|

ಮುಂಬಯಿ, ಜೂನ್ 12 – ಸರಕಾರದ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆದು, ಅದರ ಲಾಭವನ್ನು ಬಡ ಮತ್ತು ನಿರ್ಗತಿಕ ರೋಗಿಗಳಿಗೆ ನೀಡಲು ನಿರಾಕರಿಸುವ ರಾಜ್ಯದ ಉದ್ಧಟ ಆಸ್ಪತ್ರೆಗಳನ್ನು ಸರಿದಾರಿಗೆ ತರಲು ಆಸ್ಪತ್ರೆಗಳ ನಿರ್ಗತಿಕ ನಿಧಿಗಳ ಪರಿಶೀಲನೆ ನಡೆಸಲು ಸರಕಾರ ನಿರ್ಧರಿಸಿದೆ. ಇದರೊಂದಿಗೆ, ಬಡನಿರ್ಗತಿಕರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮುಂಭಾಗದಲ್ಲಿ ರಿಯಾಯಿತಿಗಳ ಮಾಹಿತಿ ಫಲಕಗಳನ್ನು ರಾಜ್ಯ ಸರಕಾರವೇ ಅಳವಡಿಸಲಿದೆ.
ಧಮ್ದಾಯ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಬಡ ಮತ್ತು ನಿರ್ಗತಿಕರಿಗೆ ಚಿಕಿತ್ಸೆ ದೊರೆಯಬೇಕು ಎಂಬುದು ಸರಕಾರದ ಯೋಜನೆಯಾಗಿದೆ; ಆದರೆ, ರಾಜ್ಯದ ಹಲವು ಧರ್ಮದಾಯ ಆಸ್ಪತ್ರೆಗಳು ಸರಕಾರದ ಕಡೆಯಿಂದ ಸೌಲಭ್ಯಗಳನ್ನು ಪಡೆದು, ವಾಸ್ತವವಾಗಿ ರೋಗಿಗಳಿಗೆ ರಿಯಾಯಿತಿಗಳನ್ನು ನೀಡುವುದಿಲ್ಲ. ಈ ಬಗ್ಗೆ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದರೂ, ಈ ಆಸ್ಪತ್ರೆಗಳು ಕಾನೂನಿಗೂ ಬಗ್ಗುವುದಿಲ್ಲ. ಆದ್ದರಿಂದ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆದೇಶದ ಮೇರೆಗೆ, ಧರ್ಮದಾಯ ಆಸ್ಪತ್ರೆಗಳಲ್ಲಿನ ಯೋಜನೆಗಳ ಶೇಕಡಾ ನೂರರಷ್ಟು ಲಾಭ ದೊರೆಯುವಂತೆ ಮಾಡಲು ಈ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಸಂಪಾದಕೀಯ ನಿಲುವುಸರಕಾರದಿಂದ ಭೂಮಿ, ನಿಧಿ ಮತ್ತು ಅನೇಕ ಸೌಲಭ್ಯಗಳನ್ನು ಪಡೆದು ಉದ್ಧಟತನ ತೋರಿಸುವ ಆಸ್ಪತ್ರೆಗಳಿಗೆ ಬೀಗ ಜಡಿಯಲು ಸರಕಾರ ಹಿಂದೇಟು ಹಾಕಬಾರದು, ಹೀಗಾದರೆ ಮಾತ್ರ ಇಂತಹ ಉದ್ಧಟ ಆಸ್ಪತ್ರೆಗಳು ಸರಿದಾರಿಗೆ ಬರುತ್ತವೆ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ