
ಹೈದ್ರಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ದೇವಸ್ಥಾನಕ್ಕೆ ಸೇರಿದ 6 ಎಕರೆ ಭೂಮಿಯನ್ನು ಅತಿಕ್ರಮಿಸುವುದರ ವಿರುದ್ಧ ಹಿಂದೂಗಳು ಮೋಸೆಸ್ ಖಟಿಯನ ಜಿಲ್ಲೆಯ ಟಾಂಡೋ ಜಾಮ ಸಿಟಿಯ ಪ್ರೆಸಕ್ಲಬನ ಹೊರಗೆ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಭಾಗವಹಿಸಿದ್ದರು. ‘ಪಾಕಿಸ್ತಾನ ದಲಿತ ಇತ್ತೆಹಾದ’ ಸಂಘಟನೆಯ ಕರೆಯ ಮೇರೆಗೆ ಈ ಪ್ರತಿಭಟನೆ ನಡೆಯಿತು. ಕಟ್ಟಡ ನಿರ್ಮಾಣ ಮಾಡುವವರು ಶಿವ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಕೂಡ ಬಂದ್ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
1. ಹಿಂದೂಗಳ ನಾಯಕ ಸಿಟಲ ಮೇಘವಾರರವರು, ಕೆಲವು ಜನರು ಮೋಸೆಸ್ ಖಟಿಯಾನನಲ್ಲಿರುವ ಶಿವ ದೇವಸ್ಥಾನದ ಭೂಮಿಯಲ್ಲಿ ಅಕ್ರಮ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
2. ಮತ್ತೊಬ್ಬ ನಾಯಕರಾದ ರಾಮ ಸುಂದರ ರವರು ಮಾತನಾಡಿ, ದೇವಸ್ಥಾನವು ನಮಗೆ ಪವಿತ್ರವಾಗಿದೆ ಮತ್ತು ಕಟ್ಟಡ ನಿರ್ಮಾಣ ಮಾಡುವವರು ದೇವಸ್ಥಾನದ ಸುತ್ತಮುತ್ತಲಿನ ಭೂಮಿಯಲ್ಲಿ ನಿರ್ಮಾಣಕಾರ್ಯವನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಸಮುದಾಯದ ಸ್ಮಶಾನ ಭೂಮಿಯೂ ಸೇರಿದೆ ಎಂದು ಹೇಳಿದರು.
3. ಪಾಕಿಸ್ತಾನ ದಲಿತ ಇತ್ತೆಹಾದನ ಮುಖ್ಯಸ್ಥರಾದ ಶಿವ ಕಾಚಿಯವರು ಮಾತನಾಡಿ, ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಲಿಖಿತ ದೂರು ನೀಡಿದ ನಂತರವೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಸರಕಾರ ಮತ್ತು ಸ್ಥಳೀಯ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನ ಹರಿಸದಿದ್ದರೆ, ಮುಂದಿನ ಹಂತದಲ್ಲಿ ಹೈದರಾಬಾದ ನಗರದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಮತ್ತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು, ಎಂದು ಹೇಳಿದರು.
100 ವರ್ಷಗಳ ಹಳೆಯ ದೇವಸ್ಥಾನ.
ಈ ಶಿವ ದೇವಸ್ಥಾನವು 100 ವರ್ಷಗಳಷ್ಟು ಹಳೆಯದಾಗಿದೆ. ದೇವಸ್ಥಾನದ ಸುತ್ತಮುತ್ತಲಿನ 4 ಎಕರೆ ಜಾಗವನ್ನು ನಿರ್ವಹಿಸಲು ಒಂದು ಸಮಿತಿಯಿದೆ. ದೇವಸ್ಥಾನದ ಸಮೀಪ ಹಿಂದೂಗಳ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ದೇವಸ್ಥಾನದಲ್ಲಿ ವಾರ್ಷಿಕ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿನ ಹಿಂದೂಗಳ ಮೇಲಿನ ಅನ್ಯಾಯ ಯಾವಾಗ ನಿಲ್ಲುತ್ತದೆ ? |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್