತರಿಗಾಗಿ, ಅಂದರೆ ಮಹಿಳೆಯರು ಮತ್ತು ಪುರುಷರಿಗಾಗಿ ಜುಲೈ 7 ರಿಂದ ಈ ವಸ್ತ್ರ ನಿಯಮಾವಳಿ ಅನ್ವಯವಾಗಲಿದೆ. ವ್ಯಾಪಾರಿಗಳು ಮತ್ತು ಸ್ಥಳೀಯರಿಗೂ ಈ ನಿಯಮ ಅನ್ವಯವಾಗುತ್ತದೆ.

‘ಈ ನಿರ್ಧಾರದ ಪ್ರಕಾರ ದೇವಸ್ಥಾನಕ್ಕೆ ಬರುವ ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು. ತುಂಡು ಮತ್ತು ದೇಹ ಪ್ರದರ್ಶಿಸುವ ಬಟ್ಟೆಗಳನ್ನು ಧರಿಸಿ ಬಂದರೆ ಭಕ್ತರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ’ ಎಂದು ದೇವಸ್ಥಾನದಿಂದ ಸ್ಪಷ್ಟಪಡಿಸಲಾಗಿದೆ. ಜೂನ್ 27 ರಂದು ದೇವಸ್ಥಾನ ಟ್ರಸ್ಟ್‌ನ ಈ ಕುರಿತು ಸಭೆ ನಡೆಯಿತು. ಅದರಲ್ಲಿ ಎಲ್ಲಾ ಸದಸ್ಯರ ಸರ್ವಾನುಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇವಸ್ಥಾನದ ಧಾರ್ಮಿಕ ವಾತಾವರಣದ ಪವಿತ್ರತೆಯನ್ನು ಕಾಪಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪರವಾಗಿ ತಿಳಿಸಲಾಗಿದೆ.
ಸಂಪಾದಕೀಯ ನಿಲುವುಶ್ರೀ ಎಕವೀರಾ ದೇವಸ್ಥಾನದ ಶ್ಲಾಘನೀಯ ನಿರ್ಧಾರ! ರಾಜ್ಯದಲ್ಲಿ ಹೆಚ್ಚಿನ ದೇವಸ್ಥಾನಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಈಗ ಇದೇ ರೀತಿ ದೇವಸ್ಥಾನಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಗಳನ್ನು ಪ್ರಾರಂಭಿಸಬೇಕು. ಇದರಿಂದ ಹಿಂದೂಗಳಿಗೆ ಅವರ ಧರ್ಮದ ಮಹತ್ವ, ಧಾರ್ಮಿಕ ವಿಧಿಗಳ ಹಿಂದಿನ ಕಾರಣ, ಆಧ್ಯಾತ್ಮಶಾಸ್ತ್ರ ಇತ್ಯಾದಿಗಳ ಮಾಹಿತಿ ಸಿಗುತ್ತದೆ ಮತ್ತು ಅವರ ಶ್ರದ್ಧೆ ಇನ್ನಷ್ಟು ಹೆಚ್ಚಾಗುತ್ತದೆ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ