|

ನವದೆಹಲಿ – ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಗಾಳ ಪೊಲೀಸರು ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿಯನ್ನು ಬಂಧಿಸಿದ್ದರು. ಕೋಲಕಾತಾದ ‘ರಶಿದಿ ಫೌಂಡೇಶನ್’ ಸಂಸ್ಥೆಯ ಸಹ-ಸಂಸ್ಥಾಪಕ ವಝಾಹತ್ ಖಾನ್ ಕಾದರಿ ರಶಿದಿ ಅವರು ನೀಡಿದ ಪೊಲೀಸ್ ದೂರಿನ ನಂತರ ಈ ಬಂಧನ ನಡೆಯಿತು. ರಶಿದಿ ಸ್ವತಃ ಕಟ್ಟರ ಹಿಂದೂ ವಿರೋಧಿಯಾಗಿದ್ದು, ಅವನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಂದೂ ಧರ್ಮ, ದೇವತೆಗಳು ಮತ್ತು ಪವಿತ್ರ ಸ್ಥಳಗಳ ಬಗ್ಗೆ ನಿರಂತರವಾಗಿ ಅಶ್ಲೀಲ ಮತ್ತು ಅವಮಾನಕರ ಭಾಷೆಯನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಪ್ರಖರ ಹಿಂದುತ್ವನಿಷ್ಠ ವಕೀಲ ವಿನೀತ ಜಿಂದಾಲ ಮತ್ತು ವಕೀಲೆ ಅಮಿತಾ ಸಚದೆವ ಅವರು ದೆಹಲಿ ಪೊಲೀಸರಿಗೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ.
೧. ವಕೀಲ ವಿನೀತ ಜಿಂದಾಲ ಅವರು ದೆಹಲಿ ಪೊಲೀಸ್ ಮತ್ತು ಸೈಬರ್ ವಿಭಾಗಕ್ಕೆ ಸಲ್ಲಿಸಿದ ದೂರಿನಲ್ಲಿ, ವಝಾಹತ್ ಖಾನ್ ಕಾದರಿ ರಶಿದಿಯು ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಕೃಷ್ಣ ಸೇರಿದಂತೆ ಅನೇಕ ಹಿಂದೂ ದೇವತೆಗಳ ಬಗ್ಗೆ ಲೈಂಗಿಕ ಸ್ವರೂಪದ ಅತ್ಯಂತ ಅಶ್ಲೀಲ ಹೇಳಿಕೆಗಳು, ಧಾರ್ಮಿಕ ವೈಷಮ್ಯ ಹೆಚ್ಚಿಸುವ ಸಂದೇಶಗಳು ಹಾಗೂ ಹಿಂದೂ ಹಬ್ಬಗಳು ಮತ್ತು ದೇವಸ್ಥಾನಗಳ ಬಗ್ಗೆ ಅವಮಾನಕರ ಪದಗಳನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.
೨. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತೆ ಮತ್ತು ಸುಪ್ರೀಂ ಕೋರ್ಟ್ ವಕೀಲೆ ಅಮಿತಾ ಸಚದೆವ ಅವರು ಕೂಡ ಕೊಲಕಾತಾದ ವಝಾಹತ್ ಖಾನ್ ವಿರುದ್ಧ ಸಾಕೆತ್ ಪೊಲೀಸ್ ಠಾಣೆಯ ಸೈಬರ್ ವಿಭಾಗದಲ್ಲಿ ಇದೇ ರೀತಿಯ ದೂರು ದಾಖಲಿಸಿದ್ದಾರೆ.
ರಶಿದಿಯಿಂದ ಹಿಂದೂ ವಿರೋಧಿ ಪೋಸ್ಟ್‌ಗಳನ್ನು ಅಳಿಸಲು ಆರಂಭ!
ಸಿಕ್ಕಿರುವ ಮಾಹಿತಿ ಪ್ರಕಾರ, ರಶಿದಿ ತನ್ನ ಹಿಂದೂ ಧರ್ಮ ವಿರೋಧಿ ಪೋಸ್ಟ್‌ಗಳು ಮತ್ತು ದೇವತೆಗಳ ಬಗ್ಗೆ ನೀಡಿದ ಅವಮಾನಕರ ಹೇಳಿಕೆಗಳನ್ನು ‘ಡಿಲೀಟ್’ ಮಾಡಲು ಆರಂಭಿಸಿದ್ದಾನೆ. ಶರ್ಮಿಷ್ಠಾ ಪನೋಲಿ ಕೂಡ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದರೂ, ಬಂಗಾಳ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆದರೆ ಈಗ ರಶಿದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂಪಾದಕೀಯ ನಿಲುವುಮುಸ್ಲಿಮರ ಪವಿತ್ರ ಸ್ಥಳಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದರೆ, ಸಂಬಂಧಪಟ್ಟ ಹಿಂದೂಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ; ಆದರೆ ಹಿಂದೂಗಳ ಪವಿತ್ರ ಸ್ಥಳಗಳಿಗೆ ಎಷ್ಟು ಬೇಕಾದರೂ ಕೆಸರು ಎರಚಿದರೂ, ಸಂಬಂಧಪಟ್ಟ ಜನರು ಸಮಾಜದಲ್ಲಿ ಯಾವುದೇ ಅಳುಕಿಲ್ಲದೆ ಓಡಾಡುತ್ತಾರೆ. ‘ನಾಳೆ ದೇಶಾದ್ಯಂತದ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಸಂಘಟಿತವಾಗಿ ಅವಮಾನ ಮಾಡಲು ನಿರ್ಧರಿಸಿದರೆ ಮತ್ತು ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಅದಕ್ಕೆ ಸರಕಾರ, ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆಯೇ ಹೊಣೆಯಾಗಿರುತ್ತದೆ’ ಎಂದು ಯಾರಾದರೂ ಕೋಪದಿಂದ ಹೇಳಿದರೆ, ಅದರಲ್ಲಿ ತಪ್ಪೇನು? |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case