
೧. ಗುರುವು ಭೋಗಾಸಕ್ತ ಮತ್ತು ವಿಲಾಸಿ ಜೀವನದಲ್ಲಿ ಮುಳುಗಿರಬಾರದು. ಅವನು ವಿರಕ್ತನಾಗಿರಬೇಕು.
೨. ಜನಪ್ರಿಯತೆ, ವಿತ್ತೇಷಣಾ (ಧನದ ಆಸೆ) ಮತ್ತು ದಾರೇಷಣಾ (ಪತ್ನಿಯ ಆಸೆ) ಈ ಮೂರು ಇಚ್ಛೆಗಳಿಂದ ಮುಕ್ತರಾಗಿರಬೇಕು.
೩. ಅವನು ಆತ್ಮಜ್ಞಾನಿಯಾಗಿರಬೇಕು.
೪. ಇನ್ನೊಂದು ಮುಖ್ಯ ಅಂಶವೆಂದರೆ, ಗುರುಗಳು ನೀಡಿದ ಉಪದೇಶವು ಶಾಸ್ತ್ರಾಧಾರಿತವಾಗಿರಬೇಕು. ಇದೇ ಗುರುತ್ವದ ಮುಖ್ಯ ಗುರು ಬೀಗದ ಕೈ !
ಚಮತ್ಕಾರ
‘ಯಾವುದರ ಕಾರ್ಯಕಾರಣಭಾವವು ನಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಅರ್ಥವಾಗುವುದಿಲ್ಲವೋ, ಅದೇ ಚಮತ್ಕಾರ ! ಯಾವುದೇ ಕಾರ್ಯವು ಕಾರಣವಿಲ್ಲದೆ ನಡೆಯುವುದಿಲ್ಲ. ಆ ಕಾರಣವು ನಮಗೆ ತಿಳಿಯುವುದಿಲ್ಲ ಅಥವಾ ನಮಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ; ಹಾಗಾಗಿ ನಮಗೆ ಒಂದು ಘಟನೆ ಚಮತ್ಕಾರದಂತೆ ಅನಿಸುತ್ತದೆ.’
– ಶೇವಡೇ ಅವರ ಅಮೆರಿಕದ ಪ್ರವಚನಗಳು (ಬ್ಯಾಟನ್‌ರೂಜ್ ೧೧.೭.೧೯೮೦)