ಕಾಶ್ಮೀರದ ಬಗ್ಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತೊಮ್ಮೆ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಕಾಶ್ಮೀರದ ಬಗ್ಗೆ ಭಾರತದ ವಿರುದ್ಧ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. “ಭಾರತದ ಅಕ್ರಮ ನಿಯಂತ್ರಣದ ವಿರುದ್ಧ ಹೋರಾಡುತ್ತಿರುವ ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನಾವು ಸ್ಮರಿಸಬೇಕು” ಎಂದು ಅವರು ಹೇಳಿದರು.
1. ಮುನೀರ್ ಮಾತು ಮುಂದುವರೆಸಿ, “ಪಾಕಿಸ್ತಾನವು ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾಶ್ಮೀರ ಸಮಸ್ಯೆಯ ನ್ಯಾಯಯುತ ಪರಿಹಾರದ ಪ್ರಬಲ ಬೆಂಬಲಿಗವಾಗಿದೆ. ಭಾರತವು ಉದ್ದೇಶಪೂರ್ವಕವಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ, ಆದರೆ ಪಾಕಿಸ್ತಾನವು ಭಯೋತ್ಪಾದನೆಯ ನಿರ್ಮೂಲನೆಯ ಹತ್ತಿರ ತಲುಪುತ್ತಿದೆ” ಎಂದರು. (ಇದಕ್ಕಿಂತ ಹಾಸ್ಯಾಸ್ಪದ ವಾಕ್ಯ ಇನ್ನೊಂದಿದೆಯೇ? – ಸಂಪಾದಕರು)
2. ಮುನೀರ್ ಅವರು, “ಭಾರತವು ಯಾವುದೇ ಪ್ರಚೋದನೆಯಿಲ್ಲದೆ ಪಾಕಿಸ್ತಾನದ ಮೇಲೆ ಎರಡು ಬಾರಿ ಆಕ್ರಮಣ ಮಾಡಿದೆ. ಇದು ಭಾರತದ ಕಾರ್ಯತಂತ್ರದ ದೂರದೃಷ್ಟಿಯ ಆತಂಕಕಾರಿ ಕೊರತೆಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಯಾವುದೇ ಆಕ್ರಮಣಕಾರಿ ನಡೆಯನ್ನು ನಿರ್ಣಾಯಕ ಮತ್ತು ಸೂಕ್ತವಾಗಿ ಎದುರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮುನೀರ್ ಏಪ್ರಿಲ್‌ನಲ್ಲಿ ಕಾಶ್ಮೀರದ ಬಗ್ಗೆ ಮಾತನಾಡಿದ ನಂತರ ಪಹಲ್ಗಾಮ್ ದಾಳಿ ನಡೆದಿತ್ತು

ಅಸೀಮ್ ಮುನೀರ್ ಅವರು ಏಪ್ರಿಲ್‌ನಲ್ಲಿ ಕಾಶ್ಮೀರವನ್ನು ‘ಪಾಕಿಸ್ತಾನದ ಕುತ್ತಿಗೆಯ ನರ’ ಎಂದು ಕರೆದಿದ್ದರು. ಅದರ ಕೆಲವು ದಿನಗಳ ನಂತರ ಪಹಲ್ಗಾಮನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈಗ ಮುನೀರ್ ಅವರು ಮತ್ತೆ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿರುವುದರಿಂದ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಂಪಾದಕೀಯ ನಿಲುವುಇಸ್ರೇಲ್ ಹೇಗೆ ಇರಾನ್‌ಗೆ ನುಗ್ಗಿ ಇರಾನಿ ಸೇನೆಯ ಮುಖ್ಯಸ್ಥರೊಂದಿಗೆ ಇತರ ಹಿರಿಯ ಅಧಿಕಾರಿಗಳನ್ನು ಕೊಂದಂರೋ, ಭಾರತ ಈಗ ಪಾಕಿಸ್ತಾನದಲ್ಲಿ ಅಂತಹ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಭಾರತ ಇಂತಹ ಧೈರ್ಯ ತೋರಿಸಿ ಭಯೋತ್ಪಾದನೆಯಿಂದ ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸುತ್ತದೆಯೇ? |
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman