ಅಪರಾಧಗಳ ಮಾಹಿತಿ ಸಂಗ್ರಹ ಪ್ರಾರಂಭ

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು, ಗಲಭೆಗಳು ಮತ್ತು ಸಂಘರ್ಷಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಇದರ ನೆಪದಲ್ಲಿ, ಹಿಂದುತ್ವನಿಷ್ಠ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ, ಎಂದು ಹೇಳಲಾಗುತ್ತಿದೆ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದ ಇತರ ಎಲ್ಲಾ ಪೊಲೀಸ್ ಠಾಣೆಗಳಿಗೆ ‘ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ 2022 ರಿಂದ 2025 ರವರೆಗಿನ ಎಲ್ಲಾ ದೂರುಗಳ ಮಾಹಿತಿ ನೀಡಲು’ ನಿರ್ದೇಶನ ನೀಡಲಾಗಿದೆ. ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಪತ್ರವನ್ನು ಉಲ್ಲೇಖಿಸಿ, ಪೊಲೀಸ್ ಮಹಾನಿರ್ದೇಶಕರ ಕಚೇರಿಯು ಮಾಹಿತಿ ಕೋರಿರುವ ಪತ್ರ ಬಹಿರಂಗವಾಗಿದೆ.
ರಾಜ್ಯ ಸರಕಾರ ನನ್ನನ್ನು ಹೇಗಾದರು ಮಾಡಿ ಜೈಲಿಗೆ ಹಾಕಲು ಪ್ರಯತ್ನಿಸುತ್ತಿದೆ! – ಚಕ್ರವರ್ತಿ ಸೂಲಿಬೆಲೆ

ಈ ಸಂಬಂಧ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಾಂಗ್ರೆಸ್ ನನ್ನನ್ನು ದ್ವೇಷಿಸುತ್ತದೆ. ಪೊಲೀಸ್ ಮಹಾನಿರ್ದೇಶಕರು ಎಲ್ಲಾ ಪೊಲೀಸ್ ಠಾಣೆಗಳಿಂದ ನನ್ನ ಮಾಹಿತಿ ಕೇಳಿದ್ದಾರೆ. ಅವರು ಯಾವುದೇ ಪರಿಸ್ಥಿತಿಯಲ್ಲಿ ನನ್ನನ್ನು ಜೈಲಿಗೆ ಹಾಕಿ ನನ್ನ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ; ಆದರೆ ನಾನು ಇದಕ್ಕೆ ಹೆದರುವುದಿಲ್ಲ. ನೀವು ನನ್ನನ್ನು ಜೈಲಿಗೆ ಹಾಕಿದರೆ, ನನ್ನ ಬಳಿ ಬಹಳ ದಿನಗಳಿಂದ ಓದದೇ ಇರುವ 15-20 ಪುಸ್ತಕಗಳಿವೆ. ಅವೆಲ್ಲವನ್ನೂ ಓದಿ ನಾನು ಹೊರಬರುತ್ತೇನೆ, ಎಂದು ಹೇಳಿದ್ದಾರೆ.
ಹಿಂದೂ ಕಾರ್ಯಕರ್ತರು ಬೀದಿಗಿಳಿಯುತ್ತಾರೆ! – ಭಾಜಪದ ಮಾಜಿ ಶಾಸಕ ಬಸನಗೌಡ ಪಾಟಿಲ ಯತ್ನಾಳ್

ಚಕ್ರವರ್ತಿ ವಿರುದ್ಧ ಕ್ರಮ ಕೈಗೊಂಡರೆ ಹಿಂದೂ ಕಾರ್ಯಕರ್ತರು ಮತ್ತು ರಾಷ್ಟ್ರವಾದಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ ಎಂದು ನಾನು ಎಲ್ಲಾ ಹಿಂದೂ ಕಾರ್ಯಕರ್ತರು ಮತ್ತು ರಾಷ್ಟ್ರವಾದಿಗಳ ಪರವಾಗಿ ಹೇಳುತ್ತೇನೆ ಎಂದು ಭಾಜಪ ಶಾಸಕ ಬಸವರಾಜ ಯತ್ನಾಳ್ ಹೇಳಿದ್ದಾರೆ.
ಸಂಪಾದಕೀಯ ನಿಲುವುಕಾಂಗ್ರೆಸ್ ಆಡಳಿತದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳು ಯಾವಾಗಲೂ ಕಿರುಕುಳವನ್ನು ಎದುರಿಸಬೇಕಾಗುತ್ತದೆ, ಇದೂ ಸಹ ಅಂತಹದ್ದೇ ಒಂದು ಘಟನೆ! ಕಾಂಗ್ರೆಸ್ ಅನ್ನು ರಾಜಕೀಯವಾಗಿ ಕೊನೆಗಾಣಿಸದೆ ಇಂತಹ ಘಟನೆಗಳು ನಿಲ್ಲುವುದಿಲ್ಲ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!