ಜೂನ್ 5 ರಂದು ಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಸ್ಥಾಪನೆ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಭವ್ಯ ಶ್ರೀರಾಮ ಮಂದಿರದ ಶಿಖರದ ಮೇಲೆ ಚಿನ್ನದ ಲೇಪಿತ ಕಳಸವನ್ನು ಪ್ರತಿಷ್ಠಾಪಿಸಲಾಗಿದೆ. ಜೂನ್ 5 ರಂದು ಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಸ್ಥಾಪನೆಯಾಗಲಿದೆ. ಇದರಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾ ಸಿಂಹಾಸನದ ಮೇಲೆ ವಿರಾಜಮಾನರಾಗಲಿದ್ದು, ಭರತ ಮತ್ತು ಹನುಮಾನ ಭಗವಾನ್ ಶ್ರೀರಾಮನ ಪಾದಗಳ ಬಳಿ ಕುಳಿತುಕೊಂಡಿದ್ದಾರೆ. ಇದಕ್ಕಾಗಿ ವಿಧಿವಿಧಾನಗಳು ಜೂನ್ 3 ರಿಂದ ಪ್ರಾರಂಭವಾಗಲಿವೆ. ರಾಮ ದರ್ಬಾರನೊಂದಿಗೆ 7 ಮಂದಿರಗಳ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ‘ಗಂಗಾ ದಶಹರಾ’ ದಿನದಂದು ಅಭಿಜಿತ್ ಮುಹೂರ್ತದಲ್ಲಿ ಬೆಳಿಗ್ಗೆ 11 ಗಂಟೆಗೆ ಪೂಜೆ ಪ್ರಾರಂಭವಾಗಲಿದೆ. ಅಯೋಧ್ಯೆ ಮತ್ತು ಕಾಶಿಯ 101 ಆಚಾರ್ಯರು ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉಪಸ್ಥಿತರಿರಲಿದ್ದಾರೆ.
ಮಂದಿರದ ಆವರಣದಲ್ಲಿರುವ 6 ಮಂದಿರಗಳಲ್ಲಿ ಭಗವಾನ ಸೂರ್ಯ, ಶ್ರೀ ಗಣೇಶ, ಶ್ರೀ ಹನುಮಾನ, ಭಗವಾನ ಶಿವ, ಮಾತಾ ಭಗವತಿ ಮತ್ತು ಮಾತಾ ಅನ್ನಪೂರ್ಣೆಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಮಂದಿರಗಳಲ್ಲಿ ಜೂನ್ 5 ರಂದು ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದರ ಜೊತೆಗೆ, ಸಪ್ತ ಮಂಡಪದಲ್ಲಿ 7 ಮಂದಿರಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಸಿಷ್ಠ, ನಿಷಾದರಾಜ, ಅಹಲ್ಯಾ ಮತ್ತು ಶಬರಿ ಅವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ