Maa Kali Denigration By AMAZON : 2023 ರಿಂದ ಅಮೆಜಾನ್‌ನಲ್ಲಿ ಶ್ರೀಕಾಳಿ ಮಾತೆಯ ಅವಮಾನಕರ ಮುಖಪುಟವಿರುವ ಪುಸ್ತಕ ಮಾರಾಟ !

‘ಕಾಳಿ ಮಾ: ಸಣ್ಣ ಕಥೆಗಳ ಸಂಗ್ರಹ’

(ಈ ಛಾಯಾಚಿತ್ರಗಳನ್ನು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ಪ್ರಕಟಿಸಲಾಗಿಲ್ಲ, ಬದಲಿಗೆ ವಿಡಂಬನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಕಟಿಸಲಾಗಿದೆ. – ಸಂಪಾದಕರು)

ನವದೆಹಲಿ: ಆನ್‌ಲೈನ್ ವಸ್ತು ಮಾರಾಟ ಮಾಡುವ ‘ಅಮೆಜಾನ್’ ವೆಬ್‌ಸೈಟ್‌ನಲ್ಲಿ ‘ಕಾಳಿ ಮಾ: ಎ ಕಲೆಕ್ಷನ್ ಆಫ್ ಶಾರ್ಟ್ ಸ್ಟೋರೀಸ್’ ಎಂಬ ಪುಸ್ತಕವು 2023 ರಿಂದ ಮಾರಾಟವಾಗುತ್ತಿದೆ. ಈ ಪುಸ್ತಕದ ಮುಖಪುಟದಲ್ಲಿ ಶ್ರೀ ಕಾಳಿ ಮಾತೆಯ ಚಿತ್ರವಿದ್ದು, ಅದರಲ್ಲಿ ಶ್ರೀಕಾಳಿ ಮಾತೆಯನ್ನು ಗಲ್ಲಿಗೇರಿಸಿದಂತೆ ತೋರಿಸಲಾಗಿದೆ. ಈ ಪುಸ್ತಕಕ್ಕೆ 2023ರಲ್ಲಿಯೂ ವಿರೋಧ ವ್ಯಕ್ತವಾಗಿತ್ತು; ಆದರೆ ಆಗ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ‘ಭಾರತದಲ್ಲಿ ಹಿಂದೂ ಭಕ್ತರು ಈ ಪುಸ್ತಕದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ’ ಎಂದು ತಿಳಿದಿದ್ದರೂ ಅಮೆಜಾನ್ ಈ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಿದೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದೆ. ಈ ಪುಸ್ತಕವನ್ನು ಎಲ್.ಟಿ. ಫುಲ್ಲಾ ಬರೆದಿದ್ದಾರೆ. ಈ ಪುಸ್ತಕದಲ್ಲಿ ಶ್ರೀ ಕಾಳಿ ಮಾತೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಇದು ಕೇವಲ ಭಯಾನಕ ಕಥೆಯಾಗಿದೆ. ಪ್ರಚಾರಕ್ಕಾಗಿ ಮತ್ತು ಹಿಂದೂಗಳ ಶ್ರದ್ಧೆಯನ್ನು ಅವಮಾನಿಸಲು ಈ ಪುಸ್ತಕಕ್ಕೆ ಶ್ರೀ ಕಾಳಿ ಮಾತೆಯ ಹೆಸರನ್ನು ನೀಡಲಾಗಿದೆ. 2022-23ರಲ್ಲಿ ಅಮೆಜಾನ್ ಭಾರತದಲ್ಲಿ ಸುಮಾರು 27 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರ ಮಾಡಿತ್ತು. (ಇದು ಹಿಂದುಗಳಿಗೆ ಲಜ್ಜಾಸ್ಪದ ! -ಸಂಪಾದಕರು)

ಅಮೆಜಾನ್‌ನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಕೆಲವು ಘಟನೆಗಳು

1. 2020 ರಲ್ಲಿ ಹಿಂದೂ ದೇವತೆಗಳ ವಿಡಂಬನಾತ್ಮಕ ಚಿತ್ರಗಳಿರುವ ಆಕ್ಷೇಪಾರ್ಹ ಉತ್ಪನ್ನಗಳು ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದವು.

2. 2021ರಲ್ಲಿ ಅಮೆಜಾನ್‌ನ ವೆಬ್ ಸರಣಿ ‘ತಾಂಡವ್’ ಭಗವಾನ್ ಶಿವನನ್ನು ಅವಮಾನಿಸಿರುವ ಕುರಿತು ಆರೋಪವಿತ್ತು.

3. 2022ರಲ್ಲಿ ಅಮೆಜಾನ್‌ನಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿದ ಮಹಿಳೆಯರ ಆಕ್ಷೇಪಾರ್ಹ ಉಡುಪುಗಳನ್ನು ಮಾರಾಟ ಮಾಡಲಾಗುತ್ತಿತ್ತು.

4. 2023ರಲ್ಲಿ ಅಮೆಜಾನ್ ರಕ್ಷಾಬಂಧನವನ್ನು ‘ಬ್ರದರ್-ಸಿಸ್ಟರ್ ಡೇ’ ಎಂದು ಪ್ರಚಾರ ಮಾಡಿತ್ತು, ಇದನ್ನು ವಿರೋಧಿಸಲಾಗಿತ್ತು.

5. 2024ರಲ್ಲಿ ಅರಿಶಿನ-ಕುಂಕುಮವಿರುವ ಪೂಜಾ ತಟ್ಟೆಯನ್ನು ‘ಅಲಂಕಾರಿಕ ತಟ್ಟೆ’ ಎಂದು ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

#BoycottAmazon

ಸಂಪಾದಕೀಯ ನಿಲುವು

ಅಮೆಜಾನ್‌ನ ಈಗಿನ ಇತಿಹಾಸವನ್ನು ಗಮನಿಸಿದರೆ, ಭಾರತದಲ್ಲಿ ಅದನ್ನು ನಿಷೇಧಿಸುವುದು ಅವಶ್ಯಕವಾಗಿದೆ. ಹಿಂದೂಗಳು ಹಲವು ಬಾರಿ ಅಮೆಜಾನ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ, ಆದರೂ ಅಮೆಜಾನ್‌ನ ಹಿಂದೂ ವಿರೋಧಿ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ಹಿಂದೂಗಳು ಅಮೆಜಾನ್ ಅನ್ನು ಬಹಿಷ್ಕರಿಸುವುದು ಅವಶ್ಯಕವಾಗಿದೆ!