ಶಿವರಾಜ್ಯಾಭಿಷೇಕ ದಿನಕ್ಕೆ ಅನುಮತಿ ನಿರಾಕರಿಸಲಾಯಿತು!

ಕೊಲ್ಲಾಪುರ – ವಿಶಾಳಗಡದಲ್ಲಿ ಯಾವುದೇ ಹಬ್ಬ ಅಥವಾ ಉತ್ಸವ ನಡೆಯುವುದಿಲ್ಲ ಎಂದು ಕೊಲ್ಲಾಪುರದ ಪೊಲೀಸ್ ಅಧೀಕ್ಷಕ ಯೋಗೇಶ ಕುಮಾರ್ ಗುಪ್ತಾ ಆದೇಶ ಹೊರಡಿಸಿದ್ದಾರೆ. ಇದರಿಂದ ಜೂನ್ 7 ರಂದು ಬಕ್ರೀದ್ ನಿಮಿತ್ತ ನಡೆಯುವ ಉರುಸ್ ಮತ್ತು ಕೊಡಲಾಗುವ ಕುರ್ಬಾನಿ ಹಾಗೂ ಜೂನ್ 9 ರಂದು ತಿಥಿಯನುಸಾರ ಆಚರಿಸಲಾಗುವ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ದಿನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಜೂನ್ 6 ರಂದು ಜಿಲ್ಲಾಧಿಕಾರಿಗಳಿಗೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಯಾವುದೇ ಅಸಮರ್ಪಕ ಕೃತ್ಯ ನಡೆದರೆ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು. ಇದರೊಂದಿಗೆ ‘ಹಿಂದೂ ಏಕತಾ ಆಂದೋಲನ’ದ ಶ್ರೀ. ನಿತಿನ ಶಿಂದೆ ಅವರು ಜೂನ್ 5 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಉರುಸ್ ನಡೆದರೆ ಅದನ್ನು ತಡೆಯುವ ಎಚ್ಚರಿಕೆ ನೀಡಿದ್ದರು.
ಎರಡು ದಿನಗಳ ಹಿಂದೆ ಉಚ್ಚ ನ್ಯಾಯಾಲಯವು ವಿಶಾಳಗಡದಲ್ಲಿ ಬಕ್ರೀದ್ ಕುರ್ಬಾನಿಗೆ ಅನುಮತಿ ನೀಡಿತ್ತು. ಈ ನಿರ್ಧಾರದ ವಿರುದ್ಧ ಜಿಲ್ಲಾಡಳಿತವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ನ್ಯಾಯಾಲಯದಲ್ಲಿ ಈ ಹಿಂದಿನ ಘಟನೆಗಳನ್ನು ಉಲ್ಲೇಖಿಸಲಾಗಿದೆ; ಆದರೆ ಈ ಪ್ರಕರಣದ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಶಾಹುವಾಡಿ ತಾಲೂಕಿನ ವಿಶಾಳಗಡದಲ್ಲಿ ಪ್ರಾಣಿ ಬಲಿದಾನಕ್ಕೆ ನಿಷೇಧ ಹೇರುವ ಆದೇಶವನ್ನು ಪುರಾತತ್ವ ಇಲಾಖೆ ಹೊರಡಿಸಿತ್ತು. ‘ಮಹಾರಾಷ್ಟ್ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ನಿಯಮಗಳು, 1962’ ರ ಪ್ರಕಾರ ಕೋಟೆಗಳ ಪ್ರದೇಶದಲ್ಲಿ ಆಹಾರ ಬೇಯಿಸುವುದು ಮತ್ತು ಸೇವಿಸುವುದನ್ನು ನಿಷೇಧಿಸಲಾಗಿತ್ತು. ಈ ಆದೇಶವನ್ನು ಕೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಜಾರಿಗೊಳಿಸಲು ತಿಳಿಸಲಾಗಿತ್ತು.
ಸಂಪಾದಕೀಯ ನಿಲುವುಬಕ್ರೀದ್ ನಿಮಿತ್ತ ನಡೆಯುವ ಉರುಸ್‌ಗೆ ಅನುಮತಿ ನಿರಾಕರಿಸುವ ಸರಿಯಾದ ನಿರ್ಧಾರವನ್ನು ನೀಡುವಾಗ ದಿನಕ್ಕೂ ಆಚರಿಸಲು ಬಿಡದಿರುವುದು ಜಾತ್ಯತೀತತೆಯಲ್ಲ, ಇದು ಕೇವಲ ಹಿಂದೂ ದ್ವೇಷವಾಗಿದೆ. ಇದನ್ನು ಹಿಂದುತ್ವನಿಷ್ಠರು ವಿರೋಧಿಸಬೇಕು! ದಿನವನ್ನು ವಿಶಾಳಗಡದಲ್ಲಿ ಆಚರಿಸದೆ ಪಾಕಿಸ್ತಾನದಲ್ಲಿ ಆಚರಿಸಬೇಕೇ? |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”