
ಧರ್ಮ, ಧರ್ಮಾಚರಣೆ ಮತ್ತು ಅಧ್ಯಾತ್ಮ ಹಾಗೂ ಸಾಧನೆ ಇವು ಗಳ ಸಂಕಲ್ಪನೆಯ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ವಾಗುತ್ತದೆ. ಅನೇಕ ಧರ್ಮಗ್ರಂಥ, ಋಷಿಮುನಿಗಳು, ಧರ್ಮಾಚಾರ್ಯರು, ಸಂತ, ಅಭ್ಯಾಸಕ ಅವರು ಅನೇಕ ಪ್ರಕಾರದಲ್ಲಿ ಇವುಗಳ ವ್ಯಾಖ್ಯೆ ಮಾಡಿದ್ದಾರೆ. ಈ ನಾಲ್ಕು ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕಲ್ಪನೆ ಹೀಗಿದೆ.
೧. ಧರ್ಮ
ಈಶ್ವರಪ್ರಾಪ್ತಿ ಮಾಡಿಕೊಳ್ಳುವುದೇ ಈ ಭೂಮಿಯ ಮೇಲೆ ಪ್ರತಿಯೊಬ್ಬರ ಮೂಲ ಧ್ಯೇಯವಾಗಿದೆ. ಈ ಧ್ಯೇಯವನ್ನು ಸಾಧಿಸಲು ಪ್ರತಿಯೊಬ್ಬರಿಗೂ ಇತರರಿಂದ ಸಹಾಯ ಸಿಗಬೇಕೆಂದು ಈಶ್ವರನು ಪ್ರತಿಯೊಬ್ಬರಿಗೂ ಕೆಲವು ಕರ್ತವ್ಯ ಮತ್ತು ನಿಯಮಗಳನ್ನು ಹಾಕಿಕೊಟ್ಟಿದ್ದಾನೆ. ಅದನ್ನೇ ‘ಧರ್ಮ’ ಎಂದು ಕರೆಯಲಾಗುತ್ತದೆ.
೨. ಧರ್ಮಾಚರಣೆ
ಧರ್ಮವು ಹೇಳಿದಂತೆ ಆಚರಣೆಯಲ್ಲಿ ತರುವುದು, ಅಂದರೆ ಧರ್ಮಾಚರಣೆ !
೩. ಅಧ್ಯಾತ್ಮ
ಈಶ್ವರನಿರ್ಮಿತ ವಿಶ್ವದ ಕಾರ್ಯನಿರ್ವಹಣೆಯ ವಿಧಾನ, ಅದರ ನಿಯಮಗಳು ಮತ್ತು ಸಿದ್ಧಾಂತ ಹೇಳುವ ಶಾಸ್ತ್ರವೇ ಅಧ್ಯಾತ್ಮ !
೪. ಸಾಧನೆ
ಅಧ್ಯಾತ್ಮದಲ್ಲಿ ಹೇಳಿರುವ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳನ್ನು ಲಯಗೊಳಿಸಲು ಪ್ರಯತ್ನಿಸುವುದೇ ಸಾಧನೆ !
ಧರ್ಮಾಚರಣೆಯಿಂದ ಸಾಧನೆ ಆಗುತ್ತದೆಯೇ ?
ಧರ್ಮಾಚರಣೆಯಿಂದ ವ್ಯಕ್ತಿಯು ಸತ್ತ್ವಗುಣಿಯಾಗುತ್ತಾನೆ. ಆದರೆ ಕೇವಲ ಅದರಿಂದ ಮನಸ್ಸು, ಬುದ್ಧಿ ಮತ್ತು ಅಹಂ ತ್ಯಾಗವಾಗುವುದಿಲ್ಲ. ಉದಾಹರಣೆಗೆ, ಧರ್ಮಾಚರಣೆಯೆಂದು ಪಿತೃಗಳಿಗಾಗಿ ಶ್ರಾದ್ಧ ಮಾಡಿದರೆ, ಅದರಿಂದ ಪಿತೃಗಳಿಗೆ ಸದ್ಗತಿ ದೊರೆಯುತ್ತದೆ ಮತ್ತು ನಮ್ಮ ಸಾಧನೆಯಲ್ಲಿ ಪಿತೃಗಳಿಂದ ಬರುವ ಅಡೆತಡೆಗಳು ದೂರವಾಗುತ್ತವೆ; ಆದರೆ ಕೇವಲ ಶ್ರಾದ್ಧ ಮಾಡುವುದರಿಂದ ಮನಸ್ಸು, ಬುದ್ಧಿ ಮತ್ತು ಅಹಂಕಾರವು ಲಯವಾಗುವುದಿಲ್ಲ. ಆದ್ದರಿಂದ ಅದಕ್ಕಾಗಿ ಪ್ರತ್ಯಕ್ಷ ಸಾಧನೆ ಮಾಡುವುದು ಆವಶ್ಯಕವಾಗಿದೆ. ಸತ್ಯ, ದ್ವಾಪರ, ತ್ರೇತಾ ಈ ಯುಗಗಳಲ್ಲಿ ಎಲ್ಲರೂ ಧರ್ಮಾಚರಣಿಯಾಗಿದ್ದರು; ಆದರೂ ಅವರು ತಮ್ಮ ಜೀವನದ ಸಾವಿರಾರು ವರ್ಷಗಳಲ್ಲಿ ಜ್ಞಾನಯೋಗ, ಧ್ಯಾನಯೋಗ, ತಪಶ್ಚರ್ಯೆ ಇಂತಹ ವಿವಿಧ ಮಾರ್ಗ ಗಳಿಂದ ಸಾಧನೆ ಮಾಡುತ್ತಿದ್ದರು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು