Bangladesh Yunus Allegations : ಶೇಖ್ ಹಸೀನಾ ಅವರ ಪ್ರಚೋದನಕಾರಿ ಭಾಷಣಗಳ ಮೇಲೆ ಭಾರತ ನಿಯಂತ್ರಣ ಹೇರಿಲ್ಲ!

  • ಲಂಡನ್ ನಲ್ಲಿ ಬಾಂಗ್ಲಾದೇಶದ ಪ್ರಮುಖ ಸಲಹೆಗಾರ ಮಹಮ್ಮದ್ ಯೂನಸ್ ಅವರ ಆರೋಪ

  • ಭಾರತೀಯ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ

ಲಂಡನ (ಬ್ರಿಟನ) – “ನೀವು ಶೇಖ್ ಹಸೀನಾ ಅವರನ್ನು ಭಾರತದಲ್ಲಿ ಇಟ್ಟುಕೊಳ್ಳಲು ಬಯಸಿದರೆ, ನಾನು ನಿಮ್ಮ ಮೇಲೆ ಬಲವಂತ ಮಾಡಲು ಸಾಧ್ಯವಿಲ್ಲ; ಆದರೆ ಅವರು ಬಾಂಗ್ಲಾದೇಶದ ಜನರನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ ಎಂದು ನಾನು ಪ್ರಧಾನಿ ಮೋದಿಯವರಿಗೆ ಹೇಳಿದ್ದೆ. ಇದಕ್ಕೆ ಪ್ರಧಾನಿ ಮೋದಿ ನನಗೆ, ‘ಸಾಮಾಜಿಕ ಮಾಧ್ಯಮಗಳ ಮೇಲೆ ನಾವು ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು. ಇದಕ್ಕೆ ನಾನು ಅವರಿಗೆ, ‘ಇದು ಅಪಾಯಕಾರಿ ಪರಿಸ್ಥಿತಿ’ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ಸಲಹೆಗಾರ ಮಹಮ್ಮದ್ ಯೂನಸ್ ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು. ಅವರು ಮುಂದುವರಿದು, “ನಮಗೆ ಭಾರತದೊಂದಿಗೆ ಉತ್ತಮ ಸಂಬಂಧ ಬೇಕು; ಆದರೆ ಭಾರತೀಯ ಮಾಧ್ಯಮಗಳ ನಕಲಿ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ಅಪಪ್ರಚಾರದಿಂದ ಬಾಂಗ್ಲಾದೇಶ ಚಿಂತಿತವಾಗಿದೆ” ಎಂದು ಹೇಳಿದರು. (ಭಾರತದ ಬಗ್ಗೆ ಯೋಚಿಸುವ ಬದಲು, ಯೂನಸ್ ಅವರು ತಮ್ಮ ದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಯತ್ನಿಸಬೇಕು! – ಸಂಪಾದಕರು)

ಯೂನಸ್ ಅವರು ಮುಂದುವರಿದು, ಬಾಂಗ್ಲಾದೇಶವು ಭಾರತ ಸರಕಾರಕ್ಕೆ ಪತ್ರ ಬರೆದು ಹಸೀನಾ ಅವರ ಗಡಿಪಾರು ಮಾಡುವಂತೆ ಒತ್ತಾಯಿಸಿದೆ. ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಹಸೀನಾ ಅವರ ವಿರುದ್ಧ ಪ್ರಕರಣವನ್ನು ಪ್ರಾರಂಭಿಸಿದೆ. ಅವರ ವಿರುದ್ಧ ಅನೇಕ ಅಪರಾಧಗಳಿಗೆ ನೋಟಿಸುಗಳನ್ನು ಕಳುಹಿಸಲಾಗಿದೆ. ನಾವು ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ, ಎಂದು ಅವರು ತಿಳಿಸಿದರು.

ಸಂಪಾದಕೀಯ ನಿಲುವು

ಶೇಖ್ ಹಸೀನಾ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ಭಾರತಕ್ಕೆ ಏನು ಸಂಬಂಧ? ಹಸೀನಾ ಅವರಿಗೆ ತಮ್ಮ ದೇಶಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಮಾತನಾಡಲು ಸಂಪೂರ್ಣ ಹಕ್ಕಿದೆ ಎಂಬುದನ್ನು ಯೂನಸ್ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು!