
೧. ಮಾಯೆಯ ಸಂಬಂಧಗಳು ಬಂಧನದಲ್ಲಿ ಸಿಲುಕಿಸುತ್ತವೆ ಮತ್ತು ಶ್ರೀ ಗುರುಗಳು ಬಂಧನಗಳಿಂದ ಮುಕ್ತಗೊಳಿಸುತ್ತಾರೆ !
ಶ್ರೀ ಗುರುಗಳು ನಮಗೆ ನಮ್ಮ ಮನಸ್ಸಿಗಿಂತಲೂ ಹತ್ತಿರದವರಾಗಿ ದ್ದಾರೆ. ಭಕ್ತಿಯ ರೇಶ್ಮೆ ದಾರದಿಂದ ನಿಮ್ಮ ಮನಸ್ಸನ್ನು ಗುರುಚರಣಗಳಿಗೆ ಕಟ್ಟಿಹಾಕಿ. ಶುದ್ಧ ಪ್ರೀತಿಯ ನೀರಿನಿಂದ ಶ್ರೀ ಗುರುಗಳ ಚರಣಗಳನ್ನು ತೊಳೆಯಿರಿ. ನಿಮ್ಮ ದೈವೀ ಗುಣಗಳ ಹೂಮಾಲೆಯಿಂದ ಶ್ರೀ ಗುರುಗಳನ್ನು ಅಲಂಕರಿಸಿರಿ. ತಾಯಿ-ತಂದೆ, ಸಹೋದರ-ಸಹೋದರಿ, ಬಂಧು-ಬಾಂಧವರು ಈ ಎಲ್ಲ ಸಂಬಂಧಗಳು ಶ್ರೀ ಗುರುಗಳಲ್ಲಿ ಒಂದಾಗುತ್ತವೆ. ಸಾಂಸಾರಿಕ ದೃಷ್ಟಿಯಿಂದ ಈ ಸಂಬಂಧಗಳು ಶಾರೀರಿಕವಾಗಿರುವುದರಿಂದ ಬಂಧನದಲ್ಲಿ ಸಿಲುಕಿಸುತ್ತವೆ, ಆದರೆ ಶ್ರೀ ಗುರುಗಳು ಈ ಎಲ್ಲ ಬಂಧನಗಳಿಂದ ಮುಕ್ತಗೊಳಿಸುತ್ತಾರೆ. ಗುರುಚರಣಗಳೇ ವೈಕುಂಠ, ಗುರುಚರಣಗಳೇ ಗೋಲೋಕ ಮತ್ತು ಅವೇ ಕೈಲಾಸವಾಗಿವೆ. ಶ್ರೀ ಗುರುಗಳ ಕೃಪಾಕಟಾಕ್ಷವೆಂದರೆ ಅಮೃತದ ಧಾರೆ ! ಅಂತರಂಗದ ಮುಚ್ಚಳವನ್ನು ತೆರೆಯಿರಿ ಮತ್ತು ಆ ಅಮೃತವನ್ನು ಸಂಪೂರ್ಣ ತುಂಬಿಕೊಳ್ಳಿ. ಗುರುಕೃಪೆಯಿಂದಲೇ ಅಂತರಂಗದಲ್ಲಿ ಆತ್ಮಜ್ಞಾನದ ಬೆಳಕು ಮೂಡುತ್ತದೆ. ನೀವು ಸತ್ಯಧಾಮದ ಯಾತ್ರೆಗೆ ಹೊರಟಿದ್ದೀರಿ. ಎಲ್ಲರೂ ನಿಮ್ಮನ್ನು ದಾರಿಯಲ್ಲಿ ಕೈಬಿಡುತ್ತಾರೆ. ‘ಎಲ್ಲರೂ ಕೈಬಿಡುವರು. ನಿನಗಲ್ಲದೆ ಬೇರೆ ಯಾರಲ್ಲಿ ಆಸರೆ ಕೇಳಲಿ.’ (ರಾಷ್ಟ್ರಸಂತ ತುಕಡೋಜಿ ಮಹಾರಾಜರು) ಎಂಬ ಸ್ಥಿತಿ ಬರುತ್ತದೆ. ಈ ಯಾತ್ರೆಯಲ್ಲಿ ಕೊನೆಯ ಹಂತದವರೆಗೂ ಶ್ರೀ ಗುರುಗಳು ಮಾತ್ರ ನಿಮ್ಮ ಜೊತೆ ಇರುತ್ತಾರೆ. ಮಾಯೆಯ ಪರದೆಯಿಂದ ಸದ್ಗುರುಗಳ ದರ್ಶನವಾಗುವುದಿಲ್ಲ. ಈ ಪರದೆಯನ್ನು ದೂರ ಮಾಡಲು ಶ್ರೀ ಗುರುಗಳ ಬಳಿ ಅತ್ಯಂತ ತೀವ್ರವಾಗಿ ಮತ್ತು ಮನಃಪೂರ್ವಕವಾಗಿ ಪ್ರಾರ್ಥಿಸಿ.
೨. ಭವಸಾಗರವನ್ನು ದಾಟಲು ಶ್ರೀ ಗುರುಗಳ ಆಧಾರ ಆವಶ್ಯಕ !
ಗುರೂರೂಪಿ ದೋಣಿಯ ಆಧಾರದಿಂದ ಸುಲಭವಾಗಿ ಆಚೆ ದಡವನ್ನು ತಲುಪಬಹುದು. ಗುರು ಚಿಂತನೆಯಲ್ಲಿ ಚಿತ್ತವನ್ನು ಮಗ್ನಗೊಳಿಸಿದರೆ, ಚಿಂತೆ ತಾನಾಗಿಯೇ ಚಿಂತನೆಯ ಸ್ವರೂಪವನ್ನು ಪಡೆಯುತ್ತದೆ. ಸಣ್ಣ ಮಗು ನಡೆಯಲು ಪ್ರಾರಂಭಿಸಿದಾಗ, ಮೊದಲು ಸಮತೋಲನವನ್ನು ಕಾಪಾಡಿಕೊಳ್ಳಲು ಅದು ಮೂರು ಕಾಲಿನ ಗಾಡಿಯ ಆಧಾರವನ್ನು ತೆಗೆದುಕೊಳ್ಳುತ್ತದೆ. ಮುಪ್ಪಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಕೋಲಿನ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ, ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಶ್ರೀ ಗುರುಗಳ ಆಧಾರ ಬೇಕೇ ಬೇಕಾಗುತ್ತದೆ. ಏಕನಾಥಿ ಭಾಗವತದಲ್ಲಿ (ಅಧ್ಯಾಯ ೩, ಶ್ಲೋಕ ೮೦೬) ಮುಂದಿನಂತೆ ಬರೆಯಲಾಗಿದೆ, ‘ಪ್ರವೃತ್ತಿ ಅಥವಾ ನಿವೃತ್ತಿ ಈ ಕರ್ತವ್ಯಗಳ ಜ್ಞಾನವನ್ನು ತಿಳಿಸಿಕೊಡಲು ಗುರುಗಳು ಅವಶ್ಯ ಬೇಕು. ಹೇ ರಾಜಾ, ಮಾರ್ಗದರ್ಶಕ ಆಚಾರ್ಯರಿಲ್ಲದೆ ತಮ್ಮದೇ ಬುದ್ಧಿಯಿಂದ ಕರ್ಮಗಳನ್ನು ಆಚರಿಸಿದರೆ ಆ ಭಕ್ತನು ನಿಸ್ಸಂದೇಹ ವಾಗಿ ಅನೇಕ ಸಂಕಟಗಳಲ್ಲಿ ಸಿಲುಕುತ್ತಾನೆ’.
೩. ಜೀವನದ ತೊಡಕನ್ನು ಬಿಡಿಸಲು ಶ್ರೀ ಗುರುಗಳ ಮಾರ್ಗದರ್ಶನವೇ ಉಪಯುಕ್ತ !
ದಾರದ ಕಗ್ಗಂಟನ್ನು ಬಿಡಿಸಬೇಕಾದರೆ, ಅದರಲ್ಲಿನ ಯಾವ ದಾರವನ್ನು ಎಳೆಯಬೇಕು ಎಂದು ತಿಳಿದಿರಬೇಕು, ಇಲ್ಲದಿದ್ದರೆ ಕಗ್ಗಂಟು ಇನ್ನಷ್ಟು ಜಟಿಲವಾಗುತ್ತದೆ. ಈ ಸರಿಯಾದ ದಾರ ಯಾವುದು ಎಂಬುದನ್ನು ಶ್ರೀ ಗುರುಗಳು ಮಾತ್ರ ತೋರಿಸುತ್ತಾರೆ. ನಮನದಿಂದ ಅಮನ ಅಂದರೆ ಶಾಂತಿ ಮತ್ತು ಧ್ಯಾನದಿಂದ ಉನ್ಮನವಾಗದೇ ಶ್ರೀ ಗುರುಗಳೊಂದಿಗೆ ತನ್ಮಯರಾಗಲು ಸಾಧ್ಯ ಆಗುವುದಿಲ್ಲ. ನಮನವು ಜ್ಞಾನಯುಕ್ತವಾಗಿರಬೇಕು ಮತ್ತು ಯಾರಿಗೆ ನಮಿಸುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಹವನ್ನು ದೇವಾಲಯವನ್ನಾಗಿ ಮಾಡಿ, ಅದರಲ್ಲಿ ಗುರು ಮೂರ್ತಿಯನ್ನು ಸ್ಥಾಪಿಸುವ ಮೊದಲು ಈ ದೇಹವನ್ನು ಶುದ್ಧಗೊಳಿಸಬೇಕು. ಗುರುತ್ವಾಕμರ್Àಣೆಯಂತೆ ಗುರುತತ್ತ್ವದ ಆಕರ್ಷಣೆ ಇರುತ್ತದೆ. ಏಣಿಯು ಹತ್ತುವವನನ್ನು ನಿಧಾನವಾಗಿ ಮೇಲೆ ಕರೆದುಕೊಂಡು ಹೋಗುವಂತೆ, ಗುರುಗಳು ಸಾಧಕನನ್ನು ನಿಧಾನವಾಗಿ ಉನ್ನತಿಯ ಮಾರ್ಗದಲ್ಲಿ ಮುನ್ನಡೆಸುತ್ತಾರೆ. ತನ್ನ ರೋಗ ವಾಸಿಯಾಗಲು ತಾನೇ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ತ್ರಿವಿಧ ತಾಪಗಳಿಂದ ಮುಕ್ತಿ ಬೇಕಾಗಿದ್ದರೆ, ತಾನೇ ಗುರುಭಕ್ತಿ ಮಾಡಬೇಕಾಗುತ್ತದೆ.
– ಶ್ರೀ. ದಾಮೋದರ ದತ್ತಾತ್ರೇಯ ಕುಲಕರ್ಣಿ (ಸೌಜನ್ಯ: ಮಾಸಿಕ ‘ಜೀವನ ವಿಕಾಸ’)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !