ಉತ್ತರಪ್ರದೇಶದಲ್ಲಿ ‘ಲವ ಜಿಹಾದ’ನ ಹೊಸ ಪ್ರಕರಣ ಬಯಲು !

ವಾರಣಾಸಿ (ಉತ್ತರಪ್ರದೇಶ) – ಉತ್ತರಪ್ರದೇಶದ ವಾರಣಾಸಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಮುನಫೇದ ಎಂಬ ಮುಸ್ಲಿಂ ವ್ಯಕ್ತಿಯು ತಾನೊಬ್ಬ ಹಿಂದೂ ಪೊಲೀಸನಾಗಿದ್ದೇನೆ ಎಂದು ನಕಲಿ ಗುರುತು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದಾನೆ. ಆತ ೧೪ ಹಿಂದೂ ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ ಅವರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮುನಫೇದನನ್ನು ಬಂಧಿಸಿದ್ದಾರೆ.
🚨Varanasi : Munfed pretends to be a Hindu Police officer to trap Hindu women in love; extorts crores of rupees
New ‘Love Jihad’ case emerges in Uttar Pradesh
At the very least, BJP-ruled states are expected to be free from Love Jihad. Strict action must be taken in that… pic.twitter.com/EtOgWvwJdk
— Sanatan Prabhat (@SanatanPrabhat) June 15, 2025
೧. ಮುನ್‌ಫೇದ್ ಮಥುರಾ ಜಿಲ್ಲೆಯ ಗೋವರ್ಧನ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಸೇರಸ್ ಗ್ರಾಮದ ನಿವಾಸಿ.
೨. ಮುನಫೇದನು ವಾರಣಾಸಿಯ ಪೊಲೀಸ ಉಪನಿರೀಕ್ಷಕ ದೀಪಕ ರಾಣಾವತ ಮತ್ತು ಮಹಾರಾಜಗಂಜ ಜಿಲ್ಲೆಯ ಪರಾಸಾಮಾಲಿಕ ಪೊಲೀಸ ಠಾಣೆಯ ಉಪನಿರೀಕ್ಷಕ ಅಭಿಜಿತ ಸಿಂಗ ಎಂಬ ಹೆಸರಿನಲ್ಲಿ ನಕಲಿ ಪರಿಚಯವನ್ನು ಸೃಷ್ಟಿಸಿದ್ದನು.
೩. ಆತ ನಕಲಿ ಸಮವಸ್ತ್ರದ ಛಾಯಾಚಿತ್ರ ಮತ್ತು ನಕಲಿ ‘ಫೇಸ್‌ಬುಕ್ ಪ್ರೊಫೈಲ್’ ಬಳಸಿ ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಹರಿಯಾಣ ಮತ್ತು ದೆಹಲಿಯ ಮಹಿಳೆಯರನ್ನು ವಂಚಿಸಿದ್ದಾನೆ.
೪. ಉಪನಿರೀಕ್ಷಕರಾದ ದೀಪಕ ರಾಣಾವತರವರು ಈ ಬಗ್ಗೆ ದೂರು ನೀಡಿದ್ದು, ಯಾರೋ ತಮ್ಮ ಹೆಸರನ್ನು ಬಳಸಿ ಮಹಿಳೆಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ದೂರಿನ ನಂತರ ಪೊಲೀಸರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮುನಫೇದನನ್ನು ಬಂಧಿಸಿದ್ದಾರೆ.
೫. ಮುನಫೇದನು ಈ ವಂಚನೆಯಿಂದ ಪಡೆದ ಹಣದಿಂದ ತನ್ನ ಗ್ರಾಮದಲ್ಲಿ ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಕನಿಷ್ಠ ಭಾಜಪ ಆಡಳಿತವಿರುವ ರಾಜ್ಯಗಳಾದರೂ ಲವ ಜಿಹಾದ ಮುಕ್ತವಾಗಿರಬೇಕು. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ ! |
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ