ವ್ಯಾಯಾಮಶಾಲೆಗಳಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ

ಭೋಪಾಲ್ (ಮಧ್ಯಪ್ರದೇಶ) – ಭೋಪಾಲ್‌ನ ಟಿಐಟಿ ಕಾಲೇಜಿನಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ ಬಂದ ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ‘ಜಿಮ್ ಜಿಹಾದ್’ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿವೆ. ಈ ಅಭಿಯಾನದ ಅಡಿಯಲ್ಲಿ ನಗರದ ವ್ಯಾಯಾಮಶಾಲೆಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಗುತ್ತಿದೆ ಮತ್ತು ವ್ಯಾಯಾಮಶಾಲೆಗಳ ಮಾಲೀಕರಿಂದ ‘ಲವ್ ಜಿಹಾದ್’ನಂತಹ ಪ್ರಕರಣಗಳಿಗೆ ಬೆಂಬಲ ನೀಡದಿರುವ ಪ್ರತಿಜ್ಞೆಯನ್ನು ಮಾಡಿಸಲಾಗುತ್ತಿದೆ. ಅನೇಕ ಮಾಲೀಕರು ಇದನ್ನು ಬೆಂಬಲಿಸಿ ಪ್ರತಿಜ್ಞೆ ಮಾಡಿದ್ದಾರೆ. ಈ ಅಭಿಯಾನವು ಸದ್ಯ ರಾಜಧಾನಿ ಭೋಪಾಲ್‌ನಲ್ಲಿ ಪ್ರಾರಂಭವಾಗಿದ್ದರೂ, ರಾಜ್ಯದ ಇತರ ನಗರಗಳಲ್ಲೂ ಇದನ್ನು ಜಾರಿಗೊಳಿಸಲಾಗುವುದು.
ಕೆಲವು ಮುಸ್ಲಿಂ ತರಬೇತುದಾರರು ವೈಯಕ್ತಿಕ ತರಬೇತಿಯ ಹೆಸರಿನಲ್ಲಿ ಹಿಂದೂ ಹುಡುಗಿಯರೊಂದಿಗೆ ನಿಕಟ ಸಂಬಂಧ ಬೆಳೆಸಿ, ಅವರನ್ನು ‘ಲವ್ ಜಿಹಾದ್’ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದು ಬಜರಂಗ ದಳ ಆರೋಪಿಸಿದೆ.
ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಕೆಲವು ವ್ಯಾಯಾಮಶಾಲೆಗಳಿಗೆ ಮಾಹಿತಿ ಪಡೆಯಲು ಹೋಗಿದ್ದರು; ಆದರೆ ಯಾರ ಮೇಲೂ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಇಲ್ಲ.

ರಾಜ್ಯದಲ್ಲಿ ಭಾಜಪ ಸರಕಾರವಿದ್ದರೂ ಇಂತಹ ಅಭಿಯಾನದ ಅಗತ್ಯವೇನು? – ಕಾಂಗ್ರೆಸ್ ಪ್ರಶ್ನೆ
ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶ ಸರಕಾರದ ಮಾಜಿ ಕಾನೂನು ಸಚಿವ ಪಿ.ಸಿ. ಶರ್ಮಾ ಅವರು ಈ ಅಭಿಯಾನವನ್ನು ಟೀಕಿಸುತ್ತಾ, ಮಧ್ಯಪ್ರದೇಶದಲ್ಲಿ ಬಜರಂಗ ದಳದ (ಭಾಜಪದ್ದೇ) ಸರಕಾರವಿದೆ. ಲವ್ ಜಿಹಾದ್ ವಿರೋಧಿ ಕಾನೂನನ್ನೂ ಇದೇ ಸರಕಾರ ಮಾಡಿದೆ, ಹಾಗಾದರೆ ಇಂತಹ ಅಭಿಯಾನದ ಅಗತ್ಯವೇನು? ಬಜರಂಗ ದಳ ಅನಾವಶ್ಯಕವಾಗಿ ನಾಯಕತ್ವ ಪ್ರದರ್ಶಿಸಬಾರದು ಮತ್ತು ಕಾನೂನು ಸುವ್ಯವಸ್ಥೆಯ ಕೆಲಸವನ್ನು ಆಡಳಿತಕ್ಕೆ ಬಿಡಬೇಕು ಎಂದು ಹೇಳಿದ್ದಾರೆ.
ವ್ಯಾಯಾಮಶಾಲೆಗಳಲ್ಲಿ ಮಹಿಳೆಯರಿಗಾಗಿ ಮಹಿಳಾ ತರಬೇತುದಾರರೇ ಇರಬೇಕು! – ಸಂಸದ ಅಲೋಕ್ ಶರ್ಮಾ
ಭೋಪಾಲ್‌ನ ಭಾಜಪ ಸಂಸದ ಅಲೋಕ್ ಶರ್ಮಾ ಅವರು, ಭೋಪಾಲ್‌ನ ವ್ಯಾಯಾಮಶಾಲೆಗಳ ತರಬೇತುದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಪೊಲೀಸರಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
Bhopal, Madhya Pradesh: On Bhopal Shooting Academy case, BJP MP Alok Sharma says, “Cases of love jihad are continuously emerging in Bhopal, Madhya Pradesh. Just as Mohsin’s name has come up in the academy, similarly, Farhan’s name has surfaced in a love jihad case in a Bhopal… pic.twitter.com/WY767rIaZN
— IANS (@ians_india) June 2, 2025
ಮಹಿಳೆಯರಿಗಾಗಿ ಮಹಿಳಾ ತರಬೇತುದಾರರೇ ಇರಬೇಕು. ಮಧ್ಯಪ್ರದೇಶದಲ್ಲಿ ಮೋಹನ ಯಾದವ ಅವರ ಸರಕಾರವಿದೆ. ಇಲ್ಲಿ ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !