96 ಮಹಿಳೆಯರಿಗೆ ಜೈಲು ಶಿಕ್ಷೆ

ಗುರುಗ್ರಾಮ (ಹರಿಯಾಣ) – ಇಲ್ಲಿ ಕಳೆದ 5 ವರ್ಷಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡ 43.6 ರಷ್ಟು ಸುಳ್ಳು ಎಂದು ತನಿಖೆಯಿಂದ ಬಹಿರಂಗವಾದನಂತರ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಅನೇಕ ಮಹಿಳೆಯರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
1. ಜನವರಿ 1, 2020 ರಿಂದ ಡಿಸೆಂಬರ್ 18, 2024 ರವರೆಗೆ ಗುರುಗ್ರಾಮದಲ್ಲಿ ಒಟ್ಟು 955 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 417 ಪ್ರಕರಣಗಳು ಮದುವೆಯ ಆಮಿಷವೊಡ್ಡಿ ಅತ್ಯಾಚಾರದ ದೂರು ನೀಡಲಾಗಿತ್ತು.
2. ಮಾಹಿತಿ ಹಕ್ಕು ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ ಅವರು, “ಹೆಚ್ಚಿನ ಪ್ರಕರಣಗಳಲ್ಲಿ ಹುಡುಗಿಯರು ತಮ್ಮ ಸ್ವಇಚ್ಛೆಯಿಂದ ದೈಹಿಕ ಸಂಬಂಧ ಹೊಂದಿದ್ದರೂ, ಮದುವೆಯಾಗದ ಹುಡುಗರ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ” ಎಂದು ತನಿಖೆಯಲ್ಲಿ ತಿಳಿದುಬಂದಿದೆ, ಎಂದು ಹೇಳಿದರು.
3. ಗುರುಗ್ರಾಮ ಪೊಲೀಸರಲ್ಲಿ ದಾಖಲಾದ 236 ಪ್ರಕರಣಗಳಲ್ಲಿ, ದೂರುದಾರರು ಮಾಡಿದ ಆರೋಪಗಳಿಗೆ ಯಾವುದೇ ಪುರಾವೆಗಳು ಪೊಲೀಸರಿಗೆ ಸಿಕ್ಕಿಲ್ಲ; ಆದ್ದರಿಂದ ಈ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ.
4. ಸತ್ಯ ಹೊರಬಂದ ನಂತರ, 96 ಪ್ರಕರಣಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಅವರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಸಂಪಾದಕೀಯ ನಿಲುವುಒಂದು ಕಡೆ ಅತ್ಯಾಚಾರಿಗಳಿಗೆ ಈ ದೇಶದಲ್ಲಿ ಕಠಿಣ ಶಿಕ್ಷೆಯಾಗದೆ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ ಇನ್ನೊಂದೆಡೆ ಇಂತಹ ಸುಳ್ಳು ಆರೋಪಗಳನ್ನು ಮಾಡಿ ಹಣ ಗಳಿಸುವ ಮಹಿಳೆಯರಿಗೆ ಶಿಕ್ಷೆಯಾಗುವುದು ಆವಶ್ಯಕ! |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein